Jump to ratings and reviews
Rate this book

ನೆಲೆ [Nele]

Rate this book
On the death of his friend, a sixty five-year-old man visits his native place to witness the cremation. Through his reminiscences and meetings with other persons related to the deceased, he reflects about life, relations, morality and cosmological questions.

182 pages, Paperback

First published January 1, 1983

11 people are currently reading
285 people want to read

About the author

S.L. Bhyrappa

50 books1,061 followers
Dr S.L. Bhyrappa is a litterateur par excellence. He writes in the south Indian language, Kannada, and has been the bestselling novelist for over 25 years now. His novels are widely translated to pan Indian languages. He is the bestselling novelist in Marathi over the past decade and is among the top-five bestselling authors in Hindi. He is a conscious artist that depicts fundamental human emotions in his novels. In addition to his profound knowledge of Indian philosophical and cultural traditions, Professor Bhyrappa has since his childhood had intense personal experiences in both rural and urban milieu. Consequently, his characters are deeply rooted in Indian soil. Seminars have been and are being held on his novels, and volumes of literary criticism have been published on his works.

His books have found their way to the curriculum of undergraduate and postgraduate degree courses of the universities in the state of Karnataka, and have been the subject of about 20 PhD dissertations. He has penned 24 novels and four volumes of literary criticism and books on aesthetics, social issues and culture. Most of his novels are translated into almost all the Indian languages and six into English. He has served as a Prof. of Philosophy over three decades at NCERT.

Dr Bhyrappa is an avid listener of both Indian and Western classical music and has a keen eye for Art. Travelling has been his paasion since childhood and he has travelled across the globe touching the glaciers of poles, forests of Amazon, deserts of Africa, bustling cities of Europe and the United States. He has trekked in the Alps, the Rockies, Andes and in Fujiama, but the Himalayas remain his greatest passion.

Academic Publications in English
--------------------------------------
Values in Modern Indian Educational Thought, 1968 (New Delhi: National Council of Educational Research and Training)
Truth & Beauty: A Study in Correlations, 1964 (Baroda: M. S. University Press)
20 Research Papers published in various Journals like Indian Philosophical Quarterly, Darshana International, Journal of University of Baroda

Research and Fellowship
----------------------------
National Research Professor, Government of India, 2014
One of the five members of the Indian Literary Delegation that visited China on invitation by the Government of China, 1992
Ford Foundation Award to visit the USA to study the cultural problems of Indian immigrants to the USA, 1983
British Council Fellowship tenured at the School of Education, University of London, 1977

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
65 (34%)
4 stars
82 (43%)
3 stars
35 (18%)
2 stars
6 (3%)
1 star
1 (<1%)
Displaying 1 - 30 of 31 reviews
Profile Image for Ashish Iyer.
866 reviews625 followers
December 7, 2019
This book was quite a different experience for me. The book explore the philosophy of life and death.
It is a story of a sixty year old man who is not married. He learns the death of his close friend and goes for cremation. Through his reminiscences and meeting other persons related to the deceased, he reflects about life, relations, morality and meaningfulness of life questions. And thanks to Bhyrappa for invigorating interest in Garuda Purana.

After reading this book i have two thoughts.
- Meaning of life: Does meaning increase if one is married and has kids versus person who has no immediate family of own.
- Feeling of death: Person who dies experiences near death feelings when his rival in work dies a sudden death.

Overall it was a good read and different concept for me.
Profile Image for Prashanth Bhat.
2,083 reviews138 followers
September 25, 2021
ದಟ್ಟ ಸಾವಿನ ವಾಸನೆ, ಮತ್ತೆ ಶುರು ಮಾಡಿದ ಉದ್ದೇಶ ಅದೂ ಹಠಾತ್ತಾಗಿ ಅಂತ ಮೊದಲು ಸ್ಪಷ್ಟ ವಿರಲಿಲ್ಲ. ಗೊತ್ತಿದ್ದವರೊಬ್ಬರು ಹೋದಾಗ ಹುಟ್ಟಿಕೊಂಡ ನಿರ್ವಾತವೇ? ಒಂದಲ್ಲ ಒಂದು ದಿನ ನಮ್ಮ ದಾರಿಯೂ ಇದೇ ಅಲ್ಲವೇ ಎಂಬ ಆವಾಗವಾಗ ಹೊಳೆದು ಮಾಯವಾಗುವ ಸತ್ಯ ದ ಅರಿವೇ? ಓದಿ ಯಾವ ಕಾಲವಾಯಿತು.ಸರಿಸುಮಾರು ಹನ್ನೆರಡು ವರ್ಷ(ಮೊದಲ ಪಿಯುಸಿ) .ಆಗಕ್ಕೂ ಈಗಕ್ಕೂ ಏನು ವ್ಯತ್ಯಾಸ? ಈಗ ಕಥಾಭಾಗ ನಡೆಯುವ ಹಾಸನ ಮತ್ತು ಅಲ್ಲಿನ ಭಾಷೆ ಕೊಂಚವಾದರೂ ಗೊತ್ತಿದೆ. ಹಾಗಾಗಿ ಕಲ್ಪನೆಗೆ ಪರಿಸರ ಎಟುಕಬಹುದು ಆದರೆ ಭಾವಗಳು? ಕಾಳಯ್ಯ, ಜವರಾಯಿಯ ಡೈಯರಿ ಓದುವಾಗಿನ ವಿಶ್ಲೇಷಣೆಗಳೆಲ್ಲ ಈಗ ಹೊಸ ಅರ್ಥವ ಪಡೆದು ಬೆಳಕ ಬೀರುತ್ತದೆ. ಆಗೆಲ್ಲ ಬರಿಯ ಮನೋವ್ಯಾಪಾರವಾಗಿ ಕಂಡ ಸಾಲುಗಳು ಈಗ 'ಹೌದಲ್ಲ ನನಗೂ ಅನ್ನಿಸಿತಲ್ಲ' ಅನಿಸುತ್ತದೆ. ಕೊನೆಯಲ್ಲಿ ಮಾತ್ರ 'ಇದೆಲ್ಲದರ ಅರ್ಥವೇನು ದೇವರೇ' ಅನಿಸುತ್ತದೆ. ನೆಲೆಯ ತೊಳಲಾಟ ಮುಗಿಯದ್ದು. ಅದಕ್ಕೆ ಅದು ತುಂಬಾ ಕಾಡುತ್ತದೆ



ಬಹುಶಃ ಪ್ರತೀ ಬಾರಿ ಗೊತ್ತಿದ್ದವರ,ಹತ್ತಿರದವರ ಸಾವೊಂದು ಅಪ್ಪಳಿಸಿದಾಗ ಸೃಷ್ಟಿಯಾಗುವ ನಿರ್ವಾತ ಇದೆಯಲ್ಲ ಅದು ನಮ್ಮ ಚರ್ಯೆಗಳ ಪ್ರಶ್ನಿಸುವ ಹಾಗೆ ಮಾಡುತ್ತದೆ. ಯಾಕೆ ಬಂದೆ ನಾನು? ಏನು ಮಾಡುತ್ತಿದ್ದೇನೆ ನಾನು? ಇದೆಲ್ಲ ಯಾಕೆ? ಇತ್ಯಾದಿ ಇತ್ಯಾದಿಗಳು ತಲೆ ದಿಂಬಿಗೊರಗಿದ ಕೂಡಲೇ ಕಣ್ಮುಂದೆ ಸುಳಿದು ನಿದ್ದೆಯ ಓಡಿಸಿಬಿಡುತ್ತದೆ. ಎರಡು ದಿನ ಕಳೆದ ಮೇಲೆ , ಮತ್ತೆ ಮೊದಲಿನ ಹಾಗಾದರೂ ಆ ಎರಡು ದಿನ ಮಾತ್ರ ಅದೇ ತಲೆತುಂಬಾ..ಸತ್ತವರು ಹತ್ತಿರದವನಾಗಿದ್ದರಂತೂ ಅದು ಹೊರಲೇಬೇಕಾದ ಭಾರ. ಈ ಹಿಂದೆ ಮೊದಲ ಓದಿನ ನಂತರ 'ನೆಲೆ' ಯಾವಾಗೆಲ್ಲ ಮತ್ತೆ ಓದಿಸಿಕೊಂಡಿದೆ ಎಂದು ಯೋಚಿಸಿದಾಗ ಈ ಸಾವುಗಳು ಆ ತೊಳಲಾಟ ಎಷ್ಟು ಎತ್ತ ಹೋದರೂ ಮನಸು ಕುಸಿಯದೆ ಮರಳಲ್ಲಿ ಕಾಲು ಹೂತ ಹಾಗೆ ಹೂತುಕೊಂಡದ್ದು ಎಲ್ಲ ನೆನಪಾಯಿತು.
ಗೆಳೆಯನ ಸಾವಿನ ಸಂದರ್ಭದಲ್ಲಿ ಮತ್ತದರ ನಂತರದ ಕ್ರಿಯೆಗಳಾಗುವಾಗ ಅವನ ಬದುಕು ಬಿಚ್ಚಿಕೊಳ್ಳುವಾಗ ಆಗುವ ಈ ಅಂತರ್ಮಥನ ಕಾದಂಬರಿಯ ಮುಖ್ಯ ಭೂಮಿಕೆ.

ಈ ಸಲ ಓದುವಾಗ ಇನ್ನೊಂದು ಅಂಶ ಕಣ್ಣಿಗೆ ಬಿತ್ತು. ಜವರಾಯಿಗೆ ,ನಾಗರಾಜ ತನ್ನ ಮೇಲೆ ಅಕಾರಣ ದ್ವೇಷ ತಳೆದು ಅಪಪ್ರಚಾರ ಮಾಡಿದ್ದಕ್ಕೆ ಉರಿವ ಕೋಪ ಆಮೇಲೆ ಅವನ ಮರ್ಯಾದೆ ತೆಗೆದು ಏನಾಗಬೇಕೆಂಬ ನಿರ್ಲಿಪ್ತಿ ಕೊನೆಗೆ ಅವ ಸತ್ತು ಹೋದ ಎಂದು ಗೊತ್ತಾದಾಗ ಮೂಡುವ ಕನಿಕರ ಇವು ಕೂಡ ನಾವೆಲ್ಲ ಅನುಭವಿಸಿದ ಮನುಷ್ಯ ಸಹಜ ಸ್ವಭಾವವೇ ಅಲ್ಲವೇ?

ನೆಲೆ ಈ ತೊಳಲಾಟಕ್ಕೆಲ್ಲ ಇದೇ ಸರಿ ಎಂಬ ಸಮಾಧಾನ ಕೊಡುವುದಿಲ್ಲ. ಸಾವಿಗೆ ಸೃಷ್ಟಿಯೇ ಉತ್ತರ ಎಂಬ ಸೂಚನೆ ಅದು ಸೂಕ್ಷ್ಮವಾಗಿ ಕೊಡುತ್ತದೆ. ಅದು ಸೂಚ್ಯವಾಗಿದೆ. ಫೆಮಿನಿಸ್ಟುಗಳು ಬಾಯಿ ಬಡಿದುಕೊಳ್ಳುವ ಪುರುಷ ಮೇಲರಿಮೆ- ಪ್ರಕೃತಿ ಹೆಣ್ಣು ಇತ್ಯಾದಿ ಚರ್ಚಾಸ್ಪದ ವಿಷಯಗಳೂ ಇವೆ.
ಆದರೆ ಸಾವಿನ ಸಮ್ಮುಖದಲ್ಲಿ ಬದುಕಿನ ಅರ್ಥ ವಿನ್ಯಾಸಗಳ ಕುರಿತಾದ ಮಥನ ಇದೆಯಲ್ಲ ಅದಕ್ಕೆ ಈ ಕಾದಂಬರಿ ಪ್ರತೀ ಸಲದ ಓದಿಗೂ, ನನಗೆ ಬಿಡುಗಡೆಯ ಭಾವ ಕೊಡುತ್ತದೆ.
Profile Image for That dorky lady.
360 reviews68 followers
July 31, 2024
ಭೈರಪ್ಪನವರ ಕಾದಂಬರಿಗಳು ಸಾರ್ವಕಾಲಿಕ ಅನ್ನೋ ಪೂರ್ವಾಗ್ರಹದಿಂದಲೇ ನೆಲೆ ಕಾದಂಬರಿ ಓದಲು ಆರಂಭಿಸಿದ್ದು. ಓದುತ್ತಾ ನನ್ನ ಆ ಅನಿಸಿಕೆ ಸರಿಯಾದದ್ದೇ ಎಂದು ಮತ್ತೊಮ್ಮೆ ಪಕ್ಕಾ ಆಯ್ತು. ಭಿನ್ನವಾದ ಕಥಾವಸ್ತು.

ಹುಟ್ಟು ಸಾವು, ಅವೆರಡರ ನಡುವಿನ ಗಾಢವಾದ ತಾತ್ವಿಕ ವಿಚಾರಗಳ ಸುತ್ತ ಸುತ್ತುವ ಪಾತ್ರಗಳ ಮನೊವ್ಯಾಪಾರದ ಜೊತೆಗೆ ಮನುಷ್ಯನ ಅದರಲ್ಲೂ ಪುರುಷನ ಜೀವನದ ಉದ್ದಿಶ್ಯವೇನು ಎಂದು ಕಾದಂಬರಿಯ ಮುಖ್ಯ ಪಾತ್ರಗಳು ಜಿಜ್ಞಾಸೆಗಿಳಿಯುತ್ತವೆ.

ಒಂದು ಕಡೆ ಮದುವೆಯಾಗಿ ಸಂಸಾರದ ಬಂಧನದಲ್ಲಿ ಕಳೆದುಹೋಗುವ ಒಬ್ಬ ಮಿತ್ರನ ಜೀವನ, ಮದುವೆಯಿಲ್ಲದೇ ಜೀವನದ ಅಂತಿಮಘಟ್ಟದೆಡೆಗೆ ಚಲಿಸುತ್ತ ಆದರೂ ಬಂಧುಬಾಂಧವರ ಜವಾಬ್ದಾರಿಗಳನ್ನು ಹೊತ್ತ ಮತ್ತೊಬ್ಬ ಮಿತ್ರನ ಜೀವನದ ನಡುವೆ ಹೋಲಿಕೆ ನಡೆಯುತ್ತಾ ಸಾಗುತ್ತದೆ. ಮತ್ತು ಅದಕ್ಕೆ ಸಮಾನವಾಗಿ ಮಕ್ಕಳ ಹಡಿಯೋದು, ಪಾಲಿಸುವುದೇ ಹೆಂಗಸರ ಕೆಲಸ, ಅವರ ಜವಾಬ್ದಾರಿಗಳನ್ನು ನಿಭಾಯಿಸುವುದು ಗಂಡನಾದವನ ಕೆಲಸ ಎಂಬ ಮನೋಭಾವದ ಸುಬ್ಬಲಕ್ಷ್ಮಿಯಿಂದ ಕಾಂಟ್ರಸೆಪ್ಟಿವ್ ತಗೊಳೋ, ಜೊತೆಯಾಗಿ ದುಡಿದು, ಜೊತೆಯಾಗಿ ಕರ್ತವ್ಯದ ಭಾರ ಹಂಚಿಕೊಳ್ಳೋ ಸ್ವಾವಲಂಬಿ ಮನೋಭಾವದ ಮಾಲತಿವರೆಗಿನ, ಅದನ್ನೂ ಮೀರಿ ಮಗುವಿಗೆ ತಂದೆಯ ಅಗತ್ಯವೇ ಇಲ್ಲ ಅನ್ನುವ ರೀತಿ ಮಾತಾಡುವ ಪಾರ್ವತಮ್ಮ.. ಹೀಗೆ ನಡೆಯುತ್ತಿರುವ ಕೌಟುಂಬಿಕ ವ್ಯವಸ್ಥೆಯ ಟ್ರಾನ್ಸಿಷನ್ ಬಗ್ಗೆ, what state that will put men.. ದುಡಿಯಲು, ಬದುಕಲು ಒಂದು ಗಮ್ಯ ಅಥವಾ ಉದ್ದೇಶದ ನೆಲೆಯೇ ಇಲ್ಲವಾದರೆ ಬದುಕು ಯಾಕಾಗಿ ಅನ್ನುವ ವಿಚಾರವೇ ಕಾದಂಬರಿಯ ಉದ್ದೇಶವಿರಬಹುದೇ... ಗೊತ್ತಿಲ್ಲ.

ಒಬ್ಬಳು ಸ್ತ್ರೀ ಒಂದು ಮಗುವಿಗೆ ಜನ್ಮ ನೀಡಿದಾಕ್ಷಣ ತಾಯಿಯಾಗುತ್ತಾಳೆ. ಆದರೆ ಮಗುವೊಂದು ಜನಿಸಿದಾಕ್ಷಣ ಅದರ ಕಾರಣ ಪುರುಷನು ತಂದೆಯಾಗಲಾರ. ಒಂದು ಹೆಣ್ಣು ತನ್ನ ಮಗುವಿನ ಜವಾಬ್ದಾರಿ ಮತ್ತು ಹಕ್ಕುಗಳೆರಡರಿಂದಲೂ ನೀನು ಮುಕ್ತ ಎಂದಾಕ್ಷಣ ಹೆಣ್ಣು ಗಂಡಿನ ಸಂಬಂಧದ ಈಕ್ವೇಷನ್, ಕೌಟುಂಬಿಕ ಸಾಮಾಜಿಕ ವ್ಯವಸ್ತೆಯ ಈಕ್ವೇಷನ್ ಭಿನ್ನವಾಗುತ್ತದೆ ಎನಿಸುತ್ತದೆ.

ಇಷ್ಟಕ್ಕೂ ಜನಿಸುವ ಮಗು ತನ್ನ ತಂದೆ ತಾಯಿಗೆ ಋಣಿಯಾಗಿರಬೇಕೇ ಅಥವಾ ತಮ್ಮ ಬದುಕಿಗೊಂದು ಉದ್ದೇಶವನ್ನು ಕಲ್ಪಿಸಿ ನೆಲೆಯೊದಗಿಸಿದ ಮಗುವಿಗೆ ತಂದೆ ತಾಯಿ ಋಣಿಯಾಗಿರಬೇಕೇ.. ಒಟ್ಟಾರೆ ಹತ್ತಾರು ದಿಕ್ಕಿನಲ್ಲಿ ಯೋಚನೆಗೆ ಹಚ್ಚುವ ವಿಭಿನ್ನ ಕಾನ್ಸೆಪ್ಟ್. Very thought provoking and a bit uncomfortable.
Profile Image for Nayaz Riyazulla.
408 reviews88 followers
May 27, 2023
ನಮ್ಮ ದೈನಂದಿನ ಜಂಜಾಟದಲ್ಲಿ ಕೆಲ ತಾತ್ವಿಕ ನೆಲೆಗಳು, ಅವುಗಳ ಪ್ರಭಾವಗಳು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ತೋರಿಸುವ ದಾರಿಯ ಕಂದಿಲು ಈ ಪುಸ್ತಕ.

ಒಮ್ಮೆ ಯೋಚಿಸಿ- ಸಾವು ಎಂದರೇನು, ಗಂಡು ಎಂದರೇನು, ಮದುವೆ ಎಂದರೇನು, ಮಗುವಿನ ಜವಾಬ್ದಾರಿಯನ್ನು ತಂದೆಯೇ ಏಕೆ ಕೊಳ್ಳಬೇಕು, ಮುಟ್ಟು ನಿಂತಮೇಲೆ ಹೆಣ್ತನದ ಮೌಲ್ಯವೇನು. ಇಂತಹ ಪ್ರಶ್ನೆಗಳಿಗೆ ಜವರಾಯಿ, ಕಾಳಪ್ಪ ಮತ್ತು ಪಾರ್ವತಿ ಎಂಬ ಉತ್ತಮ ಪಾತ್ರಗಳಿಂದ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ ಭೈರಪ್ಪ.

ಭೈರಪ್ಪರ ಕಾದಂಬರಿಗಳ ಸ್ತ್ರೀ ಪಾತ್ರಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ನಾವು ಕಾಣಬಹುದು- ಪರ್ವದ ಪೃಥೆ, ದ್ರೌಪದಿ, ಉತ್ತರಕಾಂಡದ ಸೀತೆ, ವಂಶವೃಕ್ಷದ ಕಾತ್ಯಯಿನಿ, ದಾಟುವಿನ ಸತ್ಯ, ಗೃಹಭಂಗದ ನಂಜಮ್ಮ ಇನ್ನೂ ಹಲವು. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ನೆಲೆಯ ಪಾರ್ವತಿ. ಈಕೆಯ ದಿಟ್ಟ ನಿಲುವು ಉಸಿರನ್ನು ಉಬ್ಬಿಸುತ್ತದೆ ಉದಾ: ಪ್ರಕೃತಿ ನಿಯಮದಲ್ಲಿ ಎಲ್ಲ ಜಂತುಗಳು ತಮ್ಮ ಸಂತತಿಯ ಜವಾಬ್ದಾರಿಯನ್ನು ತಾಯಿ ತೆಗೆದುಕೊಳ್ಳುವಾಗ ಮನುಷ್ಯರಲ್ಲಿ ಭೇದವೇತಕ್ಕೆ ಎಂಬ ಪ್ರಶ್ನೆಯೊಡ್ಡುತ್ತಾಳೆ.

ಜವರಾಯಿಯ ಸಾವಿನಿಂದ ತೆರೆದುಕೊಳ್ಳುವ ಈ ಕೃತಿ, ತಾತ್ವಿಕ ತೊಲಳಾಟಗಳನ್ನು ವಿಶ್ಲೇಷಿಸುವ ಒಂದು ಸುಕೃತಿ.
Profile Image for Soumya.
214 reviews47 followers
September 7, 2023
ಇಬ್ಬರು ಜೀವದ ಗೆಳೆಯರು.
ಒಬ್ಬನ ಸಾವಿಗೆ ಮತ್ತೊಬ್ಬ ಊರಿಗೆ ಬಂದಾಗ ಅವನಲ್ಲಿ ಆಗುವ ಹಲವು ವಿಷಯಗಳ ತರ್ಕ, ವಿಮರ್ಶೆಗಳ ಮೂಲಕ ಸಾಗುವ ಕಥೆ.

ಮದುವೆ ಆದವನು ಸುಖಿಯೋ ಅಥವಾ ಅಗದವನೋ?
ಒಂದು ಗಟ್ಟಿ ಸಂಬಂಧಕ್ಕೆ ಮದುವೆಯ ಬಂಧ ಬೇಕೆ ?
ವಿವಾಹದ ಆಚೆಗಿನ ಸಂಬಂಧವನ್ನು ಹೇಗೆ ಸ್ವೀಕರಿಸಬೇಕು, ತಂದೆ ಮಕ್ಕಳ, ತಾಯಿ ಮಕ್ಕಳ ಸಂಬಂಧ ಹೀಗೆ ಹಲವು ವಿಷಯಗಳ ಸುತ್ತ ನಡೆಯುವ ಕಥೆ.
Profile Image for Ujjwala Singhania.
221 reviews68 followers
April 15, 2023
Aadhar talks about how a person starts peeling off the layers of his lived life when he feels death to be round the corner. Kariappa, the protagonist, is in his sixties and starts to question and understand his life, the choices he made, the morality of those choices, the relationships that he had…all those roads that a person traverse through in his life. In this introspection, he is accompanied by the journal of his closest friend who has just died.
Bhyrappa ji tackles the many layers of life very well and in his unique style. Though I liked the book, for some reason it didn’t take me through a process of self-reflection. Overall, it is a good read.
Profile Image for Poojashiberkere.
27 reviews
March 4, 2016
This story is about life and death.

I got completely involved with the story when Kalegowda starts reading the dairy of Javaraya. In the dairy, he has expressed about death, extra marital affair, fatherhood etc..

Happy to pick the best novel as it was my first Kannada novel to read.
Profile Image for Sanjay Manjunath.
177 reviews10 followers
August 23, 2025
ಹುಟ್ಟು ಸಾವಿನ ನಡುವಿನಲ್ಲಿ ಜೀವನವನ್ನು ಕಂಡುಕೊಳ್ಳುವ, ಜೀವನದ ವಿವಿಧ ಸ್ತರಗಳನ್ನು ಕಂಡುಕೊಳ್ಳುವ, ಗಂಡು ಹೆಣ್ಣಿನ ದೃಷ್ಟಿಕೋನಗಳನ್ನು ಕಂಡುಕೊಳ್ಳುವ ವಿಮರ್ಶಾತ್ಮಕ ತುಲನೆಯೇ ಈ ನೆಲೆ.

ಜವರಾಯಿ ಎಂಬ ಜೀವದ ಗೆಳೆಯನ ಸಾವಿನ ಸುದ್ದಿಯೊಂದಿಗೆ ಊರಿಗೆ ತೆರಳುವ ಕಾಳಪ್ಪನಿಗೆ, ಜವರಾಯಿ ತನ್ನ ಡೈರಿಯಲ್ಲಿ ಬರೆದುಕೊಂಡ ಜೀವನದ ಮಜಲುಗಳು ಉದ್ದರಿಸುವುದು ಪ್ರಶ್ನೆಗಳ ರೂಪದ ಚಿಂತನೆಗಳು.

ಸಾವು ಎಂದರೇನು? ಮನುಷ್ಯನ ಜೀವಿತದ ಉದ್ದೇಶವೇನು? ಗಂಡಸಿನ ಸ್ವಂತ ಜೀವನ ಮತ್ತು ಕುಟುಂಬ ಜೀವನದ ಪ್ರಮಾಣಗಳೆಷ್ಟು? ಹೆಂಗಸಿನ ಪರವಾಲಂಬನೆ ಮತ್ತು ಸ್ವಾವಲಂಬನೆಯ ಪ್ರಮಾಣಗಳೆಷ್ಟು? ಮದುವೆ ಎನ್ನುವುದು ಮುಖ್ಯವೇ? ಒಂದು ಗುರಿ ಅಥವಾ ಜವಾಬ್ದಾರಿಗಳು ಇಲ್ಲದೆ ಹೋದರೆ ಮನುಷ್ಯನ ಜೀವನಕ್ಕೆ ಬೆಲೆಯಾದರೂ ಏನು? ಹೀಗೆ ಹಲವು ಪ್ರಶ್ನೆಗಳನ್ನು ಓದುಗನೊಳಗೆ ಮೂಡಿಸುತ್ತಾ, ಉತ್ತರವನ್ನು ತೋರಿಸುತ್ತಾ(ಅದು ಅವರವರಿಗೆ ದಕ್ಕಿದಷ್ಟು ಮಾತ್ರ) ಹಲವು ತಾತ್ವಿಕ ವಿಚಾರಗಳನ್ನು ಸಾದರಪಡಿಸುತ್ತಾ ಹೋಗುವ ಕಥಾನಕವೇ ನೆಲೆ.

ಜವರಾಯಿ ಮತ್ತು ಕಾಳಪ್ಪನಷ್ಟೇ ಆವರಿಸುವುದು ಪಾರ್ವತಿಯ ಪಾತ್ರ. ಆ ಪಾತ್ರದಲ್ಲಿನ ಗಟ್ಟಿತನ, ವಿಚಾರವಂತಿಕೆ, ನಿಜಾಯಿತಿ ತುಂಬಾ ಕಾಡುತ್ತೆ.
ಆದರೆ ತಾಯಿಯಾಗಿ ಸೋತಳು ಎಂಬ ಅಂಶ ಕಥೆಯ ಓಘದಲ್ಲಿ ಕಾಣುವುದಿಲ್ಲ.

ಪಾರ್ವತಿಯ ಸ್ವಾವಲಂಬನೆ ಜೊತೆಗಿನ ವಿಚಾರವಂತಿಕೆ, ಮಾಲತಿಯ ಆಧುನಿಕತೆ, ಸುಬ್ಬುಲಕ್ಷ್ಮೀಯ ಪರಾವಲಂಬನೆ ಸಮಾಜದಲ್ಲಿನ ಹೆಣ್ಣಿನ ಚಿತ್ರಣಗಳನ್ನು ತೋರಿಸಿಕೊಡುತ್ತದೆ. ಇಷ್ಟಲ್ಲದೆ ಖಗೋಳ ವಿಜ್ಞಾನ, ಸಾವಿನ ನಂತರದ ಕ್ರಿಯೆಗಳು, ವೃತ್ತಿ ವೈಷಮ್ಯಗಳು ಮುಂತಾದ ವಿಷಯಗಳು ಬಂದು ಹೋಗುತ್ತವೆ.

ಒಟ್ಟಿನಲ್ಲಿ ನೆಲೆಯೂ ಅವರವರ ಭಾವಸೆಲೆಗೆ ದಕ್ಕಿದಷ್ಟು ಮಾತ್ರ.
Profile Image for Shashank Naik.
10 reviews2 followers
July 24, 2014
It was never before experience. What situations the book creates. I don't think anyone can live life twice by choosing two different options. But this book gives you examples of two people who chose different options, whether to marry or not. It clearly analyses both cases dissecting all the scenarios each of them faces. The family life, what it expects you to do, and the serious questions it poses are really great read.
Profile Image for Versha.
290 reviews281 followers
May 15, 2023
First of all, I am so grateful to Storytel app for this audiobook which helped me read this book in its original language. It is the first SLB sir's book that I’ve read in Kannada.

A little bit of philosophy: When we read an insightful book our thoughts are consumed by questions. This book questions us and makes us ponder over a few subjects as well. To think this book was written 40 years ago and is so relevant even to this day makes it a classic. I do feel it was way ahead of its time as well. Thousands of thoughts crossed my mind while reading this book and one such thought is about the title itself ‘Nele’. ‘Nele’ in English means ‘base’ or keeping this book in context it means ‘habitat’ maybe (well that is the sad part of a translation you won't get the actual meaning but only the gist of it). To be precise in this context I feel this book makes us think about ‘where we belong.’ or rather questions us on ‘where do we belong to?’ Often we find ourselves pondering some questions at one point of time in life, and one such question is about belongingness. Do we belong to the place where our ancestors are from or do we belong to the place we are born or do we belong to the place we currently live. Lucky are those for whom all three places are the same but most of us keep wondering about it? Through this book, I kept pondering about it a lot.

Coming back to the book; ‘Nele’ is a philosophical fiction. It is a book about various themes and it is difficult to pinpoint out on just one. It questions life, death, marriage, children, and infidelity. It also throws light on how a man’s needs and wants change throughout his life and how it is different from women’s needs and wants. It also throws light on human beings in general and their emotions where to draw a line, and when to cross it. This book is not about plots or characters it's more about the theme, and that is the essence of the book. This is one of the most non-judgemental books that I have come across. SLB sir has not clearly given a conclusion on what is right and what is wrong. Through his characters, he has shown how two characters choose two different paths in their lives and what it led to in the end, and the rest is left for us to figure out.
Profile Image for Madhu B.
99 reviews10 followers
June 30, 2022
ಹೆಣ್ಣಿಗೆ ಜನನ ಹಾಗು ಮರಣಗಳ ಅನುಭವ ಆಗೋದು, ಗಂಡಿಗೆ ಬರಿ ಮರಣದ ಅನುಭವ.
ಕುಮಾರನಿಗೆ ತಂದೆ ಮರಣದ ನಂತರ ಮಗುವಿನ ಬಯಕೆ ಯಾಕಾಗಿ ?, ತನ್ನ ಆಸ್ತಿಗೆ ವಾರಸುದಾರರು ಇರಲೆಂದೋ ಅಥವಾ ಸತ್ತ ನಂತರ ತನಗೆ ತರ್ಪಣ ಬಿಡುವುದಕ್ಕಾಗಿಯೋ ..
ಪಾರ್ವತಿಯ ದೃಷ್ಟಿ ಒಮ್ಮೆಮ್ಮೊ ಸರಿ ಅನ್ನಿಸುವುದು , ಮಗುವಿನ ಮೇಲಿನ ಹಕ್ಕು ತಾಯಿ ಆಧೋಳಿಗೆ ಜಾಸ್ತಿ.
Profile Image for Prathima Deepak.
141 reviews4 followers
July 6, 2024
ಈ ಪುಸ್ತಕ ನಾವು ಜೀವನವನ್ನು ನೋಡುವ ದೃಷ್ಟಿಯನ್ನು ಬದಲಿಸುತ್ತೆ.
7 reviews4 followers
March 6, 2017
ನೆಲೆಯ ಹಿನ್ನೆಲೆ, ಒಂದು ವಿಷಯವನ್ನು ಬದುಕುವ ಮನುಷ್ಯ ಹೇಗೆ ಕಾಣುತ್ತಾನೆ, ಸಾವು ಸಮೀಪಿಸಿದ ಸಮಯ ಅವನು ಆ ವಿಷಯವನ್ನು ನೋಡುವ ಬಗೆ ಹೇಗೆ? ಬದುಕು ಮತ್ತು ಸಾವಿನ ನಡುವೆ ನಮ್ಮಲ್ಲಿ ನಡೆಯುವ ಎಷ್ಟೋ ವಿಷಯಗಳನ್ನು ನಾವು ಬದುಕಿದ್ದಾಗ ಹೇಗೆ ನೋಡುತ್ತೇವೆ, ಸಾವು ನಮ್ಮೆದುರಿದ್ದಾಗ ಹೇಗೆ ಅದನ್ನು ಭಾವಿಸುತ್ತೇವೆ. ಹೀಗೆ ಎರಡು ತುದಿಗಳ ನಡುವೆ ಸಾಗುವ ಈ ಕಾದಂಬರಿ, ಓದಿದವರಿಗೆ ಬದುಕನ್ನು ಕಾಣುವ ಇನ್ನೊಂದು ದಾರಿ ದೊರಕಿಸಿಕಿಳ್ಳುತ್ತೆ. ಬದುಕಿನ ಅರ್ಥಕ್ಕಿಂತ ಬದುಕಿನ ಆಯಾಮ ತಿಳಿಸುವ ಈ ಕಾದಂಬರಿ ಭ್ಯರಪ್ಪನವರ ವಿಚಾರಗಳು ಎಂಥ ಅದ್ಭುತ ಎಂದು ತಿಳಿಸುತ್ತದೆ.
Profile Image for Karthikeya Bhat.
107 reviews17 followers
December 16, 2018
*ನೆಲೆ* :
ಭೈರಪ್ಪನವರ ವಿಭಿನ್ನ ಕಾದಂಬರಿಗಳಲ್ಲಿ ನೆಲೆಯು ಓಂದು. ತಂದೆಯ ಮತ್ತು ಮಗನ ಸಂಬಂಧದ ಕುರಿತಾದ ಕಾದಂಬರಿ. ಕಾದಂಬರಿ ಉದ್ದಕ್ಕೂ ದಟ್ಟ ಸಾವಿನ ವಾಸನೆಯೆ. ಮನುಷ್ಯ ಸತ್ತ ನಂತರ ೧೦ ದಿವಸ ನಡೆಯುವ ಕರ್ಮಗಳನ್ನೆಲ್ಲ (ದಹನ ಸಂಸ್ಕಾರ, ದರ್ಮೋದಕ ಇನ್ನೂ ಹಲವು), ಭೈರಪ್ಪನವರು ಜವರಾಯಿಯ ಸಾವಿನ ಮೂಲಕ ಅದ್ಭುತವಾಗಿ ವರ್ಣಿಸಿದ್ದಾರೆ.

ಕಾಳಪ್ಪನವರಿಗೆ ತನ್ನ ಆಪ್ತಮಿತ್ರನಾದ ಜವರಾಯಿಯ ಸಾವಿನ ಸುದ್ದಿ ತಲುಪಿದಾಗ ಕಡೆಯ ಬಾರಿ ಓಮ್ಮೆ ನೋಡಲು ಹೋಗುತ್ತಾನೆ. ಅಲ್ಲಿ ಕಾಳಪ್ಪನವರಿಗೆ ಜವರಾಯಿಯ ಡೈರಿ ಸಿಗುತ್ತದೆ, ಜವರಾಯಿಯು ಎಷ್ಟೋ ವಿಷಯಗಳನ್ನು ಕಾಳಪ್ಪನವರ ಹತ್ತಿರ ತೋಡಿಕೊಂಡಿರುತ್ತಾನೆ, ಆದರೆ ಇನ್ನೂ ಎಷ್ಟೋ ಹೊಸ ವಿಷಯಗಳು ತಾನು ಏಕಾಂತದಲ್ಲಿ ಕೂತು ಓದುತ್ತಾ ಜವರಾಯಿಯ ಬಗ್ಗೆ ತಿಳಿದುಕೊಳ್ಳುತ್ತಾನೆ, ಕಾದಂಬರಿಯ ಉದ್ದಕ್ಕೂ ಕಾಳಪ್ಪನವರು ಜವರಾಯಿಯ ಬಗ್ಗೆ ಓದುತ್ತಾ ಹೋಗುತ್ತಾರೆ.

*ಮನುಷ್ಯನನ್ನು ಇರುವಾಗ ತೆಗಳುವುದು, ದ್ವೇಷಿಸುವುದು,ಸತ್ತ ನಂತರ ಹೊಗಳುವುದು, ಪ್ರೀತಿಸುವುದು. ತಂದೆಯ ಬೆಲೆಯನ್ನು ತಿಳಿಯದೇ ಕುಮಾರನು ತನ್ನನ್ನು ಹುಟ್ಟಿಸಿದ್ದೇಕೆ,ತಂದೆಯಾದವನು ತನಗೆ‌ ಏನೂ ಮಾಡಿಲ್ಲವೆಂದು ದೂರುತ್ತಾನೆ. ಅದೇ ತನ್ನ ತಂದೆ ತೀರಿಹೋದಾಗ, ತಂದೆಯು ತನಗೆ ಜನ್ಮ ನೀಡಿದ್ದೆ ಒಂದು ಪುಣ್ಯವೆಂದು ಅರ್ಥಮಾಡಿಕೊಳ್ಳುತ್ತಾನೆ. ಶಾಸ್ತ್ರದಲ್ಲಿ ನಂಬಿಕೆ ಇಲ್ಲದಿರುವ ಕುಮಾರನಿಗೆ ತನ್ನ ತಂದೆಯ ಸಾವಿನಿಂದ ಶಾಸ್ತ್ರದ ಬಗ್ಗೆ ಅಪಾರ ನಂಬಿಕೆ ಹುಟ್ಟಿ ತಂದೆಯ ಕರ್ಮವನ್ನೆಲ್ಲ ನಿಷ್ಟೆಯಿಂದ ಮುಗಿಸುತ್ತಾನೆ. ಮಾಲತಿಯನ್ನು ಮದುವೆಯಾದ ನಂತರ ಕುಮಾರನ ವ್ಯಕ್ತಿತ್ವವೇ ಬದಲಾಗುತ್ತದೆ, ಮಾಲತಿಯು ಖರ್ಚಿನ ವಿಷಯಕ್ಕಾಗಲಿ, ತಂದೆ ತಾಯಿಯರನ್ನು ನೋಡಿಕೊಳ್ಳುವುದಕ್ಕಾಗಲಿ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದವಳು, ನಮ್ಮ ಸಮಾಜದಲ್ಲಿ ಹಲವಾರು ಕುಮಾರ ಮತ್ತು ಮಾಲತಿಯರನ್ನು ಕಾಣಬಹುದು. ಜವರಾಯಿಯ ಸಾವಿನ ಪರಿಣಾಮ ಸದಾ ದ್ವೇಷಿಸುತ್ತಿದ್ದ ತನ್ನ ಮಗ ಕುಮಾರನ ಮೇಲೆ ಹಾಗು ತನ್ನ ಧರ್ಮಪತ್ನಿ ಸುಬ್ಬುಲಕ್ಷ್ಮಿಯ ಮೇಲೆ ಹೇಗೆ ಪರಿಣಾಮ ಬೀರಿತೆಂದು ಇಲ್ಲಿ ಕಾಣಬಹುದು. ಭೈರಪ್ಪನವರು ಈ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಮನುಷ್ಯರ ಸ್ವಭಾವಗಳ ಬಗ್ಗೆ ಸುಂದರವಾಗಿ ವಿವರಿಸಿದ್ದಾರೆ*
ಸಮಯ ಸಿಕ್ಕಾಗ ತಪ್ಪದೇ ಓದಿ
------ *ಕಾರ್ತಿಕ್*
Profile Image for Pradeep T.
120 reviews22 followers
December 27, 2014
I am not sure what to say for this book. This book has an entirely new concept about death. Yes, this book explores the idea of philosophy about death. The main protagonist of the novel is a deadman called Javarayi (his name actually means, Yama, the god of death). He had a best friend called Kalegowda, a big industrialist. The plot of the novel seems very simple at the beginning. Kalegowda receives the news of his friend Javarayi's death. So, Kalegowda decides to visit his friend for last time. There he encounters a diary of Javarayi and this diary entirely consists of the philosophical thoughts of Javarayi about death, about parenthood, about illegal relationship etc... Overall, its a nice concept and philosophy enthusiastic persons will enjoy reading this book.
Profile Image for Karthik Kashyap.
44 reviews
November 2, 2014
The difference of the perception between a man and a woman about giving birth to a child and taking a resposibility of that child is brought up very well.

Upon reading this one should get the question in mind that what is the role or responsibility of a man in giving birth to a child and development it.
Profile Image for Ramya.
8 reviews10 followers
February 9, 2018
Another Best One., involved too much into it., also understood that we cant judge ones deeds by our understanding of things we should also think from their point of view. Beautifully showcased Life, Death, Extra marital Affair, Responsibility of Father. Throughout you will always feel with a deep breath " Nammaddu ishte jeevana"
Thanks for triggering interest in reading GARUDA PURANA :)
Profile Image for Karthik Ramesh.
18 reviews
July 11, 2017
ಮನುಷ್ಯ ನ ಜೀವನ ನೆಲೆ ಕಾಣುವುದು ಕರ್ಮದಲ್ಲೆ,ಭೋಗದಲ್ಲೆ,ಸಹೃದಯರ ಮೈತ್ತಿಯಲ್ಲೆ ಅಥವಾ ಸಾವಿನಲ್ಲೆ?! ಎಂಬ ಜಿಜ್ಞಾಸೆ ಮನ ಮುಟ್ಟಾದಾಗ, ಆತ್ಮಶೋಧನೆ ಎಂಬ ಅಂರ್ತಮುಖ ಪ್ರಜ್ಞೆ ಮನಕೆ ನೀರೆರದು, ಜೀವನಕ್ಕೆ ನೆಲೆಕಾಣಿಸುತ್ತದೆ.
ಇದೆ ನೆಲೆಯ ಒಟ್ಟು ಸಾರಾಂಶ.
Profile Image for Gurumurthi H.
21 reviews
December 6, 2021
..ಮನುಷ್ಯ ನೆಲೆ ಎಲ್ಲಿಯದು ಎಂಬ ಮೂಲಭೂತ ಪ್ರಶ್ನೆಯ ಉತ್ತರ ರೂಪೀ ಕಥನ.
ಜೀವನವಿಡೀ ಒಂದು ಕಡೆ ನೆಲೆ ನಿಂತು ಷಷ್ಠ್ಯಬ್ದಿ ಯ ಹೊಸಲಲ್ಲಿ ಹೊರ ಬಿದ್ದ ಜವರಾಯ..
ಜಂಗಮನಿಂದ ಸ್ಥಿರ ಸ್ಥಿತಿಗೆ ತಲುಪಿದ ಸಾಣಗೆರೆ.

ನೆಲೆಯೇ ಇರದಂತೆ ಬದುಕುವ ಕುಮಾರ...

ಬದುಕಿನ Anchorage ನ ಸೂಕ್ಷ್ಮ ಪರಾಮರ್ಶನ.

ಸಾವು ನಿಮಿತ್ತ ಮಾತ್ರ ಇಲ್ಲಿ.
Profile Image for Pradeepa  Bairana.
29 reviews12 followers
February 20, 2016
This story has philosophy about death.
Protagonist is dead and author express the philosophy about the life and death.
Profile Image for Chetan V.
94 reviews3 followers
January 28, 2019
Classis S L Byrappa novel.
It sets you to think about life and death
Profile Image for Rathish Kumar.
52 reviews3 followers
March 31, 2024
S.L. Bhyrappa's Nele (meaning "base" or "foundation") is a thought-provoking Kannada novel that delves into the big questions of life and death. The story revolves around a bachelor in his sixties who attends the cremation of a close friend. This event triggers a deep introspection about life choices, relationships, morality, and the purpose of existence.

Themes Explored:

Meaning of Life: The novel explores whether a fulfilling life is defined by marriage, children, and traditional societal expectations.
Death and Afterlife: Bhyrappa delves into philosophical and religious concepts surrounding death, particularly drawing on the Garuda Purana.
Relationships: The book examines the complexities of human relationships, including friendship, love, and societal pressures.
Things to Know:

This is a character-driven novel with a focus on internal monologues and philosophical ponderings rather than a fast-paced plot.
Be prepared for mature themes and Bhyrappa's signature style of questioning societal norms.
Recommendation:

If you enjoy philosophical fiction that grapples with life's biggest questions, Nele is a rewarding read. However, if you prefer a plot-driven story with clear answers, this may not be the best choice.

Few things that strikes me;
1. Women can experience how the birth feels but men can’t. For men death is the only reality bcoz only death can be experienced or we can wait for. We have no idea of birth.
2. The feeling that men have, possession & complete ownership of women they love / wife. They will go to the extent of killing someone for maintaining purity of wifes sexuality. “Yonishuddhi” as bhyrappa calls it. When did men fell into such slavery?
Profile Image for Vignesh ವಿಮರ್ಶೆ.
36 reviews
January 4, 2025
This work by SLB makes the reader introspect about life and death. It embodies the fundamental saying that the true measurement of life is possible only when consciousness reaches the brink of death. Line which left me stunned was:

“ಈ ಜೀವನದ ಬೇಕುಬೇಡಗಳನ್ನು ಪ್ರೀತಿಸ್ಥಾನಗಳನ್ನು ಸತ್ತನಂತರದ ಸ್ಥಿತಿಗೂ ವರ್ಗಾಯಿಸಿ ಆಲೋಚಿಸುವುದೇ ಅಲ್ಲವೆ ಮಾಯೆ ಎಂದರೆ?”

Purpose of life, life beyond death, societal pressure around marriage, men and women’s role as a parent, karma, stage of detachment are being brought up alongside the story.
9 reviews
June 4, 2025
ನೆಲೆ ಕಾದಂಬರಿ, ಜೀವನದ ಮೂಲಭೂತ ಪ್ರಶ್ನೆಗಳನ್ನು ಆಲೋಚಿಸುತ್ತದೆ . ಜವರಾಯಿಯ ಡೈರಿ ಮೂಲಕ, ಮಾನವ ಜೀವನದ ಅರ್ಥ, ನೈತಿಕತೆ ಮತ್ತು ಸಂಬಂಧಗಳ ಕುರಿತು ಆಳವಾದ ತಾತ್ವಿಕ ಚರ್ಚೆ ನಡೆಯುತ್ತದೆ . ಈ ಕಾದಂಬರಿ, ಓದುಗರನ್ನು ಆಂತರಿಕ ಮನಸ್ಸಿನ ಗಂಭೀರ ನೆಲೆ ಹುಡುಕುವ ಕಾದಂಬರಿ ಆಗಿದೆ .
ನಿಜವಾದ ನೆಲೆ ಮನಸ್ಸಿನಲ್ಲಿಯೇ ನಿರ್ಮಾಣವಾಗಬೇಕು, ಸಮಾಜದ ದೃಷ್ಟಿಯಲ್ಲಿ ಅಲ್ಲ .
Profile Image for Supreeth Shankar.
15 reviews17 followers
March 4, 2013
When the writting and the plot starts getting deeper..!
You are bound to get lost..

And thats the case with Nele.

seleva prashnegala ale..!
kaledu hogi.., pustaka pakkakke bisaduva .. Nele..!




Profile Image for Rakshith Kumar P.
22 reviews1 follower
March 5, 2021
ಹುಟ್ಟು ಮತ್ತು ಸಾವಿನಲ್ಲಿ ಶೂನ್ಯ ಭಾವ ಎಲ್ಲರಲ್ಲೂ ಮೂಡಿರಬಹುದು... ಆದರೆ ಸಾವು ಸಮೀಪಿಸುವ ವಯಸ್ಸಿನಲ್ಲಿ ನಾವಿದ್ದಾಗ ಆಗುವ ಚಿಂತನೆಗಳು... ಒಬ್ಬ ಪ್ರೀತಿಪಾತ್ರರು ಅದೂ ಸಮವಯಸ್ಕರು ಕಾಲವಾದರೆ ಬದುಕೇ ಒಂದು ಪ್ರಶ್ನೆಯಾಗಿ ಉಳಿಯುತ್ತದೆ... ಆ ಪ್ರಶ್ನೆಗೆ ಉತ್ತರ ಹುಡುಕಲು ಒಂದು ನೆಲೆಯನ್ನು ಇಲ್ಲಿ ಭೈರಪ್ಪ ಅವರು ಕಲ್ಪಿಸಿದ್ದಾರೆ...
Displaying 1 - 30 of 31 reviews

Can't find what you're looking for?

Get help and learn more about the design.