Jump to ratings and reviews
Rate this book

ಕೆಂಪು ಕಳವೆ

Rate this book

Unknown Binding

8 people want to read

About the author

K.T. Gatti

30 books6 followers
Novelist, poet, short-story writer, essayist, playwright, educationist, linguist.... author of over 90 books in Kannada as well as English.
M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teaching of English language, grammar and Phonetics; Published in Kannada 47 novels, 5 anthologies of short stories, 6 anthologies of essays, 2 anthologies of poems, 28 plays, 17 radio plays and a travelogue; Published in the Tulu language a novel and a collection of poems translated from English.
Became a primary teacher at the age of 17 but still continued to learn more.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (50%)
4 stars
1 (50%)
3 stars
0 (0%)
2 stars
0 (0%)
1 star
0 (0%)
Displaying 1 of 1 review
172 reviews20 followers
July 23, 2025
#ಅಕ್ಷರವಿಹಾರ_೨೦೨೫

ಕೃತಿ: ಕೆಂಪು ಕಳವೆ 

ಲೇಖಕರು: ಕೆ.ಟಿ.ಗಟ್ಟಿ

ಪ್ರಕಾಶಕರು: ಅಂಕಿತ ಪುಸ್ತಕ ಬೆಂಗಳೂರು 


ಈ ಪುಸ್ತಕವನ್ನು ಓದಿ ಎರಡು ದಿನಗಳು ಕಳೆದ ನಂತರವೂ ಪರಿಚಯವನ್ನು ಬರೆಯಲು ಹೆಣಗುತ್ತಿದ್ದೇನೆ. ಕಾರಣ ಇದು ಬರಿಯ ಕಾದಂಬರಿ ಅಥವಾ ಒಂದು ಊರಿನ ಕಾಲ್ಪನಿಕ ಕತೆಯೆಂಬ ನಂಬಿಕೆ ಮೂಡುತ್ತಿಲ್ಲ. ಇದು ನಮ್ಮ ಒಂದು ತಲೆಮಾರು ನಡೆಸಿದ ಬದುಕಿನ ಹೋರಾಟದ ಕತೆ. ಇಲ್ಲಿರುವ ಹತ್ತು ಹಲವು ವಿಚಾರಗಳು ಮತ್ತು ಘಟನೆಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನನ್ನ ಅನುಭವಕ್ಕೆ ಬಂದಿರುವುದರಿಂದ ಈ ಮಾತನ್ನು ಧೈರ್ಯದಿಂದ ಹೇಳುತ್ತೇನೆ. ಕತೆಯನ್ನು ಹೆಣೆದ ರೀತಿ ಸಹ ಥೇಟ್ ಬದುಕಿನಂತೆ ಒಂದು ಹೆಜ್ಜೆ ಮುಂದೆ ಹೋದರೆ ಎರಡು ಹೆಜ್ಜೆ ಹಿಂದೆ ಎಂಬಂತೆ ಕಲಸುಮೇಲೋಗರವಾಗಿ ಇಡೀ ಕತೆಯು ಒಂದು ದೊಡ್ಡ ಕ್ಯಾನ್ವಾಸ್ ಮೇಲೆ ಬಿಡಿಸಿದ ಕೊಲಾಜ್ ರೀತಿ ಭಾಸವಾಗುತ್ತದೆ. ಬಹುಶಃ ಯಾರೇ ಒಂದು ಕುಟುಂಬದ, ಹಳ್ಳಿಯ ಕತೆಯನ್ನು ಹೇಳಲು ಪ್ರಾರಂಭಿಸಿದರೆ ಒಬ್ಬರ ಕತೆಯೊಳಗೆ ಇನ್ನೊಬ್ಬರು ಸೇರಿಕೊಂಡು ಅದು ಕೊನೆಯಲ್ಲಿ ಮತ್ತೊಬ್ಬನ ಕತೆಗೆ ಹೊರಳಿ ಮತ್ತೆ ಹಳಿಗೆ ಬಂದು ನಮ್ಮದೇ ಊರಿನ ಕತೆ ಇದು ಎಂಬ ಭಾವವನ್ನು ಮೂಡಿಸುವಲ್ಲಿ ಈ ಕೃತಿಯ ಸೊಗಸು ಅಡಗಿದೆ.


ಕಾಸರ ತಾಲೂಕಿನ ಚೂರಿ ಗ್ರಾಮದ ಮಾರ ಎಂಬ ಪಂಗಡಕ್ಕೆ ಸೇರಿದ ಮಾದ ಎಂಬ ಯುವಕ ಈ ಕತೆಯ ನಿರೂಪಕ. ಅವನು ವಾಸಿಸುತ್ತಿರುವುದು ತನ್ನ ತಾಯಿ ಮತ್ತು ಮೂವರು ತಮ್ಮಂದಿರ ಜೊತೆಗೆ. ಹಳ್ಳಿಯ ಪ್ರತಿಯೊಂದು ಘಟನೆಯು ಮಾದ ಮತ್ತು ಅವನ ಕುಟುಂಬದವರ ಕಣ್ಣಿನ ಮೂಲಕ ಓದುಗರೆದುರು ತೆರೆದುಕೊಳ್ಳುತ್ತದೆ. ಕತೆಯ ಪ್ರಾರಂಭದಲ್ಲಿ ಬರುವ ಒಂದು ಸಾಲನ್ನು ಗಮನಿಸಿದರೆ ಸಾಕು, ಕತೆಯ ಅಂತರಾಳ ಮತ್ತು ಅದು ಸಾಗುವ ರೀತಿ ಸ್ಪಷ್ಟವಾಗುತ್ತದೆ. “ಇದು ಅರಸರ, ಆಳಿದವರ ಕತೆಯಲ್ಲ. ಹಾಗಾಗಿ ಇಲ್ಲಿ ರೆಕ್ಕೆಪುಕ್ಕ ಸೇರಿಸಿ ವರ್ಣರಂಜಿತವಾಗಿಸಬೇಕಾದ ಅವಶ್ಯಕತೆ ಇಲ್ಲ. ಇಲ್ಲಿರುವುದು ಸಾಮಾನ್ಯರು ಬದುಕಿಗಾಗಿ ನಡೆಸಿದ ಹೋರಾಟದ ಕತೆ … ಅಲ್ಲಲ್ಲ ಅವರ ಬದುಕೇ ಇಲ್ಲಿ ಕತೆಯಾಗಿದೆ” ಎಂಬರ್ಥದ ಸಾಲುಗಳು ಓದುಗರಿಗೆ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಬದುಕಿಗೋಸ್ಕರ ಕಷ್ಟಪಟ್ಟು ದುಡಿಯುವ ವರ್ಗದ ಜೊತೆಗೆ ಬಹುಬೇಗನೆ ಶ್ರೀಮಂತರಾಗುವ ಸಲುವಾಗಿ ಹೆಂಡ ಕಾಯಿಸುವವರು, ತಮ್ಮ ಜಾತಿಯ ಬಲ ಹಣ ಬಲದಿಂದ ಶೋಷಿತರನ್ನು ಮತ್ತಷ್ಟು ತುಳಿಯುವವರ ನಡುವೆ ಅದೇ ವರ್ಗದ ಜನರಿಗಾಗಿ ಮರುಗಿ ತಮ್ಮ ಕೈಲಾದ ಸಹಾಯ ಮಾಡುವ ವರ್ಗ, ಹಳ್ಳಿಯಲ್ಲಿ ಕಾಣಬಹುದಾದ ಮತ್ಸರ ಅಸೂಯೆಗಳ ಜೊತೆಗೆ ಆಗಾಗ ನಡೆಯುವ ಹೊಡೆದಾಟ ಬಡಿದಾಟಗಳು, ಇವೆಲ್ಲದರ ನಡುವೆ ಕಾಲ ಸರಿದಂತೆ ಆಧುನಿಕತೆಯ ಜೊತೆಗೆ ವಿದ್ಯಾಭ್ಯಾಸವು ಸೇರಿ ಜನರಲ್ಲಿ ಹೆಚ್ಚೆಚ್ಚು ತಿಳುವಳಿಕೆ ಮೂಡಿದಾಗ ಸ್ವಾಭಾವಿಕವಾಗಿ ಆಗುವ ಬದಲಾವಣೆಗಳು ಇಲ್ಲಿನ ಒಟ್ಟು ಕತೆಯ ಮುಖ್ಯ ಭೂಮಿಕೆಯಲ್ಲಿ ತೆರೆದುಕೊಳ್ಳುತ್ತವೆ. ಇದಕ್ಕೆ ಪೂರಕವಾಗಿ ನಡೆಯುವ ಊರ ಉತ್ಸವ ಜಾತ್ರೆಗಳು, ನಡೆಯುವ ಒಂದೆರಡು ಅನುಮಾನಾಸ್ಪದ ಸಾವುಗಳು, ಪ್ರೀತಿ ಪ್ರೇಮದ ಘಟನೆಗಳು, ಊರಿನವರ ವ್ಯಾಜ್ಯ ಬಿಡಿಸಲು ನಡೆಯುವ ಪೋಲೀಸ್ ಪ್ರವೇಶಗಳ‌ ಜೊತೆಗೆ ನಡೆಯುವ ಇತರ ಘಟನೆಗಳು ಬದುಕಿನ ಕತೆಯನ್ನು ಮತ್ತಷ್ಟು ರೋಚಕವಾಗಿಸುತ್ತವೆ. ಇಷ್ಟೆಲ್ಲಾ ಹೇಳುವಾಗ ಇದು ನಮ್ಮ ಬದುಕೇ ಅಲ್ಲದೇ ಇನ್ನೇನು ಆಗಿರಲು ಸಾಧ್ಯ ಅಲ್ಲವೇ…


ಇಲ್ಲಿ ಪ್ರತಿಯೊಂದು ಘಟನೆಗಳಿಗೆ ಅಥವಾ ಇರುವ ವಿವರಗಳ ವಿಶ್ಲೇಷಣೆ ಸಹ ಚೆನ್ನಾಗಿದೆ. ಲೇಖಕರಾದ ಗಟ್ಟಿಯವರ ವೈಚಾರಿಕತೆಯ ಅಗಾಧತೆಯ ಪರಿಚಯವಾಗುವುದು ಇಲ್ಲಿನ ಕೆಲವು ವಿಶ್ಲೇಷಣೆಗಳನ್ನು ಗಮನಿಸಿದಾಗ…


“ಅಮ್ಮ ನಮಗಾಗಿ ಬಹಳ ತ್ಯಾಗ ಮಾಡಿದಳು ಎಂದು ಭಾವಿಸಿದರೆ ಅಮ್ಮನಿಗೆ ಅಪಚಾರವೆಸಗಿದಂತಾದೀತು. ಅದು ಅವಳ ಬದುಕಾಗಿತ್ತು. ತ್ಯಾಗ ಅಲ್ಲ. ಅವಳು ನಮ್ಮ ಬದುಕಾಗಿದ್ದಳು. ಅವಳಿಗೆ ನಾವು ಬದುಕಾಗಿದ್ದೆವು”


“ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಹಳ್ಳಿಯ ಯುವಕ ಯುವತಿಯರು ನಗರವನ್ನು ಸೇರಿ ಹಳ್ಳಿಯಲ್ಲಿ ಉಳಿಯುವುದು ವಯಸ್ಕರು ಮಾತ್ರವಾದರೆ, ‘ಎಲ್ಲರೂ ಅಕ್ಷರಸ್ಥರು ಆಗಬೇಕು, ಎಲ್ಲರೂ ಸುಶಿಕ್ಷಿತರಾಗಬೇಕು’ ಎನ್ನುವುದು ದೊಡ್ಡ ವೈರುಧ್ಯದಂತೆ ಕಾಣುತ್ತದೆ. ಅರ್ಧಂಬರ್ಧ ವಿದ್ಯಾವಂತರಾದವರು ಇತ್ತ ಹಳ್ಳಿಯ ಕೆಲಸಕ್ಕೆ ಸಲ್ಲದವರಾಗಿ, ಅತ್ತ ನಗರದ ಕೆಲಸಕ್ಕೆ ತಕ್ಕ ಅರ್ಹತೆ ಇಲ್ಲದವರಾಗಿ ಹಳ್ಳಿಯ ಬಡವರಾಗುವ ಬದಲು ನಗರದ ದರಿದ್ರದವರಾಗಿ ಬದಲಾಗುವುದು ವಿದ್ಯೆಯ ವೈಫಲ್ಯವೆಂದೆನಿಸುತ್ತದೆ”.


“ನಮಗಿರಬೇಕಾದ ವಿವೇಕ ಅಥವಾ ಜ್ಞಾನ ಏನೆಂದರೆ ಕಳೆದುಕೊಂಡದ್ದು ಕೆಟ್ಟದೊ ಒಳ್ಳೆಯದೊ, ಪಡೆದುಕೊಂಡದ್ದು ಕೆಟ್ಟದೊ ಒಳ್ಳೆಯದೊ ಎಂದು ಚಿಂತಿಸದಿರುವುದು.ಒಳ್ಳೆಯದೊ ಕೆಟ್ಟದೊ ಎಂದು ವರ್ಗೀಕರಿಸಿ ನೋಡುವುದು ತಪ್ಪು. ಬಹುಶಃ ದುಃಖ ಎಂಬುದಿರುವುದು ವರ್ಗೀಕರಣ ಮತ್ತು ಹೋಲಿಕೆಯ ದೃಷ್ಟಿಯಲ್ಲಿಯೇ.ಆದ್ದರಿಂದ ಕಳೆದುಕೊಳ್ಳುವುದನ್ನು ಕೂಡ ಸಂತೋಷದಿಂದ ಸ್ವೀಕರಿಸಬೇಕು ಅಲ್ವ”.


“ಗೋಸುಂಬೆಯನ್ನು ಅದರ ಮೂಲ ಬಣ್ಣದಲ್ಲಿ ಕಾಣಲು ಹೇಗೆ ಸಾಧ್ಯವಿಲ್ಲವೋ ಹಾಗೇ ಮನುಷ್ಯನನ್ನು ಅವನ ಮೂಲ ಸ್ವಭಾವದಲ್ಲಿ ಕಾಣಲು ಸಾಧ್ಯವಿಲ್ಲ. ಬಹುಶಃ ಮೂಲ ಸ್ವಭಾವ ಎನ್ನುವುದೇ ಇಲ್ಲ. ಯಾರನ್ನೂ ಯಾವತ್ತಿಗೂ ಪೂರ್ತಿ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ”


“ನಮ್ಮ ಬದುಕು ಆಗುವುದು ಅದು ಆಗಬಹುದಾದ ಹಲವು ಸಾಧ್ಯತೆಗಳಲ್ಲಿ ಯಾವುದೋ ಒಂದು. ಆಯ್ಕೆ ನಮ್ಮ ಕೈಯಲ್ಲಿದೆ ಅಂದುಕೊಳ್ಳುತ್ತೇವೆ. ವಾಸ್ತವದಲ್ಲಿ, ಅದು ನಮ್ಮ ಕೈಯಲ್ಲಿ ಇಲ್ಲ. ಬದುಕೇ ಆಯ್ಕೆ ಮಾಡುತ್ತದೆ. ನಮ್ಮ ಆಯ್ಕೆ ಅಂತ ನಮಗನಿಸುತ್ತದೆ. ಮತ್ತೆ ಹಾಗೇ‌ ಹೇಳುತ್ತೇವೆ ಅಷ್ಟೇ”


ಕಾದಂಬರಿಯಲ್ಲಿ ಕೆಲವು ಕಡೆ ಘಟನೆಗಳು ಪುನರಾವರ್ತಿತವಾದಂತೆ ಅನಿಸಿ ಓದಿನ ಓಘಕ್ಕೆ ಅಡ್ಡಿಯನ್ನುಂಟು ಮಾಡುತ್ತವೆ. ಮತ್ತೆ ಕೆಲವು ಕಡೆ ಬದುಕಿನ ಹಸಿಹಸಿಯಾದ ದಟ್ಟ ವಿವರಗಳು ವಿಷಾದವನ್ನುಂಟು ಮಾಡಿ ಪುಸ್ತಕವನ್ನು ಓದಲು ಅಪಾರ ತಾಳ್ಮೆಯನ್ನು ಬೇಡುತ್ತವೆ. ಪುಸ್ತಕವನ್ನು ನಿಧಾನವಾಗಿ ಓದುತ್ತಾ ಹೋದರೆ ಬದುಕಿನ ಹಲವು ಸಾಧ್ಯತೆಗಳು, ವಿವಿಧ ಆಯಾಮಗಳಲ್ಲಿ ಅದಲು ಬದಲಾಗಬಹುದಾದ ಪಾತ್ರಗಳು ಮತ್ತು ಸಂಬಂಧಗಳ ಸೂಕ್ಷ್ಮತೆಯ ಅರಿವಾಗುತ್ತದೆ. ಇಲ್ಲವಾದರೆ ಬರೀ ಒಣ ಕತೆಯಂತೆ ಭಾಸವಾಗುವ ಅಪಾಯವಿದೆ. 


ನಮಸ್ಕಾರ,

ಅಮಿತ್ ಕಾಮತ್ 
Displaying 1 of 1 review

Can't find what you're looking for?

Get help and learn more about the design.