ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.
ಬೆಂಗಳೂರಿನ ಆಟೋರಾಜರ ಕಥೆಗಳು.. ಓದುತ್ತಾ ಸಕ್ಕತ್ ಆಗಿ ಇಷ್ಟ ಆಗ್ತಾ ಹೋಗುತ್ತೆ.. ಅದರಲ್ಲೂ ಲೇಖಕಿಯ ಬರಹದ ಶೈಲಿಯಲ್ಲಿ ಒಂದಿಷ್ಟು ನಗೆ, ತರಲೆ, ಮುನಿಸು, ನೋವು, ಅಬ್ಬರ,ಗಲಾಟೆ ಮುಂತಾದ ಎಲ್ಲಾ ‘ನವರಸ’ಗಳೂ ಸೇರಿ ಇದೊಂದು ರಸಪಾಕವೇ ಸೈ. ಆಟೋರಾಜರ ಪ್ರೀತಿ, ಮೋಸ, ಅಲ್ಪತೆ, ಉದಾರತೆ, ಹೃದಯ ಎಲ್ಲದೂ ಈ ಪುಸ್ತಕದಲ್ಲಿ ಅನಾವರಣಗೊಳ್ತಾ ಹೋಗುತ್ತೆ. ಎಲ್ಲರೆಡೆಗೆ ಒಂದು ತೆರೆದ ಮನಸ್ಸನ್ನಿಡುವುದು ಹೇಗೆ ಅನ್ನೋದು ನನಗೀ ಪುಸ್ತಕದ ‘ಟೇಕ್‌ಅವೇ’ ಒಂದೇ ಗುಕ್ಕಿಗೆ ಓದಿ ಮುಗಿಸಬಹುದಾದ ಪುಸ್ತಕವಾದರೂ, ಹಾಗೇ ಓದಲು ಬೋರಾಗುತ್ತೆ. ಅದರ ಬದಲಾಗಿ ದಿನಕ್ಕಿಷ್ಟೇ ಅಂತ ಇನ್ಸ್ಟಾಲ್‌ಮೆಂಟ್‌ನಲ್ಲಿ ಓದಿದರೇ ಸಿಕ್ಕುವ ಕಿಕ್ಕೇ ಬೇರೆ.