A decent book trying to focus on the vulnerability of school Teachers in villages before Independent India. This book is written with the eye of an School Inspector, who goes through the struggle of reviving the educational methods and facing the local leaders heat. Book has a story to tell in it's every chapter. A goodread!
ರಂಗಣ್ಣನ ಕನಸಿನ ದಿನಗಳು ಉತ್ತಮ ರೀತಿಯಲ್ಲಿ ರಚಿಸಿರುವ ಕನ್ನಡ ಕೃತಿಗಳಲ್ಲಿ ಒಂದು ಎಂದು ಕಂಡು ಬಂದರೆ ಅದು ತಪ್ಪಾಗಲಾರದು. ಎಂ.ಆರ್.ಶ್ರೀನಿವಾಸಮೂರ್ತಿರವರು ಬರೆದಿರುವ ಈ ಹಾಸ್ಯ ಪದ್ದತಿಯುಳ್ಳ ಕನ್ನಡ ಸಂಕಲನ ಹೆಚ್ಚುಕಡಿಮೆ ಒಬ್ಬ ಸರಳವಾದ ಮನುಷ್ಯನ ದಿನ ನಿತ್ಯದ ಕಥೆಯೂ ಹೌದು. ಈ ಕೃತಿಯಲ್ಲಿ ಕಂಡುಬರುವ ಪಾತ್ರಗಳನ್ನು ಸಾಹಿತಿಕಾರರಾದ ಶ್ರೀನಿವಾಸಮೂರ್ತಿರವರು ತುಂಬ ಸೂಕ್ಷ್ಮತೆಯಿಂದ ಚಿತ್ರಿಸಿರೋದು ಓದುವವರ ಗಮನಕ್ಕೆ ಬರದೆ ಇರುವುದು ಅಸಮಂಜಸ ಎಂದು ಸಮಾರೋಪಿಸಬಹುದು. ಈ ಕಲ್ಪಿತ ಚಾರಿತ್ರಿಕ ಲೇಖನದಲ್ಲಿ ಪ್ರತಿನಿಧಿಯಾದ ರಂಗಣ್ಣನು ಶಾಲೆ ಇನ್ಸ್ಪೆಕ್ಟರಾಗಿ ಅಧಿಕಾರ ವಹಿಸಿಕೊಂಡ ಹೊತ್ತಲ್ಲಿ ಆತನಿಗಾಗುವ ಜ್ಞಾನೋದಯಕರವಾದ ಅನುಭವವನ್ನು, ಬರಹಗಾರರಾದ ಎಂ.ಆರ್.ಶ್ರೀ ಒಂದು ತೊಡಗಿಸಿಕೊಳ್ಳುವ, ಆನಂದಕರವಾದ, ಸ್ವಾರಸ್ಯಭರಿತ ಕಥೆಯ ಮೂಲಕ ತಿಳಿಸಲು ತಮ್ಮ ಪ್ರಯತ್ನನ ಓದುಗರ ಮುಂದೆ ಇಟ್ಟಿದಾರೆ. ಎಂ.ಆರ್.ಶ್ರೀ ರವರ ಬರವಣಿಗೆ ಶೈಲಿಯಲ್ಲಿ ಮೋಜಿನ ಮತ್ತು ತಮಾಷೆಯ ಕಂತುಗಳು ಅತಿ ಹೆಚ್ಚಾಗಿ ಕಾಣಬಹುದು. ಇಲ್ಲಿ ಕಥಾ ನಾಯಕನ ಹಲವಾರು ಗುಣಲಕ್ಷಣಗಳು ಮತ್ತು ಕಥೆಯಲ್ಲಿ ಉಂಟಾಗುವ ವಿಭಿನ್ನ ಸನ್ನಿವೇಶಗಳಲ್ಲಿ ಆತನ ವಿವೇಕವುಳ್ಳ ನಡವಳಿಕೆ ಎಂ.ಆರ್.ಶ್ರೀ ಪ್ರಸ್ತುತಪಡಿಸಿದ್ದ ಸಾಹಿತ್ಯ ಪ್ರಕಾರದಲ್ಲಿ ಬಹಳ ಸಲೀಸಾಗಿ ಸೃಷ್ಟಿಸಿದ್ದಾರೆ. ಎಂ.ಆರ್.ಶ್ರೀ ರಂಗಣ್ಣನ ಕನಸಿನ ದಿನಗಳು ಕೃತಿಯಲ್ಲಿ ರಂಗಣ್ಣನು ಆತನ ಉದ್ಯೋಗ ಜೀವನದಲ್ಲಿ ಅನುಭವಿಸಿದ ಏರುಪೇರುಗಳು, ಆತನಿಗೆ ಆತನ ಕೆಲಸಿನ ಮೇಲಿದ್ದ ಶ್ರದ್ಧೆ, ಆತನ ಸಹೋದ್ಯೋಗಿಗಳು ಆತನ ಮತ್ತು ಆತನ ಕೆಲಸಿನ ಮೇಲಿಟ್ಟ ನಂಬಿಕೆ ಮತ್ತು ವಿಶ್ವಾಸ, ಇಂತಹ ಭಿನ್ನವಾದ ಗಮನ ಸೆಳೆಯುವ ಕಥಾವಸ್ತುವನ್ನು ಓದುಗರ ಮುಂದೆ ಎತ್ತಿಟ್ಟಿದ್ದಾರೆ.
ಎಂ.ಆರ್.ಶ್ರೀನಿವಾಸಮೂರ್ತಿರವರ ಈ ಕಥೆಪುಸ್ತಕದಲ್ಲಿ, ಓದುಗರು ಕಥೆಯಲ್ಲಿ ಬಯಸುವ ಎಲ್ಲ ರೀತಿಯಲ್ಲಿ ಅಹ್ಲಾದ್ಕರವಾದ ಅಂಶ ಕಂಡು ಬರುತ್ತದೆ. ರಂಗಣ್ಣನು ಶಾಲೆ ಇನ್ಸ್ಪೆಕ್ಟರಾಗಿ ದಿನ ನಿತ್ಯ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಇನ್ಸ್ಪೆಕ್ಷನ್ಗೆ ತೆರಳಿ ಮನೆ ಕಡೆ ಹಿಂತಿರುಗುವುದು ಪುಸ್ತಕದ ಮುಖ್ಯ ಕಥಾವಸ್ತು ಆಗಿರುವುದು, ಕೃತಿಯ ವೈಶಿಷ್ಟ್ಯ. ಎಂ.ಆರ್.ಶ್ರೀನಿವಾಸಮೂರ್ತಿರವರ ರಂಗಣ್ಣನ ಕನಸಿನ ದಿನಗಳು ನಾನು ಓದಿರುವ ಉತ್ತಮ ಮಟ್ಟದ ಕನ್ನಡ ಕಾದಂಬರಿಗಳಲ್ಲಿ ಒಂದು. ಹಾಗಾಗಿ ಈ ಕಾದಂಬರಿ ನನ್ನ ರೇಟಿಂಗ್ ಸ್ಕೇಲ್ ಮೇಲೆ ೫ರಲ್ಲಿ ೪ ಅಂಕಗಳು ಗಳಿಸಿದೆ. ರಂಗಣ್ಣನ ಕನಸಿನ ದಿನಗಳು ಓದುವವರಿಗೆ ನಾನು ಒಂದೆ ಮಾತು ಹೇಳಬಲ್ಲೆ, ಮಜಾ ಮಾಡಿ!