40 ವರ್ಷಗಳ ಹಿಂದೆ ಬೆಂಗಳೂರು ಬಹುತೇಕ ನಿರ್ಜನ ಪ್ರದೇಶಗಳಿಂದ ಕೂಡಿತ್ತು. ಆಗ ಇಲ್ಲಿ ಗಲ್ಲಿಗೊಂದು ವ್ಯಾಯಾಮ ಶಾಲೆಗಳು, ಸಾಮು ಮಾಡಲಿಕ್ಕೆ ದೇಹವನ್ನು ಉಕ್ಕಾಗಿ ಇಡಲಿಕ್ಕೆ ಅನೇಕರು ಹೋಗುವುದು ರೂಡಿಯಲ್ಲಿತ್ತು. ಇಲ್ಲಿ ತಯಾರುಗೊಂಡ ಕೆಲ ಮುಖ್ಯ ಪಟುಗಳು ಆ ಶಕ್ತಿಯನ್ನು ದುರುಪಯೋಗ ಪಡಿಸಿಕೊಂಡು ಕಾಲಾದಂಧೆ ಮಾಡುವಲ್ಲಿ ನಿರತರಾದರು. ಅಂತಹವರಲ್ಲಿ ಮುಖ್ಯರು ಕೊತ್ವಾಲ ರಾಮಚಂದ್ರ, ಜಯರಾಜ್, ಗೋಪಿ.
ಆಗಿನ ಭೂಗತಲೋಕವನ್ನು ಮಟ್ಟಹಾಕಲು ಹೋದಾಗ ಕಂಡಿದ್ದು, ಪಾತಕಿಗಳಿಗೆ ಇದ್ದ ರಾಜಕೀಯ ಬೆಂಬಲ ಮತ್ತು ವ್ಯವಸ್ಥೆಯ ಕರಾಳ ಹೇಡಿತನ. ಇಂತಹ ಜಟಿಲ ವೃಕ್ಷವನ್ನು ಕಿತ್ತು ಹಾಕಲು ಇದ್ದ ಕೆಲವೇ ಕೆಲವು ಖಡಕ್ ಅಧಿಕಾರಿಗಳಲ್ಲಿ ಪ್ರಮುಖರು "ಬಿಕೆ ಶಿವರಾಮ್". ಅಧಿಕಾರಿಗಳಿಗೆ ತಾರವರ್ಚಸ್ಸು ಸಿಗುವುದು ಬಹು ಕಡಿಮೆ, ಸಿಕ್ಕರೆ ಅದು ಸಮಾಜದ ಉರ್ದ್ವ ಸ್ಥಿತಿಗೆ ಕೊಂಡೊಯ್ಯುವ ಲಕ್ಷಣಗಳು. ಹೀಗೆ ಸಿಕ್ಕ ಮುಖ್ಯ ಪೊಲೀಸ್ ಅಧಿಕಾರಿಗಳು - ಶಿವರಾಮ್, ಅಶೋಕ್ ಕುಮಾರ್, ಅಬ್ದುಲ್ ನಜಿಮ್, ಸಂಗ್ರಾಮ್ ಸಿಂಗ್, ಕೆಂಪಯ್ಯ, ಮುದ್ದಯ್ಯ, ಬಿಕೆ ಶಿವಶಂಕರ್ ಮತ್ತು ಇತರರು. ಬೆಂಗಳೂರಿನ ಪಾತಕ ಲೋಕದ ಬಗ್ಗೆ ಬಂದಿರುವ ಪುಸ್ತಕಗಳು ಬಹು ಅಲ್ಪ, ಅವುಗಳಲ್ಲಿ ಮುಖ್ಯವೂ ರವಿ ಬೆಳಗೆರೆರ "ಪಾಪಿಗಳ ಲೋಕದಲ್ಲಿ" ಮತ್ತು ಅಗ್ನಿ ಶ್ರೀಧರರ "ದಾದಾಗಿರಿಯ ದಿನಗಳು" series. ರವಿ ಬೆಳಗೆರೆಯ ಪುಸ್ತಕ ಚೆನ್ನಾಗಿದ್ದರೂ ಅದು ಬಹುತೇಕ ಪಾತಕಿಗಳ ಸಂದರ್ಶನದ ಮಾತುಗಳು ಮತ್ತು ಅಲ್ಲಿ ಪಾತಕಿಗಳನ್ನು ಹೀರೋ ಆಗಿ ಕಂಡಿರುವ ಹಾಗಿರುವುದು ಅಪಾಯಕಾರಿ ಬೆಳವಣಿಗೆ. ಇನ್ನೂ ಅಗ್ನಿ ಶ್ರೀಧರ್ ಸ್ವಯಂ ಮಾಜಿ ಪಾತಕಿಯಾಗಿರುವದರಿಂದ, ಕೊತ್ವಾಲ್ ಮತ್ತು ಜಯರಾಜರ ಜೊತೆಗೆ ಇದ್ದಂತ ವ್ಯಕ್ತಿಯಾಗಿರುವದರಿಂದ ಅದನ್ನು ಒಂದು confession ಆಗೋ ಸ್ವ-ಪ್ರತಿಷ್ಠೆಯಾಗೋ ಕಾಣುವುದು ಸಹ ಅಘಾತಕಾರಿ ಬೆಳವಣಿಗೆ. ಇದೇ ಇತಿಹಾಸವನ್ನು ಶಿವರಾಮ್ ಇಲ್ಲಿ ಹೇಳಿರುವದಾಗಿ ಒಪ್ಪಬಹುದು.
ಶಿವರಾಮ್ ಸಾಹೇಬ್ರು ಬಹುಷಃ ಕನ್ನಡ ಸಾಹಿತ್ಯದ ಗಂಭೀರ ಓದುಗ ಅನ್ನಿಸುತ್ತದೆ. ಕನ್ನಡ ಭಾಷೆಯ ಹಿಡಿತ ಗಟ್ಟಿ ಇದೆ. ಇನ್ನೂ ಲೇಖನವನ್ನು ಶುರು ಮಾಡುವ ರೀತಿ, ಓದುಗನಿಗೆ ಮುಂದೇನು ಎಂಬ ಕೌತುಕ ಕಾಪಾಡಿಕೊಳ್ಳುವಲ್ಲಿ ಗೆದ್ದಿದ್ದಾರೆ. ಒಬ್ಬ ಆದರ್ಶ ಮತ್ತು ಪ್ರೌಢ ಲೇಖಕನಿರುವ ಲಕ್ಷಣಗಳು ದಟ್ಟವಾಗಿ ಕಾಣುತ್ತದೆ. 580 ಪುಟಗಳಲ್ಲೂ ಆ ಮಟ್ಟ ಕಾಪಾಡಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಒಟ್ಟಿನಲ್ಲಿ ಬಹಳ enjoy ಮಾಡಿ ಓದಿದ ಪುಸ್ತಕ.
The narration of BK Shivaram sir is splendid. The honesty maintained in his career has brought him huge respect. His courage in facing the underworld and humanity towards the public and rowdies is really amazing.
Sir you're really a simply amazing personality. Thanks for being such a wonderful human being.