ಗಹನ ವಿಷಯಗಳ ಸರಳವಾಗಿ ಮನಮುಟ್ಟುವಂತೆ ಹೇಳುವುದು ಒಂದು ಕಲೆ. ಶರತ್ ಇಲ್ಲಿ ಹೇಳಿದ ವಿಷಯಗಳು ನಾವಾಗೇ ಗೂಗಲಿಸಿ ಅಥವಾ ಓದಲು ಹೊರಟರೆ ತಲೆಯ ಮೇಲಿಂದ ಹಾರುವಂತಹವು. ಗುರುತ್ವದಂತಹ ವಿಷಯವನ್ನು ಮಣಿಶಂಕರ್ ಅಯ್ಯರ್,ದಿಗ್ವಿಜಯ ಸಿಂಗ್,ಸೋನಿಯಾ ಗಾಂಧಿ ಉದಾಹರಣೆ ಕೊಟ್ಟು ಕಚಗುಳಿ ಇಡಿಸಿ ವಿವರಿಸುವ ಅವರ ಶೈಲಿ ಅನನ್ಯ.
ಮಧ್ಯಾಹ್ನದ ನಿದ್ದೆ ಆದ ಬಳಿಕ ಸಂಜೆ ಚಾ ಕುಡಿಯುವಾಗ ಮನೆಗೆ ನೆಂಟರು ಬಂದರೆ ಅವರ ಜೊತೆ ಪಟ್ಟಾಂಗ ಹಾಕುವ ಶೈಲಿಯ ಇವರ ಲೇಖನಗಳು,ಸಿನಿಮಾದಂತೆ ಮಧ್ಯಂತರವೂ ಹೊಂದಿದೆ. ಅದಲ್ಲದೆ ಉದಾಹರಣೆಗೆ ನಾವು ದಿನನಿತ್ಯ ಅನುಭವಿಸಿದ್ದನ್ನೇ ತರುವ ಕಾರಣ ವಿಷಯಗಳು ಸರಳವಾಗಿ ಒಳಗಿಳಿಯುತ್ತವೆ. ಇಲ್ಲಿನ ಹಲ ಲೇಖನಗಳ ಅವರ ಫೇಸ್ಬುಕ್ ಗೋಡೆಯ ಮೇಲೆ ಓದಿದ್ದೆ.ಮೆಚ್ಚಿದ್ದೆ. ನಂಗಿರೋ ಒಂದೇ ಒಂದು ಸಂಶಯ ಎಂದರೆ ಶರತ್‍ಗೆ ತಾನು ಅನಗತ್ಯವಾಗಿ ಲಂಬಿಸುತ್ತೇನೋ ಎಂಬ ಅನುಮಾನವಿದೆ.ಹಾಗಾಗಿ ನಡು ನಡುವೆ ವಾಚಕ ಮಹಾಶಯರ ಮತ್ತೆ ಮೊದಲ ಸಾಲಿನ ಕಡೆಗೆ ಕರೆದೊಯ್ದು ಬರುತ್ತಾರೆ. ಇದು ಕೆಲ ಕಡೆ ಓದಿನ ರುಚಿ ಹೆಚ್ಚಿಸಿದರೆ ಕೆಲಕಡೆ ಬೇಡ ಅನಿಸುತ್ತದೆ. ಆದರೆ ಇದು ಗಬ ಗಬನೆ ಓದುವವರಿಗೆ ಮಾತ್ರ ಆಗುವ ಅನಿಸಿಕೆ. ಒಂದು ಲೇಖನ ಸಾವಧಾನದಿಂದ ಓದುವ ಓದುಗ ಇದನ್ನು ಎಂಜಾಯ್ ಮಾಡೇ ಮಾಡ್ತಾನೆ.
ಪುಸ್ತಕ ನಂಗೆ ಬಹಳ ಹಿಡಿಸಿತು. ಬಹುಶಃ ಅವರ ಗೆಳೆಯರ ಬಳಗದಲ್ಲಿ ನೀವಿಲ್ಲದೆ ಇದ್ದರೆ ಇದನ್ನು ಓದಲು ಸಕಾಲ. ಸದ್ಯದಲ್ಲಿ ನಾನು ಓದಿದ ಅತ್ಯುತ್ತಮ ಜ್ಞಾನ ಮತ್ತು ಮನಸಿಗೆ ಹಾಯೆನಿಸಿದ ಪುಸ್ತಕಗಳಲ್ಲಿ ಇದೂ ಒಂದು. ಮರೆಯದೆ ಓದಿ. ಓದಿಸಿ