Jump to ratings and reviews
Rate this book

Ooru Keri - I

Rate this book
Ooru Keri is the autobiography of the famous dalit writer Dr. Siddalingaiah. While the first volume deals with his childhood and youth, recording the emergence of a new, confident, educated dalit from a very humble background.

118 pages, Paperback

13 people are currently reading
88 people want to read

About the author

Siddalingaiah

8 books7 followers
Siddalingaiah (1954 in Magadi, Bangalore – 11 June 2021), was an Indian poet, playwright, and Dalit activist, writing in the Kannada language. He is credited with starting the Dalit-Bandaya movement in Kannada and with starting the genre of Dalit writing. He is one of the founders of the Dalita Sangharsh Samiti along with B. Krishnappa.

He has been head of the Department of Kannada at Bangalore University and a member of the University Syndicate of Kannada University, Hampi. He is acknowledged as a symbol of the Dalit movement and a leading public intellectual and Kannada poet.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
11 (26%)
4 stars
19 (46%)
3 stars
6 (14%)
2 stars
2 (4%)
1 star
3 (7%)
Displaying 1 - 7 of 7 reviews
Profile Image for Abhi.
89 reviews20 followers
February 24, 2021
||• ಊರು ಕೇರಿ - ೧ •||

ಈ‌ ಪುಸ್ತಕಕ್ಕೆ ಅಥವಾ ಯಾರದ್ದೇ ಆತ್ಮಕಥನಕ್ಕೆ ರೇಟಿಂಗ್ ‌ಕೊಡುವುದು ಎಷ್ಟು ಸರಿ ಎನ್ನುವುದು ನನ್ನನ್ನು ಎಂದಿಗೂ ಕಾಡುವ ಪ್ರಶ್ನೆ. ಬರೆದವರ ಗೋಳು ಮೆಚ್ಚಿ‌ದೇನಾ ಎಂಬ ಅಪರಾಧಿ ಭಾವ ಕಾಡುತ್ತದೆ. ಆದರೂ ಪುಸ್ತಕದ ಒಟ್ಟು ಆಶಯ ಅಥವಾ ವಿಷಯ ಪ್ರಸ್ತುತಿಗೆ ಪೂರ್ಣಾಂಕ.

ಮತದಾನ ಪುಸ್ತಕ ಓದಿದ ನಂತರ‌ ಮನಸ್ಸು ಸಿದ್ದಲಿಂಗಯ್ಯನವರ ಜೀವನಗಾಥೆ ಓದಬೇಕು ಎಂದು ಸೆಳೆದಿತು.‌ ಹರಿಚಿತ್ತ ಸತ್ಯವನ್ನು ಓದಿ‌‌‌ ನಂತರ ಓದಿಬಿಡೋಣ ಎಂದು ಊರು‌ಕೇರಿ ಪುಸ್ತಕವನ್ನು ಬದಿಗಿರಿಸಿದ್ದೆ. ಎರಡೂ ಪುಸ್ತಕಗಳಲ್ಲಿ‌ ಸ್ವಜಾತಿಗಳ ನಡುವೆಯೇ‌ ಇದ್ದ ಇಬ್ಬಂಧಿಗಳು ಕಂಡವು. ಈ ಹಿಂದೆಯೂ‌‌‌ ಓದಿದ್ದ ಪುಸ್ತಕಗಳಲ್ಲೂ ಈ‌ ಅನುಭವವಾಗಿತ್ತು. ತಾವು ಮೇಲೆಂದು ಕರೆದುಕೊಂಡ ಜಾತಿಗಳ ಜನರ ನಡುವೆಯೇ ಈ ಮಟ್ಟಿನ ಅನಾಹುತಗಳೇ ಆಗುತ್ತಿರುವಾಗ ಸ್ವಧರ್ಮೀಯರಾದರೂ ವಿಜಾತಿಯವರು ಎಂದು ದೂರವೇ ಉಳಿದು ಹೋದ ಅಥವಾ ಉಳಿದಿದ್ದ ದಲಿತರ ಕಥೆಯನ್ನು ಓದುವ ಹಂಬಲ ಹೆಚ್ಚೇ ಆಗಿತ್ತು. ಸಿದ್ದಲಿಂಗಯ್ಯನವರ ಬದುಕು ತೆರೆದುಕೊಂಡಿತ್ತು!!!

ನಾನು ಜಾತ್ಯಾತೀತನಲ್ಲ.‌ ಧರ್ಮಾತೀತ ಎಂಬ ಬಣವೊಂದಿದ್ದರೆ ಅದರ ಹೆಮ್ಮೆಯ ಪ್ರತಿನಿಧಿ‌. ಚಿಕ್ಕಂದಿನಲ್ಲಿ ದಲಿತರ ಬದುಕನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಎಷ್ಟೋ ಬಾರಿ ಆ ಧರ್ಮಗಳು ಹೀಗೆ ಮಾಡುತ್ತಿವೆ ಎಂದು ದೂರು ಮಾಡುವ ನೋವು ನಮ್ಮೊಳಗಿನ ಈ ಜಾತಿಯ ಹುಳುಕುಗಳನ್ನು ಸರಿ ಮಾಡಿಕೊಳ್ಳಲಿಲ್ಲವಲ್ಲ ಎಂದು ಸೋಜಿಗ ವ್ಯಕ್ತಪಡಿಸಿದ್ದೇನೆ. ೧೯೬೦-೭೦ರ ದಲಿತ ವರ್ಗದ ಕಥೆಯನ್ನು ವಿವರಿಸುತ್ತಾ ಹೋಗುವ ಊರು ಕೇರಿ ಪುಸ್ತಕ ಕೇವಲ ಸಿದ್ದಲಿಂಗಯ್ಯನವರೊಬ್ಬರ ಆತ್ಮಕಥನವಾಗಿಲ್ಲ. ಅವರ ಇಡೀ ಪಂಗಡದ್ದೇ ಎಂದರೂ ತಪ್ಪಲ್ಲ!! ಇತ್ತೀಚೆಗೆ ೨೦೦೦ನೇ ಇಸವಿಯಾಚೆಗೆ ಅವರ ಕಾರ್ಪಣ್ಯಗಳು ಕುಗ್ಗಿವೆ ಎಂದನಿಸಿದರೂ ಶತಶತಮಾನಗಳಿಂದ ನಡೆದ ದೌರ್ಜನ್ಯಕ್ಕೆ ಬಹುಶಃ ಬೆಲೆ ಕಟ್ಟಲಾಗುವುದಿಲ್ಲವೇನೋ... ಗ್ರಾಮ್ಯ ಭಾಗಗಳಲ್ಲಿ ‌ಇನ್ನೂ ಪದ್ಧತಿಗಳು ಚಾಲ್ತಿಯಲ್ಲಿವೆ ಕೂಡ!!!

ಮಂಚನಬಲೆ ಲೇಖಕರ ಹುಟ್ಟೂರು. ಇಂದಿನ ಚಾರಣಿಗರ ಸ್ಥಳವಾದ ಸಾವನದುರ್ಗದ ಹತ್ತಿರದ ಒಂದು ಹಳ್ಳಿ. ಅಲ್ಲಿಂದ ಶುರುವಾಗುವ ಪಯಣ ಲೇಖಕರ ಹೋರಾಟದ ಆರಂಭದ ದಿನಗಳವರೆಗೆ ಸಾಗುತ್ತದೆ.‌ ಮಧ್ಯದಲ್ಲಿ ಅವರ ಬಾಲ್ಯ, ವಿದ್ಯಾಭ್ಯಾಸ ಸೇರಿದಂತೆ ಮತ್ತಷ್ಟು ನೆನಪುಗಳನ್ನು ಅನುಭವಗಳನ್ನು ಮುಕ್ತವಾಗಿ ಓದುಗನೊಂದಿಗೆ ಹಂಚಿಕೊಂಡಿದ್ದಾರೆ. ಮೊದಲ ಪುಟದ ಮೊದಲ ನೆನಪಿನಲ್ಲೇ ಓದುಗ ಹನಿಗಣ್ಣಾದರೂ ಆಶ್ವರ್ಯವಿಲ್ಲ.

ಈಗಲೂ ದಲಿತ ಪಂಗಡಗಳಡೆಗೆ ಹಲವಾರು ವಿಷಯಗಳಿಗೆ ತಕರಾರುಗಳಿವೆ. ತಪ್ಪು ಸರಿ ಎಂಬುದು ನಮ್ಮ ತರ್ಕ. ಪೂರ್ವಜರಿಂದ ನಡೆದದ್ದೋ ತಪ್ಪೋ‌ ಒಪ್ಪೋ ಎಂಬುದು ಖಂಡಿತಾ ನಮ್ಮ ನಿಲುವಿಗೆ ‌ಸಿಕ್ಕದ್ದು!!! ನಮ್ಮ ನಿಲುಕಿಗೆ ಸಿಗುವುದು ಇಂದು ಮತ್ತು ನಾಳೆಯಷ್ಟೇ!! ಮಾನವೀಯತೆಗಿಂತಲೂ ಜಾತಿ ಮಿಗಿಲಲ್ಲ! ಧರ್ಮವೂ ಅಲ್ಲ!!! ಹಿಂದುಳಿದ ವರ್ಗದವರಿಗೆ ಎಂಬ ಪದಕ್ಕಿಂತಲೂ ಶೋಷಿತ ವರ್ಗದವರಿಗೆ ಎಂಬ ಪದ ಉತ್ತಮ. ಅವರಿಗೆ ಬೇಕಿರುವುದು‌ ಚಳುವಳಿಗಳಲ್ಲ, ಹಿಂಸಾಚಾರವಲ್ಲ, ರಕ್ತಪಾತ, ಸೇಡುಗಳಾವುವು ಅಲ್ಲ! ವಿದ್ಯೆಯಷ್ಟೇ ಎಂಬ ಸಂದೇಶ ಹೊತ್ತ ಊರು ಕೇರಿ ಪುಸ್ತಕ ಓದಲೇಬೇಕು.

ಶುಭವಾಗಲಿ...

ಅಭಿ...
Profile Image for Sampat Badiger.
28 reviews
January 11, 2023
ಈ ಪುಸ್ತಕ ಓದಿದಾಗ ಅನ್ನಿಸುವುದು, ನಾನು ಬರೆಯಬಲ್ಲೆ.೧೨ನೇ ಶತಮಾನದ ಬಸವಾದಿ ಶರಣರಂತೆ , ದಲಿತ-ಬಂಡಾಯ ಕವಿಗಳು , ಕೇವಲ ಮನರಂಜನೆಗೆ ಇದ್ದ ಸಾಹಿತ್ಯವನ್ನು , ಜನಸಾಮಾನ್ಯರ ಸಾಮಾಜಿಕ ವಿಚಾರಗಳಾಗಿ ಪರಿವರ್ತಿಸಿದರು.
Profile Image for Ramachandra M.
38 reviews5 followers
June 25, 2021
ಸಿದ್ದಲಿಂಗಯ್ಯ ಅವರು ಸರಳ ಭಾಷೆಯಲ್ಲಿ ಒಬ್ಬ ದಲಿತನ ಬದುಕಲ್ಲಿ ಹುಟ್ಟಿನಿಂದ ನಡೆಯುವ ಆಗುಹೋಗುಗಳನ್ನು ಬಣ್ಣಿಸಿದ್ದಾರೆ. ಕೆಲವೆಡೆ ನೋವು, ದುಃಖ, ಕೆಲವಡೆ ತಮಾಷೆಯೊಂದಿಗೆ ಕೂಡಿರುವ ಈ ಹೊತ್ತಗೆಯನ್ನು ಎಲ್ಲರೂ ಓದಲೇಬೇಕು.
Profile Image for Bharath Manchashetty.
136 reviews3 followers
October 21, 2025
“ಊರು ಕೇರಿ-೧, ಡಾ. ಸಿದ್ಧಲಿಂಗಯ್ಯ ಅವರ ಆತ್ಮಕಥೆಯ ತುಣುಕುಗಳು. 'ಬಂಡಾಯ ಸಾಹಿತಿ', 'ದಲಿತ ಕವಿ' ಎಂದೇ ಪ್ರಸಿದ್ಧರಾಗಿದ್ದ ಇವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ‘ ಹೋಲೆ ಮಾದಿಗರ ಹಾಡು’ ವಿನಂತಹ ಕಾವ್ಯ ಸಾಹಿತ್ಯಗಳನ್ನು ರಚಿಸಿ ಅವರ ಉದ್ಧಾರಕ್ಕಾಗಿ ಹೋರಾಡಿದವರು.

ಸಿದ್ದಲಿಂಗಯ್ಯ ಅವರ “ಊರು ಕೆರಿ” ಆತ್ಮಕಥೆ ಕೇವಲ ವ್ಯಕ್ತಿಯ ಬದುಕಿನ ಕಥೆಯಲ್ಲ — ಅದು ದಲಿತ ಸಮುದಾಯದ ಜೀವನ ಹೋರಾಟ, ಗೌರವ, ಹಾಗೂ ಮಾನವೀಯತೆಯ ಕಾವ್ಯವಾಗಿದೆ. ಗ್ರಾಮ ಮತ್ತು ಕೇರಿ ಎಂಬ ಎರಡು ಲೋಕಗಳ ಮಧ್ಯೆ ನಡೆಯುವ ಅಸಮಾನತೆಯ ಕಥೆಯನ್ನು ಬಡತನದ ಮಧ್ಯೆಯಿದ್ದರೂ ಅದನ್ನು ಹಂಗಿಸದೆ ವ್ಯಂಗ್ಯ ಹಾಸ್ಯ ಶೈಲಿಯಿಂದ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಅವರು ನಿಜವಾದ ಅನುಭವಗಳ ಮೂಲಕ ಚಿಕ್ಕ ತುಣುಕುಗಳಾಗಿ ಬಿಂಬಿಸಿದ್ದಾರೆ.

ಬಾಲ್ಯದ ಬಡತನ, ಸಮಾಜದ ಹೀನದೃಷ್ಟಿ, ಹಾಸ್ಟೆಲ್ ಜೀವನ, ವಿದ್ಯಾಭ್ಯಾಸದ ಹೋರಾಟ — ಇವುಗಳನ್ನೆಲ್ಲ ಅವರು ನಗೆಯೊಳಗೆಯೇ ಹೇಳುತ್ತಾರೆ. ಕೇವಲ ನೋವು ಅಲ್ಲ, ಹಾಸ್ಯ ಮತ್ತು ವ್ಯಂಗ್ಯದಿಂದ ತುಂಬಿರುವ ಈ ಕೃತಿ ದಲಿತ ಸಾಹಿತ್ಯಕ್ಕೆ ಹೊಸ ಶಕ್ತಿ ನೀಡಿದೆ.

ಈ ಕೃತಿಯನ್ನು ಕೇವಲ ಓದಲು ಮಾತ್ರವಲ್ಲ, ಅನುಭವಿಸಲು ಸಾಧ್ಯವಾಗುವ ಕೃತಿಯಾಗಿದೆ. ಸಿದ್ದಲಿಂಗಯ್ಯ ಅವರ ಸರಳ ಭಾಷೆ ಮತ್ತು ಕೆಲವು ಸನ್ನಿವೇಶಗಳನ್ನು ಓದುತ್ತಾ ನಕ್ಕಿದ್ದೇನೆ, ಕೆಲವು ಕಡೆ ಬೆಚ್ಚಿದ್ದೇನೆ. ನಿಜವಾದ ಭಾವನೆ ಮತ್ತು ಬದ್ಧತೆ ಓದುಗರ ಮನದಲ್ಲಿ ಆಳವಾದ ಗುರುತು ಮೂಡಿಸುತ್ತದೆ ಮತ್ತು ನೋವು, ನಗುವಿನ ಜೊತೆ ಆತ್ಮಗೌರವದ ಶಕ್ತಿ ಹೊಂದಿದ ಹೃದಯಸ್ಪರ್ಶಿ ಆತ್ಮಕಥೆಯಾಗಿದೆ.

-ಭರತ್ ಎಂ
ಓದಿದ್ದು ೦೩.೧೦.೨೦೨೫
63 reviews9 followers
August 24, 2023
ನಾನು ಓದಿದ ಅತ್ಯಂತ ಸತ್ಯ, ನೈಜ ಬದುಕಿನ ಆತ್ಮಕಥೆ. ಅಕ್ಷರ ರೂಪಕ್ಕಿಳಿಸಿ ನಮ್ಮ ಕೈಲಿರಿಸಿದ ಸಿದ್ದಲಿಂಗಯ್ಯ ಅವರಿಗೆ ಹೃದಯಪೂರ್ವ ನಮಸ್ಕಾರಗಳು. ಸಹಜ ಬದುಕಿನ ಸುಂದರ ಗ್ರಾಮೀಣ ಪ್ರತಿಭೆ. ಸರಳವಾದ ಭಾಷೆ, ಬೆಟ್ಟದಂತಹ ಕಷ್ಟಗಳಿಗೆ ಹಾಸ್ಯದ ಸ್ಪರ್ಶ ನೀಡಿ ನಿಮ್ಮನ್ನು ೧,೨,೩ ಭಾಗಗಳನ್ನು ಓದಲು ಪ್ರೇರೇಪಿಸುತ್ತದೆ. ಹಳ್ಳಿ ಜೀವನ, ೬೦-೭೦ ರ ದಶಕದ ಬೆಂಗಳೂರಿನ ಚಿತ್ರಣ, ಕೊಳೆಗೇರಿ ದರ್ಶನ, ಬದುಕಿನ ವಿವಿಧ ಹಂತದಲ್ಲಿನ ಕಷ್ಟಗಳು, ದಲಿತ ಹೋರಾಟಗಳು, ಸ್ನೇಹಿತರ ಜೊತೆ ಸಂವಾದಗಳು, ಹಾಸ್ಯ ಪ್ರಸಂಗಗಳು, ಪ್ರೇರಣೆಗಳು, ವಿಶ್ವ ವಿದ್ಯಾನಿಲಯಗಳು, ಕೊನೆಗೆ ವಿಧಾನ ಪರಿಷತ್ತು. ಖಂಡಿತಾ ಓದಿ, ವಿಶಿಷ್ಟ ಅನುಭವಗಳ ಆಗರ.
1 review
Read
October 23, 2019
How to open book
This entire review has been hidden because of spoilers.
Displaying 1 - 7 of 7 reviews

Can't find what you're looking for?

Get help and learn more about the design.