Jump to ratings and reviews
Rate this book

ವಿಷಮ ಭಿನ್ನರಾಶಿ [Vishama Bhinnaraashi]

Rate this book
ವಸುಧೇಂದ್ರರ ಆರನೆಯ ಕಥಾಸಂಕಲನ. ಇದರಲ್ಲಿ ಎರಡು ಅಧ್ಯಾಯಗಳಿವೆ - ಅಂಶ ಮತ್ತು ಛೇದ. ಮೊದಲ ಅಧ್ಯಾಯದಲ್ಲಿ ಐದು ಕತೆಗಳು ಮತ್ತು ಎರಡನೆಯ ಅಧ್ಯಾಯದಲ್ಲಿ ಮೂರು ಕತೆಗಳಿವೆ; ಒಟ್ಟು ಎಂಟು ಕತೆಗಳು. ಛೇದ ಆಧ್ಯಾಯವು ಸಂಪೂರ್ಣವಾಗಿ ಮೋಹನಸ್ವಾಮಿ ಕತೆಗಳಿಗೆ ಮೀಸಲಿಡಲಾಗಿದೆ.

ಅಂಶ
-----

ಅಮೃತ ಸೊಪ್ಪು
ವಾಹಿನಿ
ಡೆವಿಲ್‌ ಡಾಗ್
ವಿಷಮ ಭಿನ್ನರಾಶಿ
ನಿಯಮಬಾಹಿರ

ಛೇದ
-----

ಸೈಕಲ್‌ ಸವಾರಿ
ಚತುರ್ಮುಖ
ಆಡಬಾರದ ಮಾತುಗಳು ಕಾಡುವಾಗ

240 pages, Paperback

Published November 1, 2017

1 person is currently reading
39 people want to read

About the author

Vasudhendra

40 books392 followers
Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.

https://en.wikipedia.org/wiki/Vasudhe...

https://kn.wikipedia.org/wiki/%E0%B2%...

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
18 (30%)
4 stars
31 (51%)
3 stars
11 (18%)
2 stars
0 (0%)
1 star
0 (0%)
Displaying 1 - 14 of 14 reviews
Profile Image for Prashanth Bhat.
2,192 reviews143 followers
November 22, 2017
ವಿಷಮ‌ ಭಿನ್ನ ರಾಶಿ, ವಸುಧೇಂದ್ರ : ಒಂದು ಅಭಿಪ್ರಾಯ

ವಸುಧೇಂದ್ರ ತಮ್ಮ ಕತೆಗಳ ಮೂಲಕ, ಪ್ರಬಂಧಗಳ ಮೂಲಕ ಕನ್ನಡ ಸಾಹಿತ್ಯ ಎಂಬ ನಿಂತ ನೀರಾಗಿ ವಾಸನೆ ಬೀರುತ್ತಿದ್ದ ಜಾಗಕ್ಕೆ ಹೊಸ ಗಾಳಿಯಂತೆ ಬಂದವರು. ಅನುಮಾನವಿದ್ದವರು ಕಳೆದ ಅದರ ಮೊದಲಿನ ಹತ್ತು ವರ್ಷಗಳ ಪತ್ರಿಕೆಗಳ ಸಾಪ್ತಾಹಿಕ ತಿರುವಿ ಹಾಕಿ.ಅಷ್ಟು ತಾಳ್ಮೆಯಿಲ್ಲದಿದ್ದರೆ ಕಳೆದ ಹತ್ತು ವರ್ಷಗಳ ಪ್ರಜಾವಾಣಿ ದೀಪಾವಳಿ ಬಹುಮಾನಿತ ಕತೆಗಳ ನೋಡಿ. ಅವೇ ಜಾತಿ ಸಮಸ್ಯೆ,ದಲಿತ ನೋವು,ಊರ ಜಾತ್ರೆ, ಮಣ್ಣಿನ ಪಾಡು ಇತ್ಯಾದಿಗಳೇ ತುಂಬಿರುವುದು ಕಾಣುತ್ತದೆ.
ವಸುಧೇಂದ್ರ ಬಂದ ಹೊಸತರಲ್ಲಿ ಅವರು ಮತ್ತು ಸಾಫ್ಟ್‌ವೇರ್ ಕ್ಷೇತ್ರಕ್ಕೆ ಸೇರಿದ ಬರಹಗಾರರು ಅನಾದರಕ್ಕೆ ಇತರ ಉಪನ್ಯಾಸಕ ಮತ್ತು ಸಾಹಿತ್ಯದ ಮೂಲಕ ಪ್ರಶಸ್ತಿಯ ಬೆನ್ನುಬೀಳುವ ವರ್ಗದ ಅನಾದರಕ್ಕೆ ಒಳಗಾದರು.ಮುಖ್ಯ ಕಾರಣ ಆಕರ್ಷಕ ಸಂಬಳದ ಹೊರದೇಶದ ಗುತ್ತಿಗೆಗೆ ದುಡಿವ ಈ ಮಂದಿಗೆ ಸಾಹಿತ್ಯದ ಬಗ್ಗೆ ಏನು ಅರಿವಿದ್ದಿತು ಎಂಬುದು ಮತ್ತು ತಮ್ಮ ಸವಕಲು ಪದಪುಂಜಗಳಿಗೆ ಬರುವ ಅಪಾಯ ಮಾತ್ರವಾಗಿತ್ತು.
ನಾನು ಮೊದಲಿಂದಲೇ ಪತ್ರಿಕೆಗಳಲ್ಲಿ ಬರುವ ವಸುಧೇಂದ್ರ ಸಾಹಿತ್ಯದ ಓದುಗ. ಕಾಲ ಕಳೆದಂತೆ ಪ್ರಕಾಶನದ ಸಾಹಸಕ್ಕೆ ಇಳಿದು 'ಛಂದ ಪ್ರಕಾಶನ' ಹುಟ್ಟುಹಾಕಿ 'ಓದಿ ಓದಿ ಮರುಳಾಗಿ' ಎಂದರು.
ಇಷ್ಟು ವರ್ಷಗಳ ಅವರ ಬರವಣಿಗೆಯ ನೋಡಿದರೆ ಮೂರು ಮುಖ್ಯ ಪಲ್ಲಟಗಳು ಎದ್ದು ಕಾಣುತ್ತವೆ.
ಮೊದಲನೆಯದು ಆರಂಭದ ಸಾಫ್ಟ್ವೇರ್ ತಲ್ಲಣಗಳ ಕಥನ, ಇದು ಕನ್ನಡ ಸಾಹಿತ್ಯದ ಮಟ್ಟಿಗೆ ಬದಲಾವಣೆಯ ಗಾಳಿಗೆ ಕಾರಣವಾಯಿತು. ಇಂಗ್ಲೀಷ್ ನಲ್ಲಿ ಚೇತನ್ ಭಗತ್ ಬಂದಂತೆ.(ಆದರೆ ಬರಿಯ ಹೋಲಿಕೆಯ ಹೆಸರಿಗೆ ಮಾತ್ರ.ಅವನೀಗ ಬರೆವ ಕಸ ಇಲ್ಲಿ ಅನವಶ್ಯಕ)
ಎರಡನೆಯದು ಬಳ್ಳಾರಿ ಸೀಮೆಯ ಕಡು ಮಡಿಯ ಮಾಧ್ವ ಕುಟುಂಬದ ಬವಣೆ,ಬದುಕಿನ ಚಿತ್ರಣ. ಇವನ್ನು ಹಲವರು ಕನ್ನಡದಲ್ಲಿ ಬರೆದಿದ್ದರಾದರೂ ಹೊಸ ಬಗೆಯ ಬರವಣಿಗೆ ಖುಷಿ ಕೊಟ್ಟಿತ್ತು.
ಮೂರನೆಯದು ಮೋಹನಸ್ವಾಮಿಯ ನಂತರದ್ದು .'ಗೇ' ಅಥವಾ 'ಸಲಿಂಗಿ' (ಕನ್ನಡದಲ್ಲಿ ಈ ಪದ ಕರ್ಣಕಠೋರ ಆದ್ದರಿಂದ ಗೇ ಹೆಚ್ಚು ಸರಿ). ಈ ಪುಸ್ತಕ ಕನ್ನಡದ ಮಟ್ಟಿಗೆ ಶಾಕ್ ಕೊಟ್ಟದ್ದು. ಮೊದಲ ಓದಿಗೆ ನನಗಂತೂ ಇವು ಅನುಭವ ಅನ್ನುವುದರಲ್ಲಿ ಅನುಮಾನವೇ ಉಳಿದಿರಲಿಲ್ಲ.ಆಮೇಲೆ ಸಂದರ್ಶನವೊಂದರಲ್ಲಿ ಅವರೇ ಒಪ್ಪಿಕೊಂಡ ನಂತರ ಅವರ ಬರವಣಿಗೆಯ ದಿಕ್ಕು ಬದಲಾಯಿತು. ಶ್ರೇಷ್ಠ ಕಾದಂಬರಿಕಾರ ಶಿವರಾಮ ಕಾರಂತರ 'ಮೂಕಜ್ಜಿಯ ಕನಸು'ಗಳಲ್ಲಿ ಅನೈಸರ್ಗಿಕ ಎಂಬಂತೆ ಬಿಂಬಿತವಾದ ಸಲಿಂಗಕಾಮ. ಇನ್ನು ಸರಿಯಾಗಿ ವಿಚಾರವಾದಿಗಳಾಗದ ಉಳಿದವರ ಅಭಿಪ್ರಾಯ ಹೇಗಿದ್ದೀತು.ಊಹಿಸಿ. ಹಾಗಾಗಿ ಅದನ್ನು ಬದಲಾಯಿಸಲು ವಸುಧೇಂದ್ರ ಅವರು ಕೌನ್ಸಲಿಂಗ್ ಅನ್ನೂ ಮಾಡತೊಡಗಿದರು.
ಆಮೇಲೆ ಇನ್ನೂ ಮುಕ್ತವಾಗಿ ಬರೆಯತೊಡಗಿದರು.
ಹಾಗಾಗಿ 'ವಿಷಮ ಭಿನ್ನ ರಾಶಿ' ಯ ಬಗ್ಗೆ ನನಗೆ ಕುತೂಹಲ ಇತ್ತು.
ನಾನಂದುಕೊಂಡಂತೆ ಅವರ ಬರವಣಿಗೆಯ ಮೂರೂ ಅಂಶಗಳೂ ಇಲ್ಲಿನ ಕತೆಗಳಲ್ಲಿ ಬಂದಿದೆ.
'ಅಂಶ' ದಲ್ಲಿ ಮೊದಲೆರಡು ವಸ್ತುಗಳಾದ ಸಾಫ್ಟವೇರ್ ಜಗತ್ತು ಮತ್ತು ಮಾಧ್ವ ಮಡಿಯ ಜಗತ್ತು ಪಡಿಮೂಡಿದರೆ ಎರಡನೆಯ ಭಾಗವಾದ 'ಛೇದ' ದಲ್ಲಿ ಸಲಿಂಗಿ ಜಗತ್ತು ಅನಾವರಣಗೊಂಡಿದೆ. ವಿಶೇಷವೆಂದರೆ ಇಲ್ಲಿ ಅವು ಮೂರು ಜಗತ್ತು ಒಂದರೊಳಗೊಂದು ಹಾದು ಹೋಗಿದೆ. ಮಾಧ್ವ ಹುಡುಗ ಸಲಿಂಗಿಯಾಗಿರುವುದು ಈ ರೀತಿ.
ವಸುಧೇಂದ್ರರ ಕಥನ ಕೌಶಲ ಒಂದಿನಿತೂ ಕುಂದಿಲ್ಲ. ಆದರೆ ನನಗಿರುವ ಏಕೈಕ ತಕರಾರು ಎಂದರೆ ತಾನು ಒಪ್ಪಿಕೊಂಡ ಬಳಿಕ ಅವರು ಎಷ್ಟು ಮುಕ್ತವಾಗಿ ಬರೆಯುತ್ತಿದ್ದಾರೆ ಎಂದರೆ ಅದೊಂಥರಾ 'ನೀರಿಗಿಳಿದ ಮೇಲೆ ಚಳಿಯೇನು ಮಳೆಯೇನು' ತರಹದ್ದು. ಕನ್ನಡ ಸಾಹಿತ್ಯ ಜಗತ್ತು ಮತ್ತು ಓದುಗ ವರ್ಗ ಇದನ್ನು ಜೀರ್ಣಿಸಿಕೊಳ್ಳುವಷ್ಟು ಪ್ರಬುದ್ಧರಾಗಿರಬಹುದಾ ಎಂಬ ದಟ್ಟ ಅನುಮಾನ ನನಗಿದೆ. ಯಾಕೆಂದರೆ ನಮ್ಮಮ್ಮ ಅಂದ್ರೆ ನನಗಿಷ್ಟ ಮತ್ತು ಮಿಥುನ ಓದುವ ಜನರೇ ಅಲ್ಲವೇ ಮೋಹನಸ್ವಾಮಿಯ ಓದುವವರು(ವಸುಧೇಂದ್ರ ಅಭಿಮಾನಿಗಳು).
ಕನ್ನಡ ಸಾಹಿತ್ಯದ ಎಲ್ಲೆಗಳು ಇನ್ನಷ್ಟಯ ವಿಸ್ತಾರಗೊಳ್ಳಲು ಇವಂತೂ ಅಗತ್ಯ!
Profile Image for Prabhosha Acharya.
22 reviews12 followers
May 1, 2021
ಮೊದಲಿಗೆ ಲೇಖಕರ ಬಗ್ಗೆ ಹೇಳಬೇಕೆಂದರೆ ತುಂಬಾ ಸರಳ ಹಾಗೂ ಸುಲಭ ಕನ್ನಡದ ಬರವಣಿಗೆ.

ಅಂಶ ಮತ್ತು ಛೇಧ ಎಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ.
ಅಂಶದಲ್ಲಿ ಬರುವ ಎಲ್ಲಾ ಸಣ್ಣ ಕಥೆಗಳು ತುಂಬಾ ಸುಂದರವಾಗಿದೆ. ಪ್ರತಿಯೊಂದು ಮನಸಿಗೆ ಇಷ್ಟ ಆಗತ್ತೆ ಹಾಗೆ ಎಲ್ಲ ಪಾತ್ರಗಳೂ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಅಮೃತ್ ಸೊಪ್ಪು ನನ್ನ 5 ವರ್ಷದ ಮಗನಿಗೆ ತುಂಬಾ ಇಷ್ಟ ಆಯ್ತು ಆಗ ನಂಗೆ ಈ ಪುಸ್ತಕ ಓದಿದ್ದು ಸಾರ್ಥಕ ಅನ್ನಿಸ್ತು.

ಛೇಧ ಸಂಪೂರ್ಣವಾಗಿ ಸಲಿಂಗಕಾಮಿ ಮೋಹನ್ ಸ್ವಾಮಿಯ ಕಥೆ. ಇದರಲ್ಲಿ ಸ್ವಲ್ಪ ಬೇಸರ ತರಿಸಿದ್ದು ಅದೇ ಅದೇ ವಿವರಣೆ.
Profile Image for Raghavendra T R.
70 reviews17 followers
February 24, 2021
ವಸುಧೇಂದ್ರರ ಕತೆಗಳ ವೈಶಿಷ್ಟ್ಯವೇ ಅವರ ಸರಳವಾದ ಭಾಷೆ ಹಾಗೂ ಚೆನ್ನಾಗಿ ಕತೆ ಹೆಣೆಯುವ ತಂತ್ರ. ಕೆಲವು ಕತೆಗಳು ತುಂಬಾ ಚೆನ್ನಾಗಿವೆ.
180 reviews22 followers
May 11, 2023
#ಅಕ್ಷರವಿಹಾರ_೨೦೨೩
ಕೃತಿ: ವಿಷಮ ಭಿನ್ನರಾಶಿ
ಲೇಖಕರು: ವಸುಧೇಂದ್ರ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು

ವಸುಧೇಂದ್ರ ನಾನು ಇಷ್ಟಪಡುವ ಲೇಖಕರು. ಅವರ ಬರವಣಿಗೆಯ ಶೈಲಿ ಮತ್ತು ಸರಳ ಭಾಷೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಅವರ ಬರಹಗಳು ತಾಜಾತನದಿಂದ ಕೂಡಿ ಓದುಗರ ಮನೋಲ್ಲಾಸವನ್ನು ದ್ವಿಗುಣಗೊಳಿಸುತ್ತವೆ. ಕಥೆ,ಲಲಿತ ಪ್ರಬಂಧಗಳು ಅಥವಾ ಕಾದಂಬರಿ ಎಲ್ಲಾ ಪ್ರಕಾರಗಳಲ್ಲಿಯೂ ಆಪ್ತ ಶೈಲಿಯ ಬರವಣಿಗೆ ಅವರ ಕೃತಿಗಳಲ್ಲಿ ಕಂಡು ಬರುವ ಧನಾತ್ಮಕ ಅಂಶಗಳು. ಇವು ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವವರಿಗೆ ಅನುಕೂಲ. ಎಲ್ಲವೂ ಸರಳ ಕತೆಗಳಾಗಿದ್ದರೂ ಸಹ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಲ್ಲಿ ಯಶಸ್ವಿಯಾಗಿವೆ. ನನಗಿಷ್ಟವಾದ ಕತೆಗಳಲ್ಲಿ 'ವಾಹಿನಿ', 'ವಿಷಮ ಭಿನ್ನರಾಶಿ' ಪ್ರಮುಖವಾದುವು.

#ವಾಹಿನಿ
ಸಾಮಾನ್ಯವಾಗಿ ಯಾರೂ ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳದ ನಿದ್ರಾಹೀನತೆ ಕ್ರಮೇಣ ಹೇಗೆ‌ ಖಿನ್ನತೆಗೆ ತಿರುಗಿ ವ್ಯಕ್ತಿಯನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬುದು ಕತೆಯ ವಿಷಯ. ಎಷ್ಟೇ ಒತ್ತಡಗಳಿದ್ದರೂ ಅದನ್ನು ಸರಿಯಾಗಿ ಗುರುತಿಸಿ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ಇದು ಸಾಧ್ಯವಾಗದ ಪಕ್ಷದಲ್ಲಿ ತಜ್ಞರ ಸಹಕಾರವನ್ನು ತೆಗೆದುಕೊಳ್ಳಲು ಹಿಂಜರಿಯಬಾರದು ಎಂಬುದು ಕತೆಯ ಸಾರಾಂಶ. ಹಳೆ ಕಾಲದಲ್ಲಿ ವೈದ್ಯಕೀಯ ಸೌಲಭ್ಯಗಳು ಇರದಿದ್ದರ ಕಾರಣ ಖಿನ್ನತೆಯನ್ನು ಗುರುತಿಸಲು ಕಷ್ಟವಾಗುತ್ತಿತ್ತು. ಆದರೆ ಇಂದು ವೈದ್ಯಕೀಯ ಸೌಲಭ್ಯಗಳು ಮುಂದುವರೆದ ಕಾಲದಲ್ಲಿಯೂ ನೆರವನ್ನು ಪಡೆಯಲು ಹಿಂಜರಿಕೆ ತೋರುವುದು ಖೇದಕರ. ಇಷ್ಟೇ ಆಗಿದ್ದರೆ ಅದೊಂದು ಸಾಮಾನ್ಯ ಕತೆಯಾಗಿರುತ್ತಿತ್ತು. ಆದರೆ‌ ಲೇಖಕರು ಇಲ್ಲಿ ರಕ್ತಸಂಬಂಧಗಳ ಎಳೆಯನ್ನು ಬಹಳ ಜಾಣ್ಮೆಯಿಂದ ಬಳಸಿ, ಬಿಟ್ಟರೂ ಬಿಡಲಾಗದ ಬಂಧವೆಂದರೆ ಅದು ರಕ್ತಸಂಬಂಧವೆಂದು ಮಾರ್ಮಿಕವಾಗಿ ನಿರೂಪಿಸುತ್ತಾರೆ.

#ವಿಷಮಭಿನ್ನರಾಶಿ
ಸೋದರ ಸಂಬಂಧಿಗಳು ಮದುವೆಯಾದಾಗ ಹುಟ್ಟುವ ಸಂತಾನಗಳಲ್ಲಿನ ವೈಕಲ್ಯತೆಯ ಕುರಿತಾದ ಕತೆ. ಒಂದು ಮನೆಯಲ್ಲಿ ಬುದ್ಧಿಮಾಂದ್ಯ ಮಗುವೊಂದು ಇಡೀ ಕುಟುಂಬದ ಜೀವನೋತ್ಸಾಹವನ್ನು ಕಸಿದುಕೊಳ್ಳುವ ಮೂಲಕ ಮಾನಸಿಕ ಮತ್ತು ಸಾಮಾಜಿಕ ಅಭದ್ರತೆಯ ಭಾವವನ್ನು ಶಾಶ್ವತವಾಗಿಸುತ್ತದೆ. ಆ ಕುಟುಂಬಗಳ ತಾಪತ್ರಯ ಬವಣೆಗಳು ಚೆನ್ನಾಗಿ ಮೂಡಿಬಂದಿವೆ. ಈ ವಿಕಲತೆಗಳಿಗೆ ವೈಜ್ಞಾನಿಕ ಕಾರಣಗಳು ಏನೇ ಇರಬಹುದು, ಆದರೆ ಆತ್ಮಾವಲೋಕನದ ಸಂದರ್ಭವನ್ನು ಸೃಷ್ಟಿಸುವ ಮೂಲಕ ತನ್ನ ತಪ್ಪುಗಳಿಗೆ ಪಶ್ಚಾತ್ತಾಪ ಪಡುವ ಮನುಜ ಸಹಜ ಸ್ವಭಾವವನ್ನು ಅನಾವರಣಗೊಳಿಸಿದ್ದು ಕತೆಗೆ ವಿಶೇಷ ಮೆರುಗನ್ನು ನೀಡಿದೆ.

ಎರಡನೇ ಭಾಗದಲ್ಲಿ ಇರುವ ಮೂರು ಕತೆಗಳು ಸಲಿಂಗ ಕಾಮದ ಬಗೆಗಿನ ಕತೆಗಳು. ನಾವು ಇದುವರೆಗೆ ಯೋಚಿಸಿಯೇ ಇರದ ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ಸಲಿಂಗ ಕಾಮದ ಕುರಿತು ಒಂದು ಬಗೆಯ ತಾತ್ಸರ ಅಥವಾ ಮೂದಲಿಕೆಯನ್ನು ಹೊರತುಪಡಿಸಿ ಅದರಾಚೆಗೆ ನಮ್ಮ ಯೋಚನಾಲಹರಿ ದಾಟುವುದಿಲ್ಲ. "ಸೈಕಲ್ ಸವಾರಿ" ಎಂಬ ಕತೆಯಲ್ಲಿ ಭಿನ್ನ ಲೈಂಗಿಕ ಆಸಕ್ತಿಯನ್ನು ಹೊಂದಿರುವ ಹದಿಹರೆಯಕ್ಕೆ ಕಾಲಿಡುತ್ತಿರುವ ಯುವಕನೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಎಲ್ಲರಂತೆ ನಾನೇಕೆ ಇಲ್ಲ��� ಈ ವಿಷಯದಲ್ಲಿ ನಾನು ಮಾಡಿರುವ ತಪ್ಪೇನು ಎನ್ನುವುದಕ್ಕೆ ಹುಡುಕುವ ಕಾರಣಗಳು, ಸಾಮಾಜಿಕವಾಗಿ ಎಲ್ಲರೆದುರು ಒಪ್ಪಿಕೊಳ್ಳಲಾಗದಂತಹ ಮುಜುಗರದ ಸನ್ನಿವೇಶಗಳ ಜೊತೆಗೆ ಒಂದು ಸಮಾಜವಾಗಿ ನಮ್ಮ ಅಸಡ್ಡೆಯನ್ನು ತೆರೆದಿಡುತ್ತದೆ. "ಚತುರ್ಮುಖ" ಮತ್ತು "ಆಡಬಾರದ ಮಾತುಗಳು ಕಾಡುವಾಗ" ಕತೆಗಳು ಸಹ ಭಿನ್ನ ಲೈಂಗಿಕತೆಯ ಜನರ ಭಾವನಾತ್ಮಕ ಲೋಕವನ್ನು ನಮಗೆ ಪರಿಚಯಿಸುತ್ತದೆ.

ನಮಸ್ಕಾರ,
ಅಮಿತ್ ಕಾಮತ್
8 reviews7 followers
September 15, 2018
ಪುಸ್ತಕದಲ್ಲಿ ೨ ಭಾಗಗಳಿವೆ. ಮೊದಲನೆಯದು ಅಂಶ - ಇದರಲ್ಲಿ ೫ ಮತ್ತು ಎರಡನೇ ಭಾಗ ಛೇದದಲ್ಲಿ ೩ ಕಥೆಗಳು.

ಎಂದಿನಂತೆ ವಸುಧೇಂದ್ರ ಅವರ ನಿರೂಪಣೆ ಅಚ್ಚುಕಟ್ಟಾಗಿದೆ. ಕಥೆಗಳು ಮನ ಮುಟ್ಟುತ್ತವೆ.
ಸರಳ ಭಾಷೆಯಲ್ಲಿ ಕಣ್ಣಿಗೆ ಕಟ್ಟುವಂತೆ
ಬರೆಯುವದರಲ್ಲಿ ವಸುಧೇಂದ್ರ ಅವರದು ಎತ್ತಿದ ಕೈ.

ಸದಾ ನೆನಪಲ್ಲಿ ಉಳಿಯುವ ಕಾಡುವ ಸಾಲುಗಳು ಇವೆ.
**
ಹಿಮಾಲಯದ ಪರ್ವತಗಳಲ್ಲಿ ಮನಸ್ಸಿಗೆ ಬಂದ ದಾರಿಗಳನ್ನು ಹಿಡಿದು ಸ್ವಚ್ಛಂದ ಚಾರಣ ಮಾಡುತ್ತಾ ಆ ಬೆಳ್ಳಿ ಬೆಟ್ಟಗಳ ಅಗಾಧತೆಯನ್ನು ಅರಿತುಕೊಳ್ಳುವ ಅಧ್ಬುತ ಅನುಭೂತಿಯನ್ನು ಆ ನಠಭೈರವಿ ಆಲಾಪನೆ ನೀಡುತಿತ್ತು.

ಮುಂಗಾರಿನ ಮೇಘಗಳು ವಿವಿಧ ಆಕಾರಗಳನ್ನು ತಾಳುತ್ತ ಗಗನವನೆಲ್ಲ ಆಕ್ರಮಿಸಿ ಜಗದ ಜೀವರಾಶಿಯನ್ನು ಸುತ್ತುವರೆದಂತೆ ಆ ರಾಗ ವಿಸ್ತಾರ ಮುಂದುವರೆಯಿತು.

ಸಾಸಿವೆ ಗಾತ್ರದ ಬೀಜವೊಂದು ಭುವಿಯಲ್ಲಿ ಬಿದ್ದು ಅಂಕುರಿಸಿ ಬೆಳೆದು ಹೆಮ್ಮರವಾಗಿ ಮೈತುಂಬಾ ಹಸಿರು ತುಂಬಿಕೊಂಡು ಕಂಗೊಳಿಸುವ ಚೆಲುವಿನಂತೆ ನಾದವೊಂದು ಬೆಳೆಯುತ್ತಿತ್ತು.**
Profile Image for Soumya.
226 reviews49 followers
June 19, 2021
ವಿಷಮ ಭಿನ್ನ ರಾಶಿ,

ವಸುದೇಂದ್ರ ಅವರ ಬರಹ ಯಾವಾಗಲೂ fresh ಅನ್ಸತ್ತೆ. ಅವರು ಒಬ್ಬ ವ್ಯಕ್ತಿಯನ್ನ ಅಥವಾ ಘಟನೆಯನ್ನ ವಿವರಿಸೋ ರೀತಿ ಚೆನ್ನಾಗಿದೆ. ಅವರ ಎಲ್ಲ ಪುಸ್ಯಕಗಳನ್ನು ಓದಿಲ್ಲ. ಆದ್ರೆ ಓದಿದ ಎಲ್ಲ books ಇಷ್ಟ ಆಗಿದೆ

ವಿಷಮ ಭಿನ್ನ ರಾಶಿ ಅಲ್ಲಿ 2 ಭಾಗಗಳಿವೆ. ಮೊದಲನೆಯದು 'ಅಂಶ'. ಇಲ್ಲಿ 5 ಕಥೆಗಳಿವೆ, ವಾಹಿನಿ ಮತ್ತೆ ವಿಷಮ ಭಿನ್ನ ರಾಶಿ ಕಥೆಗಳು ತುಂಬಾ ಇಷ್ಟ ಆದವು, Devil dog ಮಜಾ ಅನ್ನಿಸ್ತು. ಉಳಿದ 2 ಕಥೆಗಳೂ ಚೆನ್ನಾಗಿವೆ.

ಎರಡನೇ ಭಾಗ 'ಛೇಧ' 3 ಕಥೆಗಳು. ಎಲ್ಲವೂ ಮೋಹಣಸ್ವಾಮಿದು.

ಬೇಜಾರ್ ಆಗ್ತಿದೆ, ತೀರ serious book ಓದೋ ಮನಸ್ಸಿಲ್ಲ ಅಂದಾಗ, ಈ book ನ ಖಂಡಿತವಾಗಿ ಓದಬಹುದು. ಚಿಕ್ಕ ಕಥೆಗಳು, simple language.. ಆದ್ರೆ ಮನಸಲ್ಲಿ ಉಳಿವ ಕಥೆಗಳು.

Last but not the least, book ನ cover ಮೇಲೆ ಇರೋ ಆ ಹಕ್ಕಿ ತುಂಬಾ ಚೆಂದ ಅನ್ನಿಸ್ತು.
Profile Image for Manasa Kulkarni.
26 reviews
August 29, 2025
ವಿಷಮ ಭಿನ್ನರಾಶಿ
-ವಸುಧೇಂದ್ರ

ಇವರ ಪುಸ್ತಕಗಳು ಸದಾ ಹೊಸತನ್ನು ಹೊತ್ತು ತರುತ್ತವೆ, ಈ ಪುಸ್ತಕವೂ ಹೊರತಲ್ಲ. ಎರಡು ಭಾಗಗಳಿವೆ ಈ ಕಥೆ ಪುಸ್ತಕದಲ್ಲಿ - ಅಂಶ ಮತ್ತು ಛೇದ.
ಅಂಶದಲ್ಲಿ 5 ಕಥೆಗಳು - ಪರಿಸರ, ನಿಯಮಗಳು, ಮಾನವನ ಸ್ವಭಾವ, ವಂಶವಾಹಿನಿ ಇವುಗಳ ಕುರಿತಾದರೆ ಛೇದದಲ್ಲಿ ಬರುವ ಮೂರು ಕಥೆಗಳು ಇವರ 'ಮೋಹನ ಸ್ವಾಮಿ' ಪುಸ್ತಕವನ್ನು ನೆನಪಿಸುತ್ತವೆ. ಎಲ್ಲವೂ ಸಲಿಂಗ ಕಾಮಿಗಳ ಕುರಿತಾದದ್ದು, ಅವರ ನೋವು, ಸವಾಲುಗಳ ಕುರಿತಾದದ್ದು.

ನನಗೆ ಮೊದಲ ಭಾಗದ 'ಡೆವಿಲ್ ಡಾಗ್' ಕಥೆ ತುಂಬಾನೇ ಇಷ್ಟವಾಯಿತು, ಎರೆಡೆರಡು ಬಾರಿ ಓದಿದೆ. ಈ ಕಥೆಯನ್ನು ಲೇಖಕರು ಸತ್ಯಜಿತ್ ರೇ ಅವರಿಗೆ ಅರ್ಪಿಸಿದ್ದು ಸರಿಯೂ ಹೌದು, ಸಮಂಜಸವೂ ಹೌದು ಮತ್ತು ನನಗದು ಇಷ್ಟವಾಯಿತು.

ಒಂದು ರೀತಿಯ ಹೊಸ ಕ್ರಾಂತಿಯ ರೂಪದಲ್ಲಿ ರೂಪುಗೊಳ್ಳುವ ಎರಡನೇ ಭಾಗದ ಕಥೆಗಳು ಎಲ್ಲರಿಗೂ ಹಿಡಿಸುತ್ತವೆಯೇ? ಗೊತ್ತಿಲ್ಲ... ಎಲ್ಲ ಕಥೆಗಳು ಬಿಟ್ಟು ಬಿಡದೆ ಓದಿಸಿಕೊಂಡು ಹೋಗುತ್ತವೆ! ನನಗೆ ಬಹಳ ಹಿಡಿಸಿದ ಕೃತಿ....
ಒಮ್ಮೆ ಓದಿ...
Profile Image for Chetan V.
100 reviews3 followers
December 7, 2017
Its written in typical vasudendra style. Smooth flowing language, incidents which reflects day today life. However some times you feel the stories are little jaded. The freshness seen in his earlier work is missing. Its all been there and done that style of stories.

Again the highlight of the book is stories of Mohanswamy. Vasudendra has shown the same dareness which was evident in earlier stories of Mohanswamy. Again its showing a new path to Kannada literature.
Profile Image for Saritha Pai.
41 reviews30 followers
May 1, 2019
Simple narration ! Collection of good stories. One among them was about a girl who faces problem in her marriage proposals bcz of her mentally handicapped brother... how she was able to withstand against it and being supportive to him. Truly that story has touched my heart!
Profile Image for Nishchita.
15 reviews4 followers
February 13, 2023
ಅಂಶ ಹಾಗೂ ಛೇದ ಎರಡು ವಿಭಾಗಗಳಲ್ಲಿ ಕಥೆಗಳಿವೆ. ಅಂಶ ವಿಭಾಗದಲ್ಲಿ ೫ ಕಥೆಗಳಿದ್ದು ಒಂದಕ್ಕೊಂದು ವಿಭಿನ್ನವಾಗಿವೆ. 'ಡೆವಿಲ್ ಡಾಗ್' ಕಥೆ ನನಗೆ ಖುಷಿ ಕೊಟ್ಟಿತು. ಛೇದ ವಿಭಾಗದಲ್ಲಿ ಮೋಹನಸ್ವಾಮಿಗೆ ಸಂಬಂಧಿಸಿದ ೩ ಕಥೆಗಳಿವೆ. ಸರಳವಾದ ಬರವಣಿಗೆಯಿರುವುದರಿಂದ ಕಥೆಗಳನ್ನು ವೇಗವಾಗಿ ಓದಬಹುದು. ಒಮ್ಮೆ ಓದಬಹುದಾದಂತಹ ಪುಸ್ತಕ.
5 reviews
May 28, 2024
ಮೊದಲಾರ್ಧದಲ್ಲಿ ಕೆಲವು ಕುತೂಹಲಕಾರಿಯಾದ ಕಥೆಗಳಿವೆ, ಮಾನಸಿಕ ಆರೋಗ್ಯದ ಮಹತ್ವದ ಕುರಿತು, ಅಥವಾ ಪ್ರಾಣಿ ಪ್ರೀತಿಯ ಕುರಿತೆಲ್ಲ ಕಥೆಗಳಿವೆ.

ದ್ವಿತೀಯಾರ್ಧ ಮೋಹನ ಸ್ವಾಮಿಯ ಮುಂದುವರಿದ ಕಥೆಯಾಗಿದೆ. ಪ್ರತಿಯೊಬ್ಬ ಸಲಿಂಗಿಯೂ ಎದುರಿಸಬಹುದಾದ ಆತಂಕ, ಆಸೆ, ಸಂಕಟಗಳೆಲ್ಲವೂ ಸುಂದರವಾಗಿ ಚಿತ್ರಿತವಾಗಿದೆ.
Profile Image for Mahesh.
89 reviews
April 8, 2018
ವಸುಧೇಂದ್ರರ ಬರೆವಣಿಗೆಯಲ್ಲಿ ಹೊಸತನ ಕಾಣುತ್ತಲೆ ಇರುತ್ತದೆ, ಏಕತಾನತೆಗೆ ಆಸ್ಪದವಿಲ್ಲ. ಪ್ರತಿ ಕಥೆಯು ನವಿರಾಗಿ ಪಾತ್ರಗಳು ನೈಜವೇನೋ ಅನ್ನುವಹಾಗೆ ಮೂಡಿಸುವುದು ಅವರ ಬರೆವಣಿಗೆಯ ವಿಶೇಷ.
31 reviews2 followers
February 2, 2024
Mr Vasudhendra must have bravest heart to write stories of Gay. Very commendable work
Displaying 1 - 14 of 14 reviews

Can't find what you're looking for?

Get help and learn more about the design.