Bengaluru Gundappa Lakshminarayana Swamy also known as B. G. L. Swamy and (Kannada: ಬಿ ಜಿ ಎಲ್ ಸ್ವಾಮಿ), was an Indian botanist and Kannada writer who served as professor and head of the department of Botany and as Principal of Presidency College, Chennai. He was the son of D. V. Gundappa (Kannada: ಡಿ.ವಿ. ಗುಂಡಪ್ಪ), an Indian writer and philosopher.
Swamy's literary works encompass a large range of topics. A large number of them are related to botany, and introduce botanical concepts to the layperson. A few of his books cover common plants used in everyday life in a scientific manner
Other works by Swamy pertain to literature, and some are partially autobiographical, dealing with his experiences as professor and principal. Apart from being an acclaimed botanist, BGL Swamy was also widely respected in the history and literary circles. He extensively studied and researched the histories and literatures of both Kannada and Tamil languages. His book Tamilu Talegala Naduve (Among Tamil heads), is devoted to examining theories pertaining to languages' origins (especially the claims that were being made in those days by the Dravidian parties) and mostly debunking them
His book Hasiru honnu (Green is Gold) won the Kendra Sahitya Academy award given by Government of India. With that, Gundappa and Swamy, became the first father and son to win the prestigious award.
ಈ ಪುಸ್ತಕ ನನಗೆ ಸಿಕ್ಕ ಬಗೆ ಸ್ವಾರಸ್ಯಕರವಾಗಿದೆ. ವಿಜಯವಾಣಿಯ ಸಾಪ್ತಾಹಿಕದಲ್ಲಿ ಸ್ವಾಮಿಯವರ ಬಗ್ಗೆ ಬಂದ ಲೇಖನದಲ್ಲಿ ಅವರ ಕೃತಿ ಪಟ್ಟಿಯಲ್ಲಿ ಈ ಕೃತಿಯ ಹೆಸರು ಕಂಡು ಓದಲಿಲ್ಲವಲ್ಲ ಎಂದು ಹಳಹಳಿಸಿದೆ. ಗೆಳೆಯರಾದ ರಾಜೇಶ್ ಶೆಟ್ಟಿಯವರು ನನ್ನ ಬಳಿ ಇದೆ ಅಂದರು. ವಿಘ್ನೇಶ್ವರ ಭಟ್ ಅವರು ನನಗಾಗಿ ಸಮಯ ಮಾಡಿಕೊಂಡು ಗೋಖಲೆ ಇನ್ಸ್ಟಿಟ್ಯೂಟ್ ಕಡೆ ಹೋಗಿ ಈ ಪುಸ್ತಕ ಸಹಿತ ಹಲ ಪುಸ್ತಕಗಳ ಕಾದಿರಿಸಿ ಬಂದರು. ಗೆಳೆಯ ರಾಜುಗೌಡರು ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆ ಹೋಗಿ ಕೊಂಡು ತಂದು ನನಗೆ ಕಳಿಸಿದರು. ಇವರೆಲ್ಲರಿಗೂ ನಾನು ಕೃತಜ್ಞ. ಇದು ಸ್ವಾಮಿಯವರ ಕೊನೆಯ ಪುಸ್ತಕ. ಅವರ ನಿಧನದ ತರುವಾಯ ಪ್ರಕಟವಾದದ್ದು. ಮೊದಲಿನಂದಲೂ ನನಗೆ ಮೈಸೂರೆಂದರೆ ಏನೋ ಕುತೂಹಲ. ಅರಸೊತ್ತಿಗೆ ಪರಂಪರೆಯೋ,ಅಲ್ಲಿಯ ಜನರೋ, ಕೇಫರ ಶೌರಿಯ ಪ್ರಸಂಗಗಳಲ್ಲಿ ವರ್ಣಿತವಾದ ಮೈಸೂರು, ಕಂಡ ಅರಮನೆ, ಹೆಂಡತಿಯ ಅಜ್ಜಿ ಮನೆ ಹೀಗೆ ಹೀಗೆ. ಇಂತಹ ಮೈಸೂರಿನ ಬಗ್ಗೆ ನನ್ನ ಮೆಚ್ಚಿನ ಸ್ವಾಮಿ ಬರೆದಿದ್ದಾರೆ ಅನ್ನುವಾಗ ಓದದೆ ಬಿಡಲಾದೀತೇ? ಬಿ.ಜಿ.ಎಲ್.ಸ್ವಾಮಿಯವರ ಬರವಣಿಗೆಯಲ್ಲಿನ ಮೂರು ಅಂಶಗಳು ಯಾವತ್ತಿಗೂ ಸರ್ವಮಾನ್ಯ. ಸಸ್ಯಗಳ ಬಗೆಗಿನ ಸರಳ ವಿವರಣೆ ಅಧಿಕಾರಿಶಾಹಿಯ ಕುರಿತಾದ ವ್ಯಂಗ್ಯ ನಕ್ಕು ನಲಿಸುವ ಪ್ರಸಂಗಗಳ ವಿವರಣಾ ಶೈಲಿ.
ಅವೆಲ್ಲವೂ ಈ ಪುಸ್ತಕದಲ್ಲಿದೆ. ಮೊದಲ ಲೇಖನವಾದ 'ಮಾನಸಗಂಗೋತ್ರಿಯಲ್ಲಿನ ಋತುಪರ್ಯಾಯ' ಮಾನಸಗಂಗೋತ್ರಿಯ ಪರಿಸರ ವರ್ಣನೆ ಇತ್ತೀಚೆಗೆ ಹೋಗಿ ಬಂದ ಧಾರವಾಡ ವಿಶ್ವವಿದ್ಯಾಲಯವ ನೆನಪಿಸಿತು. ನಮಗೆ ಸ್ವಾಮಿಯವರ ಬದುಕಿನ ಬಗ್ಗೆ ಗೊತ್ತಿಲ್ಲದ ಹಲ ವಿಷಯಗಳ ಅವರೇ ತಿಳಿಸಿಕೊಟ್ಟ ನನ್ನ ಮನೆ,ಲ್ಯಾಬೋರೆಟರಿಯ ಒಳ ಹೊರಗೆ, ಸಂದರ್ಶನ ಪ್ರಾಧ್ಯಾಪಕ, ಪಾಠಕ ವೃತ್ತಿ ಎಂತೆಂತಹ ಪ್ರಸಂಗಗಳು. ಅದರಲ್ಲಿ ಕಾಳಿನಿಂದ ಧೂಳನ್ನು ಬೇರ್ಪಡಿಸಲು ವಿಜ್ಞಾನಿಗಳು ಸಭ ಸೇರಿದ್ದ ಪ್ರಸಂಗವಂತೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.ಅದರಲ್ಲಿ ಸ್ವಾಮಿಯವರು 'ನಮ್ಮಜ್ಜಿ ಮಾಡಿದಂತೆ ಮೊರದಿಂದ ಕೇರಿದಾಗ,ಧೂಳು ಕಾಳು ಬೇರ್ಪಡುತ್ತದೆ' ಅನ್ನುವ ಸಲಹೆ ಕೊಡಹೋದರೆ 'ನಿಮ್ಮ ಅಜ್ಜ ಅಜ್ಜಿಯರ ವಿಷಯ ಮಾತಾಡುವ ಜಾಗವಲ್ಲ ಇದು.ಸೈಂಟಿಸ್ಟುಗಳಲ್ಲದವರು ಮಾತನಾಡಲು ಸ್ಥಳ ಇದಲ್ಲ 'ಎಂಬ ಬದಲು ದೊರೆಯುತ್ತದೆ.
ಅನಂತಮೂರ್ತಿ ಯವರ ಪಾಠಶೈಲಿಯ ಹೊಗಳಿ ಬರೆದ ರೀತಿ ಬೆರಗು ಹುಟ್ಟಿಸುತ್ತದೆ. ಕವಿತೆಗಳ ಗೋಡೆಬರಹವ ಪನ್ ಮಾಡಿದ ರೀತಿ ನೋಡಿ, ' ಬೆಲ್ಜಿಯಮಿನಲ್ಲಿ ಬಿಳಿ ಕೊಲೆ ಕೋಲಾರದಲ್ಲಿ ಕರಿ ಕೊಲೆ ನಾಳೆ ನಡೆಯುವುದಿಲ್ಲಿ ಕಗ್ಗೊಲೆ ಹೆಗ್ಗೊಲೆ ??? '
ಇನ್ನು ವಾಕ್ಯ ರಚನೆಯಲ್ಲಿನ ತಮಾಷೆಗೆ ಸ್ಯಾಂಪಲ್ ನೋಡಿ
'ಧೂಳೊರೆಸಿ ಕಸಗುಡಿಸುವುದಕ್ಕೆಂದೇ ಆಳೊಬ್ಬನನ್ನು ವಿಶ್ವವಿದ್ಯಾಲಯ ನಿಯಮಿಸಿದೆ.ಅವನು ಇಂದು ಹಾಜರಾಗುತ್ತಾನೆಯೇ,ನಾಳೆ ಬರುತ್ತಾನೆಯೇ,ಎಷ್ಟು ಹೊತ್ತಿಗೆ ಬರುತ್ತಾನೆ ಎಂಬುದು ಅವನಿಗೇ ತಿಳಿದಿರುವುದಿಲ್ಲ.ಒಂದು ದಿನ ಸಂಜೆ ಐದು ಗಂಟೆಗೆ ಪೊರಕೆ,ಮೊರ ಹಿಡಿದುಕೊಂಡು ಬಂದ. 'ಲೇಟಾಗಿ ಬುಡ್ತು ಶಾರ್' ಎಂದ.'
'ಅಂತರ್ - ರಂಗ ' ಅನ್ನುವ ಪ್ರಬಂಧದ ಈ ಸಾಲು ಇಂದಿಗೂ ಪ್ರಸ್ತುತ. 'ಎಲ್ಲ ಮತಗಳೂ ಒಂದೇ ಎಂಬುದನ್ನು ಶ್ರುತಪಡಿಸಲು ಬ್ರಾಹ್ಮಣ, ಕ್ರಿಶ್ಚಿಯನ್, ಮುಸಲ್ಮಾನ್ ವೇಷಧಾರಿಗಳನ್ನು ಒಂದೇ ಲಾರಿಯ ಮೇಲೆ ಗೊಂಬೆಗಳಂತೆ ನಿಲ್ಲಿಸಿದ್ದ ಫ್ಲೋಟೊಂದು ಹರಿಯಿತು. ಈ ಮತಗಳಾಗಲಿ,ಧರ್ಮಗಳಾಗಲಿ ಒಂದೇ ಎಂಬುದನ್ನು ಇದು ಯಾವ ರೀತಿಯಲ್ಲಿ ಶ್ರುತಪಡಿಸುತ್ತದೆ? ಒಂದೇ ಹಲಗೆಯ ಮೇಲೆ ಹತ್ತಾರು ಮತೀಯರು ನಿಂತರೆ ಹಲಗೆ ಒಂದೇ ಅಯಿತೇ ಹೊರತು ಹುಳು,ಹಾವು,ಹಸು ಒಂದೇ ಎಂದು ನಿರ್ಣಯವಾಗುತ್ತದೆಯೇ?'
ಪುಸ್ತಕದ ಕೊನೆಯಲ್ಲಿ ಬರುವ ಸ್ವಾಮಿಯವರ ಅಂತಿಮ ದಿನಗಳ ಚಿತ್ರಣ ,ಅವರ ಜೀವನ ಯಾನದ ವಿವರಣೆ, ತಂದೆ ಡಿ.ವಿ.ಜಿ.ಯವರ ಕುರಿತಾದ ಮಾತುಗಳು ಎಲ್ಲವೂ ಚಿನ್ನಕ್ಕೆ ಮೆರುಗು ಕೊಟ್ಟಂತಿವೆ. ಒಟ್ಟಾರೆಯಾಗಿ ಹೇಳುವುದಾದರೆ ಬಿ.ಜಿ.ಎಲ್. ಸ್ವಾಮಿಯವರ ಜೀವನದ ಕುರಿತಾದ ಅನೇಕ ಕುತೂಹಲಗಳಿಗೆ ಉತ್ತರದಂತಿದೆ ಈ ಪುಸ್ತಕ. ಅದರ ಹೊರತಾಗಿಯೂ ನಕ್ಕು ನಲಿಸುವ ಅನೇಕ ಪ್ರಬಂಧಗಳಿಂದ ಶ್ರೀಮಂತವಾಗಿದೆ. ಓದಿ. ಓದಿಸಿ.
'ಸೊಗಸು' ಎಂಬ ಪದಕ್ಕೆ ಅನ್ವರ್ಥನಾಮಗಳೆಂದರೆ ಮೊದಲನೆಯದು 'ಸ್ವಾಮಿಯವರ ಬರಹ', ಮತ್ತೊಂದು 'ಮೈಸೂರು'. ಇವೆರಡನ್ನೂ ಒಟ್ಟಿಗೆ ಕಾಣಬಯಸಿದರೆ ಅಗತ್ಯವಾಗಿ ಓದಬೇಕಾದದ್ದು 'ಮೈಸೂರು ಡೈರಿ'.
ಡಿ ವಿ ಜಿ ಎಂಬ ದಾರ್ಶಕನಿಂದ ದಕ್ಕಿದ ಬಿ.ಜಿ.ಎಲ್.ಸ್ವಾಮಿಯವರು.. ನಿಜಕ್ಕೂ ಕನ್ನಡ ನಾಡಿಗೆ, ಕನ್ನಡ ಸಾಹಿತ್ಯಕ್ಕೆ ಸಿಕ್ಕಿದ ಸರಳ ಸಜ್ಜನಿಕೆಯ ನವಿರು ವ್ಯಕ್ತಿತ್ವದ ಮೇರು ವ್ಯಕ್ತಿ. ಇಂತಹ ವ್ಯಕ್ತಿತ್ವದ ಅಪೂರ್ಣ ಮತ್ತು ಕೊನೆಯ ಪುಸ್ತಕವೇ ಮೈಸೂರು ಡೈರಿ.
ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಸ್ವಾಮಿಯವರ ಎಂದಿನ ವಿಡಂಬನ ಮಿಶ್ರಿತ ಹಾಸ್ಯ ಶೈಲಿಯ ಬರಹಗಳು ನಗುವನ್ನು ಚಿಮ್ಮಿಸಿದರೆ, ಇನ್ನೊಂದು ಅಧ್ಯಾಯ ಸ್ವಾಮಿಯವರ ಪರಿಚಯದ್ದಾಗಿದೆ. ಅದು ಬೋನಸ್. Icing on the cake ಎನ್ನಬಹುದು.
*ಎಲ್ಲ ಕಾಲಗಳಲ್ಲೂ ಸೌಂದರ್ಯವನ್ನು ಮೈದುಂಬಿಕೊಂಡ ಮಾನಸಗಂಗೋತ್ರಿಯ ಹೊರನೋಟವನ್ನು ಬಣ್ಣಿಸುತ್ತಾ, ಅದರಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೇಗೆಲ್ಲಾ ತಮ್ಮ ಕೆಲಸಗಳಲ್ಲಿ ಮೈಮರೆತ್ತಿದ್ದಾರೆಂಬ ಒಳನೋಟವನ್ನು ಬಣ್ಣಿಸಿರುವ 'ಮಾನಸಗಂಗೋತ್ರಿಯ ಋತು ಪರ್ಯಾಯ'.
*ಒಂದು ಉನ್ನತ ವಿಶ್ವವಿದ್ಯಾಲಯವು ಸಂದರ್ಶಕ ಪ್ರಾಧ್ಯಾಪಕನಿಗೆ ಉಳಿದುಕೊಳ್ಳಲು ಮನೆಯನ್ನು ನೀಡಲು ಬೇಕಾಗಿರುವ ನಾನಾ ಕಾರಣಗಳು ಮತ್ತು ನೀಡಿದ ಮನೆಯ ವರ್ಣನಾತೀತ ವೈಭವವನ್ನು ವರ್ಣಿಸಿರುವ 'ನನ್ನ ಮನೆ'.
*ತಂದೆ ತಾಯಿಗಳು ನೀಡಿರುವ ಹೆಸರು ಒಂದು ಕಡೆಯಾದರೆ, ನಮಗೇ ಗೊತ್ತಿಲ್ಲದೆ ಗಳಿಸಿಕೊಂಡ ಹೆಸರುಗಳು ಅನೇಕ. ಇದೇ ತರಹ ಸ್ವಾಮಿಯವರು ಗಳಿಸಿಕೊಂಡ ವಿವಿಧ ವಿನೋದ ಹೆಸರುಗಳು ಮತ್ತು ಅವುಗಳ ಇಂದಿನ ಸ್ವಾರಸ್ಯಗಳ ಇಣುಕುನೋಟ 'ಗಳಿಸಿಕೊಂಡ ನಾಮಾವಳಿ'.
*ಗೆದ್ದಲು ಗೋಪುರಕ್ಕೆ ಕೈ ಹಾಕಿ, ತನ್ನ ಕಾಲಿನಿಂದ ರಕ್ತ ಚಿಮ್ಮಿಸಿಕೊಳ್ಳುವಂತೆ ಮಾಡಿದ 'ಮೈಸೂರು ಗೆದ್ದಲು'.
*'ಯಾರಂತೆ ಗೋವಿಂದ ಅಂದರೆ ಊರಂತೆ ಗೋವಿಂದ' ಎನ್ನುವ ಮಾತಿನಂತೆ ನಡೆಯುವುದನ್ನು ಬಿಟ್ಟರೆ ಆಗುವ ಪಡಿಪಾಟಲುಗಳೇ 'ಸಂದರ್ಶಕ ಪ್ರಾಧ್ಯಾಪಕ'.
*ವಾಕಿಂಗ್ ಮತ್ತು ಶಾಲುಗಳೆಂಬ ಮೈಸೂರಿಗರ ಸಂಪ್ರದಾಯದ ಸಾರವೇ 'ವೈಶಿಷ್ಟ್ಯಗಳೆರೆಡು'.
*ಯು ಆರ್ ಅನಂತಮೂರ್ತಿ ಅವರ ಅದ್ಭುತ ಪಾಠಶೈಲಿ ಮತ್ತು ಜಿ ಎಚ್ ನಾಯಕರ ಸೀರೀಯಸ್ ಬೈಗಳುದ ಬರಹ ರೂಪ 'ಪಾಠಕ ವೃತ್ತಿ'.
*ಕಾಳಿನಿಂದ ಧೂಳನ್ನು ಬೇರ್ಪಡಿಸುವುದು ಹೇಗೆ ಎಂಬ ವಿಜ್ಞಾನಿಗಳ ಸಂಕೀರ್ಣದಲ್ಲಿ ತಮ್ಮ |ಕೇರ್|ಲೆಸ್| ಮಾತುಗಳಿಂದ ಆ ಸಂಕೀರ್ಣದಿಂದ ಬೇರ್ಪಡೆಗೊಂಡ ಬಗೆ 'ಲ್ಯಾಬೋರೇಟರಿಯ ಒಳಗೆ ಹೊರಗೆ'. (ತುಂಬಾ ನಗಿಸಿದ ಬರಹ)
ಸ್ವಾಮಿಯವರ ಬೇರೆಲ್ಲ ಕೃತಿಗಳಂತೆ ಇದರಲ್ಲಿಯೂ ಹಲವಾರು ವಿಷಯಗಳು ಸಂಗತಿಗಳು ತುಂಬಿಕೊಂಡಿವೆ. ಯೂನಿವರ್ಸಿಟಿ ಇದಕ್ಕೆ ಮೂಲವಾಗಿದ್ದರಿಂದ ಶಿಕ್ಷಣ ಕ್ಷೇತ್ರದ ಹಲವು ಪ್ರಸಂಗಗಳು ಸಹ ಇಲ್ಲಿ ದಾಖಲಾಗಿವೆ. ಸ್ವಾಮಿಯವರ ಬರಹ ಶೈಲಿ ನಗಿಸುತ್ತಾ ಹೋದರು ಚಿಂತಿಸುವಂತೆ ಮಾಡುತ್ತದೆ. ಶಿಕ್ಷಣ ಕ್ಷೇತ್ರ ಇಲ್ಲಿ ಕೇಂದ್ರವಾಗಿದ್ದರು ಒಂದು ರೌಂಡ್ ಹಳೆಯ ಮೈಸೂರು, ವಿದ್ಯಾನಿಲಯ, ಆಡಳಿತ ವ್ಯವಸ್ಥೆ, ಸಂಸ್ಕೃತಿ ಸುತ್ತಾಡಿದ ಅನುಭವವಾಗುವುದು ಖಂಡಿತ. ಕಾಲಘಟ್ಟಗಳ ವರ್ಣನೆಯಂತು ಒಮ್ಮೆ ಅವರ ಪಕ್ಕದಲ್ಲಿ ನಿಂತು ನೋಡಿದ ಅನುಭವವಾಗುವಂತೆ ಮಾಡುತ್ತದೆ. ಅವರ ಶಿಕ್ಷಕ ಜೀವನದ ಅನುಭವಗಳನ್ನೆ ಇಲ್ಲಿ ನೀಡಿ ನಗಿಸಿ, ವ್ಯಥೆ ಉಂಟುಮಾಡುವಂತೆ ಬರೆದಿದ್ದಾರೆ. ಓದುತ್ತಾ ಹೋದರೆ ಅವರೊಬ್ಬ ಚಿಂತಕ, ಶಿಕ್ಷಕ, ವಿಡಂಬನಗಾರ ಹೀಗೆ ಹತ್ತು ಹಲವು ಮುಖಗಳು ತೆರೆದುಕೊಳ್ಳತ್ತವೆ.
ತುಂಬಾ ಕುತೂಹಲದಿಂದ ಕೈಗೆತ್ತಿಕೊಂಡ ಪುಸ್ತಕ... ಬದುಕನ್ನು ತೀವ್ರವಾಗಿ ಬದುಕುವುದು ಅಂದರೆ ಬಿ. ಜಿ ಎಲ್. ಸ್ವಾಮಿ ಬದುಕಿದಂತೆ ಬದುಕುವುದು... ಅವರ ಜೀವಿತಾವಧಿಯಲ್ಲಿ ಏಷ್ಟು ಕೆಲಸ ಮಾಡಿದ್ದಾರೆ ಅಂದರೇ... ಅವರು ವಿಧಿವಶರಾಗಿ ದಶಕಗಳೇ ಕಳೆದಿದ್ದರೂ ಅವರು ಕ್ರೋಡೀಕರಿಸಿ ಇಟ್ಟ ಟಿಪ್ಪಣಿ ಗಳಿಂದಲೇ ಪುಸ್ತಕಗಳು ಪ್ರಕಟಾಗುತ್ತಿವೆ... ಸ್ವಾಮಿಯವರು ವಿಜ್ಞಾನ ಸಾಹಿತ್ಯ ಕಲೆಗಳ ತ್ರಿವೇಣಿ ಸಂಗಮ..ಆದರೆ ಅವರು ಹೇಳುವಂತೆ ಅವರಿಗೆ ವಿಜ್ಞಾನವೇ ಇಷ್ಟದ ವಿಷಯ... ಅವರು ಹೇಳುವಂತೆ ವಿಜ್ಞಾನ ಜನಪ್ರಿಯ ಆಗಬೇಕಾದರೆ ಅದನ್ನು ಜನ ಸಾಮಾನ್ಯರ ಮಟ್ಟದಲ್ಲಿ ಹೇಳಬೇಕು...
ಆಡು ಮುಟ್ಟದ ಸೊಪ್ಪಿಲ್ಲ. ಸ್ವಾಮಿಯವರು ಕೈ ಆಡಿಸದಾ ಕ್ಷೇತ್ರವೇ ಇಲ್ಲವಂತೆ... ಪ್ರತಿಯೊಂದು ಕ್ಷೇತ್ರದಲ್ಲಿ ವಿಶೇಷ ಆಸಕ್ತಿ... ಆಳವಾದ ಅಧ್ಯಯನ... ಅದರಲ್ಲಿ ಸಂಶೋಧನೆ... ವ್ಯಕ್ತಿಯೊಬ್ಬನಿಗೆ ಸಾಧ್ಯವಾ ಎನ್ನುವಷ್ಟರ ಮಟ್ಟಿಗೆ ಸಾಧನೆ... ಈ ಪುಸ್ತಕದಲ್ಲಿ ಸ್ವಾಮಿಯವರು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಅವ್ಯವಸ್ಥೆಯನ್ನು ವ್ಯಂಗ್ಯ ವಿಡಂಬನಾತ್ಮಕವಾಗಿ ಹೇಳಿದ್ದಾರೆ .. ಓದುವಾಗ ಮೊಗದಲ್ಲಿ ನಗು ಬಂದರೂ... ನಮ್ ಶಿಕ್ಷಣ ವ್ಯವಸ್ಥೆಯನ್ನು ನೆನೆದು ವ್ಯಥೆಯಾಗುತ್ತತ್ತೆ...
ಈ ಪುಸ್ತಕದಲ್ಲಿ ಒಟ್ಟೂ 11 ಶೀರ್ಷಿಕೆಗಳಿವೆ ಒಂದಕ್ಕಿಂತ ಒಂದು ಭಿನ್ನ… ಅವರ ಮೊದಲ ಲೇಖನ ”ಮಾನಸ ಗಂಗೋತ್ರಿಯಲ್ಲಿ ಋತು ಪರ್ಯಾಯ”ದಲ್ಲೀ ಅವರ ಕವಿ ಮನಸು ಕಂಡರೆ, “ನನ್ನ ಮನೆ”, “ಗಳಿಸಿಕೊಂಡ ನಾಮಾವಳಿ”ಯಲ್ಲಿ ಅವರ ಹಾಸ್ಯ ಪ್ರಜ್ಞೆ ಇಣುಕುತ್ತದೆ. ಪಾಠಕ್ ವೃತ್ತಿ , ಲ್ಯಾಬೋರೇಟರಿ ಒಳಗೆ – ಹೊರಗೆ ಅಲ್ಲಿ ಅವರ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪ ದೋಷಗಳ ಅನ್ನು ಹೇಳುವಾಗ ವ್ಯಂಗ್ಯ ಮುಖಕ್ಕೆ ಹೊಡೆದ ಹಾಗೆ ರಾಚುತ್ತದೆ… ಜೊತೆಗೆ ಅದರ ಬಗ್ಗೆ ಅವರಿಗೆ ಇರುವ ವ್ಯಥೆಯೂ ಕಾಣುತ್ತದೆ. ಇವರ ಯಾವುದೇ ಲೇಖನ ಆದರೂ ಯಾವುದೇ ಒಂದು ಜಾತಿ, ಮತದ ಬಗ್ಗೆ ಅಥವಾ ಬಲಪಂಥ, ಎಡಪಂಥೀಯ ವಿಚಾರಾಧರೆಯ ಬಗ್ಗೆ, ಸ್ತ್ರೀ ಪರ ಪುರುಷ ಪರ.. ಎನ್ನುವ ಪರೀದಿಗೆ ಒಳಪಡದೆ ಬರೆದಿದ್ದಾರೆ… ಅದಕ್ಕೆ ಇವರ ಬರಹವನ್ನು ಸಾರ್ವಕಾಲಿಕ ಸತ್ಯವಾಗಿ ಯಾರು ಬೇಕಾದರೂ ಓದಬಹುದು.. ಅದಕ್ಕೆ ಇವರು ಬಾಕಿ ಎಲ್ಲಾ ಲೇಖಕರಿ ಗಿಂತ ಭಿನ್ನವಾಗಿ ಅನಿಸುತ್ತಾರೆ.