ಕವಿ, ಕಥೆಗಾರ ಮಹದೇವಸ್ವಾಮಿ ಕೆ.ಎಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯಲ್ಲಿ 1986ರಲ್ಲಿ ಜನಿಸಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಪೊನ್ನಾಚಿ ಯಲ್ಲಿ. ಕೊಳ್ಳೇಗಾಲ ಮತ್ತು ಮೈಸೂರಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ಧನ ಸಹಾಯ ಪಡೆದು 2015ರಲ್ಲಿ "ಸಾವೊಂದನ್ನು ಬಿಟ್ಟು " ಮೊದಲ ಕವನ ಸಂಕಲನ ಪ್ರಕಟಣೆಯಾಗಿದೆ. ಈ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ ಹಾಗೂ ಮಂಡ್ಯದ adviser ಪತ್ರಿಕೆಯವರು adviser ಪ್ರಶಸ್ತಿಯನ್ನೂ ನೀಡಿ ಗೌರವಿಸಿದ್ದಾರೆ.
2018 ರಲ್ಲಿ ಧೂಪದ ಮಕ್ಕಳು ಕಥಾ ಸಂಕಲನದ ಹಸ್ತ ಪ್ರತಿಗೆ ಕನ್ನಡ ಯುವಜನ ಕ್ರಿಯಾ ಸಮಿತಿ. ಹಾನಗಲ್ಲು ಇವರಿಂದ ಪಾಪು ಕಥಾ ಪುರಸ್ಕಾರ ಹಾಗೂ ಛಂದ ಪ್ರಕಾಶನ ಕೊಡಮಾಡುವ ಛಂದ ಪುಸ್ತಕ ಬಹುಮಾನ ದೊರೆತಿದೆ. ಬೆಂಗಳೂರಿನ ಸುಚಿತ್ರ ಗ್ಯಾಲರಿಯಲ್ಲಿ ಧೂಪದ ಮಕ್ಕಳು ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮ ನಡೆದಿದೆ. ನಿಯತಕಾಲಿಕೆ ಹಾಗೂ ದಿನಪತ್ರಿಕೆಯಲ್ಲಿ ಕಥೆ ಕಾವ್ಯ ಪ್ರಕಟವಾಗಿದೆ. ಮಂಟೇಸ್ವಾಮಿ ಹಾಗೂ ಮಹದೇಶ್ವರ ಕಾವ್ಯಗಳಲ್ಲಿ ವಿಶೇಷ ಆಸಕ್ತಿಹೊಂದಿದ್ದಾರೆ.
ಸಾಮಾನ್ಯ ಕಥೆಗಳ ಮೂಲಕವೇ ಶುರುವಾಗುವ ಈ ಸಂಕಲನ, ನಂತರದ ಕಥೆಗಳಲ್ಲಿ ತನ್ನ ಗಟ್ಟಿತನವನ್ನು ಪ್ರದರ್ಶಿಸುತ್ತದೆ. ಸುಮ್ಮನೆ ಓದಿ ಬೇರೆ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಓದಿದ ಕಥೆ ಕಾಡುವುದಕ್ಕೆ ಶುರು ಮಾಡುತ್ತದೆ. ಅಲ್ಲಿಗೆ ಕಥೆಗಳು ಗೆದ್ದ ಹಾಗೆಯೇ
ಅಕ್ಕಮಹಾದೇವಿಯ ಕಥೆಯನ್ನು ಪ್ರಸ್ತುತ ಸ್ಥಿತಿಗೆ ಒಗ್ಗಿಸಿ ಸಾಮಾನ್ಯ ಹೆಣ್ಣಿನ ದುಃಖದ ಕಥೆಯಾಗಿ ಮಾರ್ಪಡಿಸುವ ತಂತ್ರ ಬಲು ಇಷ್ಟವಾಯಿತು.
ಇದರಲ್ಲಿನ ಸ್ವಗತ ಕಥೆಯಂತೂ amazing. ಒಂದು ಕುಟುಂಬದಲ್ಲಿನ ಅವರ ಕಥೆಯನ್ನೇ ಒಬ್ಬೊಬ್ಬರು ನೋಡುವ ಕೋನವನ್ನು ಹೇಳಿರುವ ತಂತ್ರ ನಿಜಕ್ಕೂ ಸ್ಮರಣೀಯ.