ಕಳೆದು ಹೋದ ಕಾಲವ ನೆನಸಿಕೊಳ್ಳದವರು ವಿರಳ. ಆದರೆ ನಮಗೆ ಪರಿಚಯವೇ ಇಲ್ಲದ(ಇನ್ನು ಆಗಲು ಸಾಧ್ಯವೇ ಇಲ್ಲದ) ಕಾಲವೂ, ಆ ಘಟ್ಟದ ಬಳಕೆಯ ವಸ್ತುಗಳೂ ,ಜನರೂ ಓದಲು ದೊರೆತರೆ ಆ ಖುಷಿಯೇ ಬೇರೆ . 1900 ರಿಂದ ಒಂದು ಶತಮಾನ ಬದುಕಿದ, 'ದೇವರು' ಅಂತಹ ವೈಚಾರಿಕ ಪುಸ್ತಕ ಬರೆದ ಮೂರ್ತಿರಾಯರ ಬದುಕಿನ ಕಥನ ಆಸಕ್ತಿದಾಯಕ. ಬ್ರಿಟಿಷರ, ರಾಜರ ಕಾಲದಿಂದ ಪ್ರಜಾಪ್ರಭುತ್ವದೆಡೆಗಿನ ಈ ಸಮಯದಲ್ಲಿ ರಾಜಕೀಯ ಬದಲಾವಣೆಗಳ (ನನಗೆ ನಿರಾಶೆ ತಂದ ವಿಷಯ.ಇಂತಹ ವಿದ್ವಾಂಸ ಅಷ್ಟು ತಟಸ್ಥರಾಗಿದ್ದರೇ ಎಂಬುದು) ಬಗೆಗೆ ಬೆಳಕು ಚೆಲ್ಲದೆ ಬರಿದೇ ವ್ಯಕ್ತಿ ಚಿತ್ರಣಗಳ ಕೊಡುವ ಈ ಆತ್ಮಕತೆ ಆ ಅರ್ಥದಲ್ಲಿ ನಿಜವಾದದ್ದು. ಹಿರಿಯರಿಗೆ ಮೆಲುಕು ಹಾಕಲು ಒಳ್ಳೆಯ ಸಾಮಾಗ್ರಿ. ಹಾಗೇ ನಮ್ಮಂಥಹ ಕಿರಿಯರಿಗೆ ಹೀಗಿತ್ತೇ ಎಂದು ಅಚ್ಚರಿ ಪಡಲೂ.