Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಶುದ್ದ ಅಂತಃಕರಣವುಳ್ಳ ಒಬ್ಬ ಲೇಖಕ ಜಯಂತ ಕಾಯ್ಕಿಣಿ. ಸಾಮಾನ್ಯ ಎನಿಸುವ ಸಂಗತಿಗಳಲ್ಲಿ ಇರುವ, ಅಸಮಾನ್ಯ ತಂತುಗಳನ್ನು ಎಳೆಎಳೆಯಾಗಿ ಮೀಟಿ ಓದುಗರ ಮನಸ್ಸಿನಲ್ಲಿ "ಹೌದಲ್ವಾ.." ಎಂದೆನಿಸುವಂತೆ ಮಾಡುವ ಆಪ್ತ ಬರಹಗಳು. ಕಳೆದು ಹೋದ ಬದುಕಿನ ಮತ್ತು ಕಳೆದುಕೊಳ್ಳುತ್ತಿರುವ ಬದುಕಿನ ಪ್ರತಿನಿಧಿ, ಇಲ್ಲಿರುವ ಬರಹಗಳು ಅನ್ನುವುದು ನನ್ನ ಅನಿಸಿಕೆ.
ಜಯಂತ್ ಕಾಯ್ಕಣಿಅವರ ಬರಹದಲ್ಲಿ ಅದೆಂತದೋ ಜಾದೂ ಇರುತ್ತೆ ಅಂತ ಕೇಳಿದ್ದೆ ಆದ್ರೇ.. ಲೈಬ್ರರಿಯಲ್ಲಿ ಸಿಕ್ಕ ಈ "ಬೊಗಸೆಯಲ್ಲಿ ಮಳೆ" ಓದಿದ್ ಮೇಲೆ ತಿಳೀತು..ಅದು ಜಾದೂ ಅಷ್ಟೇ ಅಲ್ಲ ಕನ್ನಡ ಭಾಷೆಯ ಭಾವ,ಸ್ಪಷ್ಟತೆ, ಮೃದುತ್ವ ಹಾಗೂ 'ಜಾಗರದ ಜೀವಗಳ ' ಮಾತಿರದ ನಲುಮೆ'ಯ 'ಕಾಗದದ ಕ್ಷಣ' ಗಳೆಂದು..