Bengaluru Gundappa Lakshminarayana Swamy also known as B. G. L. Swamy and (Kannada: ಬಿ ಜಿ ಎಲ್ ಸ್ವಾಮಿ), was an Indian botanist and Kannada writer who served as professor and head of the department of Botany and as Principal of Presidency College, Chennai. He was the son of D. V. Gundappa (Kannada: ಡಿ.ವಿ. ಗುಂಡಪ್ಪ), an Indian writer and philosopher.
Swamy's literary works encompass a large range of topics. A large number of them are related to botany, and introduce botanical concepts to the layperson. A few of his books cover common plants used in everyday life in a scientific manner
Other works by Swamy pertain to literature, and some are partially autobiographical, dealing with his experiences as professor and principal. Apart from being an acclaimed botanist, BGL Swamy was also widely respected in the history and literary circles. He extensively studied and researched the histories and literatures of both Kannada and Tamil languages. His book Tamilu Talegala Naduve (Among Tamil heads), is devoted to examining theories pertaining to languages' origins (especially the claims that were being made in those days by the Dravidian parties) and mostly debunking them
His book Hasiru honnu (Green is Gold) won the Kendra Sahitya Academy award given by Government of India. With that, Gundappa and Swamy, became the first father and son to win the prestigious award.
ಬಿ ಜಿ ಎಲ್ ಸ್ವಾಮಿಯವರು ನನಗೆ ದಕ್ಕಿದ್ದು ಹಸಿರು ಹೊನ್ನು ಕೃತಿಯಿಂದ, ಅವರ ಈ ಕೃತಿಯನ್ನು ಕೃಷಿ ವಿದ್ಯಾರ್ಥಿಯಾಗಿದ್ದ ನಾನು ಓದುವುದು ಅತ್ಯವಶ್ಯವಾಗಿತ್ತು. ಅನಂತರ ಏಕೋ ನಾನು ಅವರನ್ನು ಓದಲೇ ಇಲ್ಲ. ಇತ್ತೀಚಿಗೆ ಈ ಪುಸ್ತಕವೊಂದು ಗ್ರಂಥಾಲಯದ ಕಪಾಟಿನಲ್ಲಿ ಕಂಡಾಗ ಓದೋಣ ಎನಿಸಿತು. ಸ್ವಾಮಿ ನಿಜಕ್ಕೂ ಅಪರೂಪದ ಬರಹಗಾರ, ತಾವು ಪ್ರಾಧ್ಯಾಪಕರಾಗಿದ್ದಾಗ ಕಂಡ ಅನುಭವಗಳನ್ನು, ಪ್ರಾಂಶುಪಾಲರಾಗಿದ್ದ ಅವರ ಆಡಳಿತ ಅನುಭವಗಳನ್ನು ರಸಮಯವಾಗಿ ಹೇಳುವ ಇಲ್ಲಿನ ಲೇಖನಗಳು ಹಾಸ್ಯದ ಹುಚ್ಚು ಹೊಳೆ.
#ಪುಸ್ತಕಪರಿಚಯ_೧೨ #ಅಕ್ಷರವಿಹಾರ_೨೦೨೫ ಕೃತಿ: ಕಾಲೇಜು ತರಂಗ ಲೇಖಕರು: ಬಿ.ಜಿ.ಎಲ್.ಸ್ವಾಮಿ ಪ್ರಕಾಶಕರು: ಕಾವ್ಯಾಲಯ ಪ್ರಕಾಶನ, ಮೈಸೂರು
ಬಿ.ಜಿ.ಎಲ್.ಸ್ವಾಮಿಯವರ ಪುಸ್ತಕಗಳನ್ನು ಓದುವುದು ವಿಶಿಷ್ಟವಾದ ರಸಾನುಭವ. ಅವರ ಶೈಲಿಗಿಂತ ಇನ್ನಷ್ಟು ಸರಳವಾಗಿ ಬರೆಯಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟು ಆಪ್ತವಾದ ಶೈಲಿ. ಜೀವನಾನುಭವ ಮತ್ತು ವೃತ್ತಿ ಬದುಕಿನ ವೃತ್ತಾಂತಗಳನ್ನು ತಿಳಿಹಾಸ್ಯದ ಮೂಲಕ ವಿವರಿಸುವ ರೀತಿ ಬೆರಗು ಮೂಡಿಸುತ್ತದೆ. ಸ್ಥಾಪಿತ ವ್ಯವಸ್ಥೆಗಳಲ್ಲಿನ ಹುಳುಕುಗಳನ್ನು ವಿಡಂಬನಾತ್ಮಕವಾಗಿ ಹೇಳುವಾಗ ಓದುಗರ ಮುಖಾರವಿಂದದಲ್ಲಿ ತೆಳುವಾದ ನಗುವಿನ ಗೆರೆ ಮೂಡಿ ಬುಗ್ಗೆಯಾಗಿ ಹರಿಯುತ್ತದೆ. “ಕಾಲೇಜು ತರಂಗ” ಕೃತಿಯಲ್ಲಿ ಇಂತಹ ಹದಿನೈದು ತರಂಗ(ಪ್ರಸಂಗ)ಗಳು ಇವೆ.
ಹೆಸರೇ ಸೂಚಿಸುವಂತೆ ಲೇಖಕರು ಪ್ರಾಂಶುಪಾಲರಾಗಿದ್ದಾಗ ಕಾಲೇಜಿನಲ್ಲಿ ನಡೆದ ಪ್ರಸಂಗಗಳ ಲೇಖನ ಗುಚ್ಛ. ಶಿಕ್ಷಣ ಇಲಾಖೆಯಲ್ಲಿನ ಅಪಸವ್ಯಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಕಾಲೇಜಿನ ಕಾರಕೂನನಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿಗಳವರೆಗೆ,ಶಿಕ್ಷಣ ಮಂತ್ರಿಗಳವರೆಗೆ ಹುದ್ದೆಗನುಗುಣವಾಗಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಯಾವ ತರಹದ ಆಟಗಳನ್ನು ಆಡಬಹುದು(ಆಡಿದ್ದರು) ಎಂಬುದನ್ನು ಸುಸಂಸ್ಕೃತ ಭಾಷೆಯಲ್ಲಿ ಪ್ರಸ್ತುತಪಡಿಸಿದ ಬಗೆ ಅದ್ಭುತ. ವೈಯಕ್ತಿಕ ನಿಂದನೆಗೆಳಸದೆ ಸಭ್ಯವಾಗಿ ಟೀಕಿಸುವ ನಿರೂಪಣೆಯ ಶೈಲಿ ಇಂದು ಹಾಸ್ಯದ ಹೆಸರಿನಲ್ಲಿ ದ್ವಂದ್ವಾರ್ಥದ ಕಾರ್ಯಕ್ರಮಗಳನ್ನು ಆಯೋಜಿಸುವವರು ಓದಿದರೆ ಒಳಿತು.
ಇದು ೨೦೨೫ರ ಕೊನೆಯ ಓದು. ವಿರಾಮದ ಓದಿಗೆ ಹೇಳಿ ಮಾಡಿಸಿದ ಪುಸ್ತಕ. ಏನೇ ಅಡಚಣೆ ಚಿಂತೆಗಳಿದ್ದರೂ ಈ ಪುಸ್ತಕವನ್ನು ಓದುವಾಗ ನಗುವಿನ ಅಲೆಯಲ್ಲಿ ಕಳೆದು ಹೋಗುವುದು ನಿಶ್ಚಿತ. ಓದನ್ನು ಪ್ರಾರಂಭಿಸಬೇಕೆನ್ನುವವರು ಸ್ವಾಮಿಯವರ ಪುಸ್ತಕಗಳನ್ನು ಪರಿಗಣಿಸಬಹುದು.
ಇದೊಂದು ಹೊಸ ರೀತಿಯ ಬರವಣಿಗೆ ಅನಿಸಿತು. ಕೆಲವು ಪಾತ್ರ ಹಾಗೂ ಸನ್ನಿವೇಶಗಳ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ವಿಡಂಬನೆ ಮಾಡುವ ತಿಳಿ ಹಾಸ್ಯದ ಬರಹಗಳು. ಬಹುಶಃ ಇದೆಲ್ಲವೂ ಬಿ.ಜಿ.ಎಲ್ ಸ್ವಾಮಿಯವರು ತಮ್ಮ ವೃತ್ತಿ ಬದುಕಿನಲ್ಲಿ ಅನುಭವಿಸಿದ ಅಥವಾ ಕಂಡ ಘಟನೆಗಳಿರಬಹುದು.
ಬಿ.ಜಿ.ಎಲ್ ಸ್ವಾಮಿಯವರ ಪುಸ್ತಕಗಳನ್ನ ಓದೋದಂದ್ರೆ ಯಾವಾಗ್ಲೂ ಖುಷಿಯೇ.ಹಸುರು ಹೊನ್ನು,ತಮಿಳು ತಲೆಗಳ ನಡುವೆ ಪುಸ್ತಕಗಳನ್ನ ಓದಿ,ಸ್ವಾಮಿಯವರ ಇನ್ನಷ್ಟು ಪುಸ್ತಕಗಳನ್ನ ಹುಡುಕಿ ಹೊರಟವಳಿಗೆ ಸಿಕ್ಕಿದ್ದು,`ಕಾಲೇಜು ತರಂಗ´. ಕಾಲೇಜಿನ ಆಡಳಿತ,ಡೈರೆಕ್ಟರ್,ವೈಸ್ ಛಾನ್ಸಲರ್,ವಿದ್ಯಾಮಂತ್ರಿಗಳ ನಡುವಿನ ಒಡನಾಟ ಯಾವ ಘಟನೆಯನ್ನಾದರೂ ಸ್ವಾರಸ್ಯಪೂರ್ಣವಾಗಿ ಹೇಳುವ ಅವರ ಶೈಲಿ ಅದ್ಬುತ. ಎಲ್ಲಾ ಅಧ್ಯಾಯಗಳು ಒಂದಕ್ಕಿಂತ ಒಂದು ಚಂದವಿದ್ದು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತವೆ.ರಾಜಾತಿ ಅಮ್ಮಾಳ್,ಕಲಿಯುಗ ಸರಸ್ವತಿ,ಕರಟಕ,ದಮನಕರಂತೂ ತುಂಬಾ ದಿನ ನೆನಪಲ್ಲಿದ್ದು ಆಗಾಗ ಮುಖದ ಮೇಲೆ ಮುಗುಳ್ನಗೆ ಮೂಡಿಸ್ತಾನೆ ಇರ್ತಾರೆ. ವಿದ್ಯಾಮಂತ್ರಿಗಳ ಪ್ಯಾರಿಸ್ ಯಾತ್ರೆ,ನಡು ಹಗಲಿನ ಊಟದ ಭಾಗಗಳಂತೂ ಅಕ್ಷರಶಃ ನಗೆಬಾಂಬುಗಳೇ.ಕಾಲೇಜಿನ ಆಡಳಿತದಂತಹ ಬೋರು ಹೊಡೆಸುವ ವಿಷಯಗಳನ್ನ ಇಷ್ಟು ಸ್ವಾರಸ್ಯವಾಗಿ,ಹಾಸ್ಯಮಯವಾಗಿ ಹೇಳುವುದು ಬಿ.ಜಿ.ಎಲ್ ಸ್ವಾಮಿಯವರಿಗೆ ಮಾತ್ರ ಸಾಧ್ಯವೇನೋ.ಈ ಪುಸ್ತಕ ಓದಿ ಕಾಲೇಜು ರಂಗವನ್ನೂ ಓದಬೇಕೆಂದು ಹುಡುಕಿದರೆ ಸಿಗದ ನಿರಾಸೆ ಕಾದಿತ್ತು.