Jump to ratings and reviews
Rate this book

ಹಸುರು ಹೊನ್ನು | Hasuru Honnu

Rate this book
"ಕಾಲಾನುಕಾಲದಿಂದ ನಮ್ಮ ಬದುಕಿನೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಡನಾಡಿಗಳಾಗಿ ಬೆಳೆದುಬಂದಿರುವ ಕೆಲವು ಗಿಡಮರಗಳ ಪರಿಚಯ ಮಾಡಿಕೊಡುವುದು ಈ ಬರವಂಇಗೆಯ ಪ್ರಯತ್ನ" ಎಂದು ಮುನ್ನುಡಿಯಲ್ಲಿ ಹೇಳುತ್ತಾರೆ, ಶ್ರೀ ಸ್ವಾಮಿ.

428 pages, Paperback

64 people are currently reading
542 people want to read

About the author

B.G.L. Swamy

19 books24 followers
Bengaluru Gundappa Lakshminarayana Swamy also known as B. G. L. Swamy and (Kannada: ಬಿ ಜಿ ಎಲ್ ಸ್ವಾಮಿ), was an Indian botanist and Kannada writer who served as professor and head of the department of Botany and as Principal of Presidency College, Chennai. He was the son of D. V. Gundappa (Kannada: ಡಿ.ವಿ. ಗುಂಡಪ್ಪ), an Indian writer and philosopher.

Swamy's literary works encompass a large range of topics. A large number of them are related to botany, and introduce botanical concepts to the layperson. A few of his books cover common plants used in everyday life in a scientific manner

Other works by Swamy pertain to literature, and some are partially autobiographical, dealing with his experiences as professor and principal. Apart from being an acclaimed botanist, BGL Swamy was also widely respected in the history and literary circles.
He extensively studied and researched the histories and literatures of both Kannada and Tamil languages. His book Tamilu Talegala Naduve (Among Tamil heads), is devoted to examining theories pertaining to languages' origins (especially the claims that were being made in those days by the Dravidian parties) and mostly debunking them

His book Hasiru honnu (Green is Gold) won the Kendra Sahitya Academy award given by Government of India. With that, Gundappa and Swamy, became the first father and son to win the prestigious award.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
69 (48%)
4 stars
40 (28%)
3 stars
16 (11%)
2 stars
7 (4%)
1 star
9 (6%)
Displaying 1 - 22 of 22 reviews
Profile Image for Rekha Her Spirit.
34 reviews28 followers
July 10, 2022
ಸಾಮಾನ್ಯ ಓದುಗರಿಗೆ ಶಾಸ್ತ್ರೀಯ ವಿವರಗಳು ಕೊಂಚ ಬೋರ್ ಎನಿಸಿದರೂ ವಿದ್ಯಾರ್ಥಿ, ಅಧ್ಯಾಪಕರ ನೈಜ ಪಾತ್ರಗಳು, ಅಧ್ಯಯನ ಕ್ಷೇತ್ರವಾದ ಕಾಡು ಮುಂತಾದೆಡೆ ನಡೆಯುವ ಹಾಸ್ಯ ಪ್ರಸಂಗಗಳು ಓದಿಸಿಕೊಳ್ಳುತ್ತವೆ. ಪ್ರಕೃತಿ ಪ್ರೇಮಿಗಳಿಗೆ ಗಿಡಮರಗಳ ಕುರಿತು ಇನ್ನಷ್ಟು ತಿಳಿಯಲು ಮತ್ತು ಶಾಸ್ತ್ರೀಯ ಅಧ್ಯಯನದ ಕುರಿತಾಗಿ ಸ್ಫೂರ್ತಿ ನೀಡುತ್ತದೆ.

ಗಿಡಮರ, ಪ್ರಕೃತಿಯ ಮೇಲೆ ಆಸಕ್ತಿ ಇರುವವರಿಗೂ, ಆಸ್ಥೆ ಇದ್ದೂ ಹೆಚ್ಚಿನ ಅನ್ವೇಷಣೆಗೆ ಸಮಯ ಇಲ್ಲದವರಿಗೂ, ಈ ಕುರಿತು ಅಧ್ಯಯನ ಮಾಡಬಯಸುವವರಿಗೂ, ಅಡುಗೆ, ಆಯುರ್ವೇದ, ಔಷಧ, ಪರಿಸರ ಕ್ಷೇತ್ರಗಳಲ್ಲಿ ಅಪರಿಮಿತ ಆಸಕ್ತಿ ಇರುವವವರಿಗೂ ಸೂಕ್ತ ಪುಸ್ತಕವಿದು.

ಯಾವ ಯಾವ ಪ್ರಾಚೀನ ಕವಿಗಳಿಗೆ ಯಾವ ಹೂ ಗಿಡ ಮರಗಳು ಹೇಗೆ ಕಂಡವು, ಚಿತ್ರಣ ಇಲ್ಲಿದೆ. ಅವರು ಕಂಡ ರೀತಿ ನಮ್ಮ ಕಲ್ಪನೆಯ ಮಿತಿಯನ್ನು ತೋರಿಸುತ್ತದೆ ಮತ್ತು ಹಿಗ್ಗಿಸುತ್ತದೆ. ಕಾವ್ಯ, ವಿಜ್ಞಾನ ಈ ಕೃತಿಯಲ್ಲಿ ಹೆಚ್ಚು ಕಡಿಮೆ ಜೊತೆ ಜೊತೆಯಲ್ಲಿ ಸಾಗಿವೆ.

ಕೆಲವೊಮ್ಮೆ ಒಣ ವಿಷಯ ಆದರೆ ಮುಖ್ಯ ಎನಿಸುವ ಸಂಗತಿಗಳಿಗೆ ಹೀಗೆ ಕಾವ್ಯ, ಸಾಹಿತ್ಯದ ಸ್ಪರ್ಶ ಕೊಟ್ಟರೆ ಅರಿಯಲು ಸುಲಭ, ಆಸಕ್ತಿಯೂ ಮೂಡುತ್ತದೆ. ಈ ಕೃತಿಯಿಂದ ಸಸ್ಯಶಾಸ್ತ್ರದ ಕುರಿತು ನಮಗೆ ಪರಿಕಲ್ಪನೆಯೊಂದು ದೊರೆಯುತ್ತದೆ. ಕಾಡು ಸುತ್ತಿ ಬಂದ ಅನುಭವವಾಗುತ್ತದೆ ಮತ್ತು ಗಿಡಗಳನ್ನು ಗುರುತಿಸುವ ರೀತಿಯೂ ಪರಿಚಯವಾಗುವುದು.

ಯಾವ ಗಿಡ ಮರವೂ ಸುಮ್ಮನೆ ಇಲ್ಲಿಲ್ಲ, ಎಲ್ಲಾ ಪ್ರಯೋಜನಗಳ ಅರಿವು ನಮಗಿಲ್ಲ!

ಕೃತಿಯ ಆ ದಿನಗಳಲ್ಲಿದ್ದ ಕಾಲೇಜ್ ಗೆಳೆಯ ಗೆಳತಿಯರ ಒಡನಾಟದ ರೀತಿ ಆಸಕ್ತಿದಾಯಕವಾಗಿದೆ, ಅವರ ನಡುವಿನ ಮಾತುಕತೆ ಅಷ್ಟೊಂದು ಕಾವ್ಯಮಯವೂ, ತುಂಟತನದಿಂದ ಕೂಡಿರುವುದೂ, ಚೈತನ್ಯಮಯವಾಗಿರುವುದೂ ಈ ಕಾಲದವರಿಗೆ ನಂಬಲು ಅಸಾಧ್ಯವಾಗಬಹುದು.

ಕಾವ್ಯಪ್ರೇಮ, ಗಿಡಗಳ ಅಧ್ಯಯನಕ್ಕೆ ಎಷ್ಟು ಹೊಂದಿಕೆ ಮತ್ತು ಪೂರಕವಾಗಬಹುದು, ತಿಳಿಯಲು ಈ ಕೃತಿಯ ಓದಿ ನೋಡಬಹುದು.
ಕಾವ್ಯದ ಮೂಲಕ ವಿವರಗಳ ನೆನಪಿಟ್ಟರೆ ಹೆಚ್ಚು ಸುಲಭವಾಗಬಹುದು, ಉರು ಹೊಡೆವ ತಾಪತ್ರಯ, ತ್ರಾಸದಿಂದ ತಪ್ಪಿಸಿಕೊಳ್ಳಬಹುದು.

ಪ್ರಕೃತಿ, ಗಿಡ ಮರಗಳ ಗಂಭೀರ ಅಧ್ಯಯನಕ್ಕೆ ಹಳೆಯ, ಹೊಸ ಕಾವ್ಯದ ಓದು ಬಹಳ ಮುಖ್ಯವೆನಿಸುತ್ತದೆ, ಕವಿ ಕಂಡದ್ದು ಸಾಮಾನ್ಯ ದೃಷ್ಟಿಗೆ ಕೆಲವೊಮ್ಮೆ ಕಾಣದಿರುವುದರಿಂದ!

ಮನುಷ್ಯರನ್ನು ನಂಬುವುದಕ್ಕಿಂತ, ಪ್ರಕೃತಿಯನ್ನು ನಂಬಬೇಕು, ಅನುಸರಿಸಬೇಕು, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು, ನೆಚ್ಚಬೇಕು, ಅವಲಂಬಿಸಬೇಕು.
ಪ್ರಕೃತಿ, ಮಾತೆಯ ಮಡಿಲಂತೆ ಪೊರೆಯುತ್ತದೆ ನಾವೂ ಅಂಥಾ ಮಕ್ಕಳಾಗಿದ್ದರೆ!

ಆದರೆ ಕಾಡು, ಪ್ರಕೃತಿಯನ್ನು ಉಳಿಸಲು ಅರಿವು, ಜಾಗೃತಿ, ಪ್ರಜ್ಞೆ ಮುಖ್ಯವಾಗಿರುತ್ತದೆ, ಆ ಅರಿವಿಗಾಗಿ ಇಂಥಾ ವಿಷಯಗಳುಳ್ಳ ಒಂದೆರಡಾದರೂ ಪುಸ್ತಕಗಳ ಮಾನವ ಓದಿ ತಿಳಿಯಬೇಕು, ಇತರರಿಗೆ ತಿಳಿಸಬೇಕು,
ಮತ್ತು ಸರ್ಕಾರಿ ನೌಕರರಾಗಿ ಕೆಲ ಇತಿಮಿತಿಗಳಲ್ಲೂ ಅಂದುಕೊಂಡದ್ದನ್ನು, ಮಾಡಬೇಕಿರುವುದನ್ನು ಸಾಧಿಸಲು ಸಾಧ್ಯವಿರುವುದನ್ನು ಕೃತಿ ತೋರಿಕೊಡುತ್ತದೆ.

ಲೇಖಕರ ಮತ್ತಷ್ಟು ಪುಸ್ತಕಗಳನ್ನ ಓದಬೇಕೆನಿಸುವುದು, ಅವರಲ್ಲಿನ ಲೇಖಕನಿಗಾಗಿ!

ದಿನದಿನದ ವಾಡಿಕೆಯ ಕೆಲಸಗಳು ತರುವ ಬೇಸರದಿಂದ ಮುಕ್ತರಾಗುವ ದಾರಿ ಹುಡುಕುತ್ತಿದ್ದರೆ, ಪ್ರಕೃತಿಯಲ್ಲಿ ನಿರಂತರ ಅಚ್ಚರಿಗಳ ಸರಮಾಲೆ ನಮಗಾಗಿ ಕಾಯುತ್ತಿರುತ್ತದೆ.
ಆದರೆ ನಮ್ಮ ಆಕರ್ಷಣೆಯೋ ಹೂ, ಕಾಯಿ, ಹಣ್ಣುಗಳಿಗಷ್ಟೇ ಸೀಮಿತವಾಗಿರುತ್ತದೆ.

ಕಾಡೆoದರೆ ನಿತ್ಯವೂ ನೂತನ ಅನುಭವ!

ಇಷ್ಟೆಲ್ಲಾ ಸೋಜಿಗ ಸುತ್ತಲಿಟ್ಟುಕೊಂಡು, ಕಣ್ಣಿಗೆ ಕತ್ತಲಿಟ್ಟು ಕೊಂಡವರಂತೆ ಬೋರ್ ಆಗುತ್ತದೆ ಎಂದರೆ ಅದು ನಮ್ಮಲ್ಲಿ ಪ್ರಜ್ಞೆಯ ಕೊರತೆಯನ್ನು ಸೂಚಿಸುತ್ತದೆ.

ಇನ್ನು, ಸಸ್ಯಗಳ ಅಪರೂಪದ ಉಪಯೋಗಗಳ ಕಂಡರೆ ಹಣ, ಮಾರ್ಕೆಟಿಂಗ್ ಮಾಡಲು ಮೊದಲು ಮುಂದಾಗುವ ಮನಸ್ಥಿತಿಯಿಂದ, ಅವುಗಳನ್ನು ಜತನದಿಂದ ಪೊರೆಯುವ, ಅದರ ಅವಶ್ಯವಿರುವವರಿಗೆ ನೆರವಾಗುವ, ಬರುವ ಪೀಳಿಗೆಗಳಿಗೆ ವಿಷಯ, ಜ್ಞಾನ, ವಿವೇಕ ದಾಟಿಸುವ ಮನಸ್ಥಿತಿಗೆ ಬದಲಾಗಬೇಕು.

ಪರಿಸರ ವ್ಯವಸ್ಥೆಗೆ ತೊಂದರೆಯಾಗದ ಹಾಗೆ ಪ್ರಕೃತಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಎಲ್ಲಿದೆ ತೊಂದರೆ ಗುರುತಿಸಬೇಕು, ಜನರಿಗೆ ಜಾಗೃತಿ ಮೂಡಿಸಬೇಕು, ಅತಿ ಹೆಚ್ಚು ಜನರ ತಲುಪಬಲ್ಲ ಸೆಲೆಬ್ರಿಟಿಗಳು, ಮಾಧ್ಯಮಗಳು, ಸಿನೆಮಾಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ, ಇಲ್ಲವೇ ಉತ್ಸಾಹಿಗಳು, ಆಸಕ್ತರು, ತಜ್ಞರು ಕೈಜೋಡಿಸಿ ನಿರಂತರ ಇದರ ಮೇಲೆ ಕೆಲಸ ಮಾಡಬೇಕಿದೆ, ಗಮನವಿರಿಸಬೇಕಿದೆ.

ಒಂದು ಕೃತಿಯಲ್ಲಿನ ವಿವರದ ಪ್ರಾಮಾಣಿಕತೆ ಸಾಮಾನ್ಯ ಮನುಷ್ಯರಿಗೂ ಅರಿವಿಗೆ ಬರುವಂಥದ್ದು, ಆ ಸದಾಶಯದ ಸದ್ಬಳಕೆ ನಮಗೆ ಬಿಟ್ಟದ್ದು!

ಏನೆಲ್ಲಾ ಮಾಡಿದರೂ, ಪ್ರಕೃತಿಯ ವಿಸ್ಮಯ, ಬೆರಗು, ಜಾದೂ ಅದರ ನೈಜ ಪ್ರೇಮಿಗಳಿಗೆ ಮಾತ್ರ ಸೀಮಿತ!

~ ರೇಖಾ ಗೌಡ
Profile Image for That dorky lady.
360 reviews68 followers
March 6, 2022
ಬಹಳ ದಿನಗಳಿಂದ ಈ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನ ಕೇಳ್ತಿದ್ದೆ. ಮುಖಪುಟ ನೋಡಿದಾಗೆಲ್ಲ ಏನೊ ಗಿಡಗಂಟೆಗಳ ವಿಚಾರ ಅಲ್ವಾ, ನನಗೇನು ಆಸಕ್ತಿ ಮೂಡಿಸಲಾರದು ಅನ್ನೋ ಅಸಡ್ಡೆಯೊಂದೇ ಇದ್ದಿದ್ದು. ಗೆಳತಿ ರೇಖಾ ಈ ಪುಸ್ತಕ ಓದಲೇಬೇಕು ಅನ್ನೋ ಆಗ್ರಹದೊಂದಿಗೆ ಉಡುಗೊರೆಯಾಗಿ ಕೊಟ್ಟ ಕಾರಣ ಅಂತೂ ಕಡೆಗೂ ಓದಿದೆ-many thanks to her.
ಎಂತಾ ಕಠಿಣ ವಿಷಯಗಳನ್ನೂ ತಿಳಿ ಹಾಸ್ಯ ಬೆರೆಸಿ ಹೇಳಿದರೆ ಪಥ್ಯವಾಗದೇ ಇರದು‌. ಹಸಿರು ಹೊನ್ನು ಸಹಾ bglಸ್ವಾಮಿಯವರ ಹಾಸ್ಯಮಿಶ್ರಿತ ಬರವಣಿಗೆಯಲ್ಲಿ ಮಜವಾಗಿ ಓದಿಸಿಕೊಂಡು ಬಹಳಷ್ಟು ಗಿಡ, ಮರ ಸಸ್ಯ ಸಮೃದ್ಧಿಯ ಕುರಿತಾದ ಉತ್ತಮ ವಿಚಾರಗಳನ್ನು ತಿಳಿಸುತ್ತದೆ. ಓದಿದ್ದೆಲ್ಲಾ ನೆನಪಿಡುವುದಂತೂ ಅಸಾಧ್ಯ. ಮತ್ತೆ ಮತ್ತೆ ಓದಬಹುದಾದ ಕೈಪಿಡಿ.
3 reviews
October 21, 2020
ಕೃತಿ: *ಹಸುರು ಹೊನ್ನು*
ಲೇಖಕರು: ಡಾ। ಬಿ.ಜಿ.ಎಲ್. ಸ್ವಾಮಿ
ಪ್ರಕಾರ : ಪರಿಸರ
ಮುದ್ರಣ : 1976
ಪುಟಗಳು : 411
ರೇಟಿಂಗ್: 5/5

ಕನ್ನಡ ಸಾಹಿತ್ಯದ ಮೇರುರತ್ನ ಡಿ.ವಿ.ಜಿ.ಯವರ ಮಗ ಡಾ।ಬಿ.ಜಿ.ಎಲ್. ಸ್ವಾಮಿಯವರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದ ಕೃತಿ. ಸಸ್ಯಶಾಸ್ತ್ರ ಸ್ನಾತಕೋತರ ವಿದ್ಯಾರ್ಥಿಗಳು ಅರಣ್ಯ ಪ್ರದೇಶಗಳಿಗೆ ಹೋಗಿ ಅಲ್ಲಿನ ಸಸ್ಯಗಳ ಮಾದರಿ ಸಂಗ್ರಹಿಸಿ ಆ ಸಸ್ಯಗಳ ನೈಸರ್ಗಿಕ ನೆಲೆಯನ್ನು ಅಧ್ಯಯನ ಮಾಡುವ ಪ್ರವಾಸ ಕಥನ ಈ ಕೃತಿಯ ತಿರುಳು.
ಖ್ಯಾತ ಸಸ್ಯಶಾಸ್ತ್ರಜ್ಞರಾದ ಲೇಖಕರು ಪ್ರಾಧ್ಯಾಪಕರಾಗಿ ಒರುಕುಂಬನ್, ತೇಕ್ಕಡಿ, ಆಗುಂಬೆ ಹಾಗೂ ರಾಮೇಶ್ವರ ಕ್ಕೆ ವಿದ್ಯಾರ್ಥಿಗಳ ಜೊತೆಗೆ ಮಾಡಿದ ಪ್ರವಾಸನುಭವಗಳನ್ನು, ಹಲವಾರು ಗಿಡಮರಗಳ ಪರಿಚಯದೊಂದಿಗೆ ಹಾಸ್ಯಭರಿತವಾಗಿ ಇಲ್ಲಿ ವಿವರಿಸಿದ್ದಾರೆ. ಪುರಾಣದೊಂದಿಗೆ ಕನ್ನಡ, ತಮಿಳು ಸಂಸ್ಕ್ರತ ಸಾಹಿತ್ಯವನ್ನು ವೈಜ್ಞಾನಿಕವಾಗಿ ಮಿಳಿತಗೊಳಿಸಿ, ನಮ್ಮ ದಕ್ಷಿಣಭಾರತದ ಅಪೂರ್ವ ವನಸಿರಿಯ ರಸಸ್ವಾದೆಯನ್ನು ಉಣಬಡಿಸಿದ್ದಾರೆ.
1970 ರ ದಶಕದಲ್ಲೇ ಅಳಿವನಂಚಿನಲ್ಲಿರುವ ನಮ್ಮ ಮಣ್ಣಿನ ಸಂಸ್ಕ್ರತಿಯ ದ್ಯೋತಕವಾದ ಅಪರೂಪದ ಸಸ್ಯ ಸಂಪತ್ತು ಕುರಿತು ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಆದರೆ ಇಲ್ಲಿ ನಮೂದಿಸಿರುವ ಸಸ್ಯ ಸಂಪತ್ತು ಉಳಿಸುವಲ್ಲಿ ಮುಂದಿನ ಜ್ಞಾನವಂತ! ಬುದ್ಧಿವಂತ! ನಾಗರಿಕತೆಯ ತಳಹದಿಯಲ್ಲಿ ನಿರ್ಮಾಣವಾದ ಸಮಾಜ! ಎಷ್ಟು ಕೊಡುಗೆ ನೀಡಿದೆ ಎನ್ನುವುದು ಮಾತ್ರ ಪ್ರಶ್ನಾರ್ಥಕ?

ಬಿದಿರಿನ ಸಾಮೂಹಿಕ ಉಪಸಂಹಾರ ನಿಯಾಮಕವಿರಬಹುದು, ಕನ್ಯಾಸ್ತ್ರೀ ಅಣಬೆಯ 24 ಗಂಟೆಯಷ್ಟೇ ಬದುಕಲ್ಲೂ ಮೂಡುವ ಬಣ್ಣಗಳ ಬೆಡಗು ಬಿನ್ನಾಣ ಇರಬಹುದು, ನೈಸರ್ಗಿಕ ಸೊಳ್ಳೆ ಓಡಿಸುವ ಮಜ್ಜಿಗೆ ಹುಲ್ಲು ಇರಬಹುದು, ರಕ್ತಸ್ರಾವ ನಿಲ್ಲಿಸುವುದಷ್ಟೇ ಅಲ್ಲ ಕ್ಷಣಾರ್ಧದಲ್ಲಿ ಗಾಯದ ಗುರುತೇ ಮಾಯಮಾಡುವ ಸೀತಾಳೆ ಇರಬಹುದು, ಮನೋವ್ಯಾಧಿ-ರಕ್ತದೊತ್ತಡಕ್ಕೆ ರಾಮಬಾಣವಾದ(ಮಾನವನ ದುರಾಸೆಗೆ ಅಪರೂಪವಾದ)ಸರ್ಪಗಂಧಿ ಇರಬಹುದು, ಒಂದೇ ಕ್ಷಣದಲ್ಲಿ ತಲೆಶೂಲೆ ಮಾಯಾಮಾಡುವ ಹೆಕೀರಿಯ ಇರಬಹುದು.... ಒಂದೇ, ಎರಡೇ? ಡ್ರೈನೇರಿಯಾ, ಜಾಯಿಕಾಯಿ, ಪತ್ರೆ, ಪುತ್ರಂಜೀವ, ಕದಂಬ, ಬಲಮುರಿ, ಭದ್ರಾಕ್ಷಿ, ಸಪ್ತಪರ್ಣಿ, ಅನಿಮೋನ್, ಆನೆಹುಲ್ಲು, ಅಶೋಕ, ಬೂರುಗ, ಮಾಧವೀಲತೆ, ಸಾರ್ಕೆಂಡ್ರ, ಪಾದರಿ, ಕುಷ್ಠ, ಧೂಮ, ಜೀರ್ಕಾ, ಕವಲು, ತಮಲು, ಕುಮುದ, ಬಕುಳ..... ಇತ್ಯಾದಿ ಸಾಧಾರಣ ಹೆಸರೇ ಕೇಳದ ನಮ್ಮ ಮಣ್ಣಿನ ವನಸಿರಿಯನ್ನೆಲ್ಲಾ
ಲೇಖಕರು ಅನಾವರಣ ಮಾಡಿದ್ದಾರೆ.
ಭಾರತದಲ್ಲಿ ಇಷ್ಟೆಲ್ಲಾ ವನಸಿರಿ ಇದ್ದೂ ಶಾಸ್ತ್ರಬದ್ಧ ಅಧ್ಯಯನ, ���ಂರಕ್ಷಣೆ ಯಾಕೆ ಸಾಧ್ಯವಿಲ್ಲವಾಯಿತು? ವಿದೇಶಿಯರು ಮತ್ತು ಸ್ಥಳೀಯರ ದುರಾಸೆಗೆ ಬಲಿಯಾಯಿತೆ? ಅಧಿಕಾರಿವರ್ಗ, ಸಂಶೋಧನಾ ವಿಶ್ವವಿದ್ಯಾನಿಲಯಗಳ ಕಾರ್ಯವೈಖರಿ ಹೇಗಿದೆ? ...ಹೀಗೆ ಓದುತ್ತಾ ಹೋದಂತೆ ತಲೆ ಕೊರೆಯುವ ಪ್ರಶ್ನೆಗಳಿಗೆ, ಕೃತಿಯ ಆರಂಭದಿಂದ ಅಂತ್ಯದವರೆಗೂ 'ಗಾರ್ದಭ ಪುರಾಣ' ವನ್ನು ಹಾಸ್ಯಲೇಪನವಾಗಿ ವಿಡಂಭಿಸಿ ಗಂಭೀರವಾದ ಕಟುಸತ್ಯ ವಿವರಿಸಿದ್ದಾರೆ.

ಮೆಕಾಲೆಯ ಮೂಲಕ ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ಪದ್ಧತಿ ಮತ್ತು ಉನ್ನತ ಶಿಕ್ಷಣದಲ್ಲಿ ವಿಷಯಾಸಕ್ತಿ ಇರದಿದ್ದರೂ ವರ್ಗಾವಾರು ಆಯ್ಕೆ! ಎರಡೂ ಸೇರಿದ್ದರೆ ಕಲಿಕೆ ಅನ್ನುವುದು ಸರ್ಟಿಫೀಕೆಟ್, ಸರ್ಟಿಫೀಕೆಟ್ ಮೂಲಕ ಕೆಲಸ ಪಡೆಯಲು ಅರ್ಹತೆ, ಇಷ್ಟೇ ಅಲ್ಲವೇ?
ಆಯಾ ಕ್ಷೇತ್ರದಲ್ಲಿ ಧೈರ್ಯೋತ್ಸಾಹ(Adventurous spirit) ಇರದಿದ್ದಾಗ ಅಂತಹ ವ್ಯಕ್ತಿಗಳ ಶಿಕ್ಷಣದಿಂದ, ದೇಶ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎನ್ನುವುದನ್ನು ಸೂಚ್ಯವಾಗಿ ಈ ಕೃತಿ ವಿವರಿಸುತ್ತದೆ.
ಅನಿವಾರ್ಯವೋ, ದುರ್ದೈವವೋ ನಾಲ್ಕು ಗಿಡಮರಗಳ ಪರಿಚಯ ಸಿಗದ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗುತ್ತಿದೆ. ಪ್ರಕೃತಿ ಕುರಿತು ಕೇಳುವ ವ್ಯವಧಾನ ನವಪೀಳಿಗೆಗಳಲ್ಲಿ ಇಲ್ಲ ಅನ್ನುವುದಕ್ಕಿಂತ, ಅವರಿಗೆ ತಿಳಿಸಿ ಕಲಿಸುವ-ವಿವರಿಸುವ ಜ್ಞಾನವೂ ಹಿರಿಯರಾದ ನಮಗಿಲ್ಲ ನಮ್ಮ ಶಿಕ್ಷಣದಲ್ಲೂ ಇಲ್ಲ ಅನ್ನುವುದು ಅಷ್ಟೇ ಸತ್ಯ. ನಮ್ಮ, ನಮ್ಮೆಲ್ಲಾ ಪೂರ್ವಿಕರ ಪ್ರಾಣವಾಯುವಾಗಿ ಆಸರೆಯಾದ ಮತ್ತು ಆಗುತ್ತಿರುವ ನಮ್ಮದೆ ಮಣ್ಣಿನ ಗಿಡಮರಗಳ ಕುರಿತ ಈ ಕೃತಿ ಪ್ರತಿಯೊಬ್ಬರೂ ಓದಲೇಬೇಕು. ನನಗಂತೂ ಈ ಕೃತಿ ಓದಿದ ಮೇಲೆ ಹತ್ತಿರ ಕಾಣುವ ಪ್ರತಿ ಗಿಡಗಳ ಪರಿಚಯ ತಿಳಿಯುವ ಕುತೂಹಲಕ್ಕೆ ನೀರೆರೆದಿದೆ.
170 reviews20 followers
July 7, 2020
ಕೃತಿ:ಹಸುರು ಹೊನ್ನು
ಲೇಖಕರು: ಬಿ.ಜಿ.ಎಲ್.ಸ್ವಾಮಿ
ಪ್ರಕಾಶಕರು: ವಸಂತ ಪ್ರಕಾಶನ ಬೆಂಗಳೂರು

ನಮ್ಮ ಸುತ್ತಮುತ್ತಲಿನ ಸಸ್ಯ ಸಂಪತ್ತಿನ ಕುರಿತು ಅತ್ಯಂತ ಸರಳವಾಗಿ ಮತ್ತು ಸೊಗಸಾಗಿ ಬರೆದಿರುವ ಪುಸ್ತಕ. ಸಸ್ಯಶಾಸ್ತ್ರದ ಗಂಧಗಾಳಿಯೂ ಗೊತ್ತಿಲ್ಲದಿದ್ದರೂ ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದಾದ ಬರವಣಿಗೆ ಈ ಕೃತಿಯ ಹೆಗ್ಗಳಿಕೆ.

ಶ್ರೀಯುತ ಸ್ವಾಮಿಯವರು ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಸಂದರ್ಭದಲ್ಲಿ ಸಸ್ಯಾನ್ವೇಷಣೆಯ ಪ್ರಯುಕ್ತ ಕೈ ಗೊಂಡ ತಿರುಗಾಟದಲ್ಲಿ ತಾವು ಕಂಡ ಕಾಡುಗಳು,ಅಲ್ಲಿರುವ ಅಮೂಲ್ಯವಾದ ಸಸ್ಯಸಂಪತ್ತು, ಕಾಡಿನ ಪ್ರಯಾಣ ಸಂದರ್ಭಗಳಲ್ಲಿ ಉಂಟಾದ ಕಷ್ಟಕಾರ್ಪಣ್ಯಗಳು,ಹಾಸ್ಯ ಪ್ರಸಂಗಗಳು ಮತ್ತು ಸಂಚರಿಸಿದ ಕಾಡುಗಳಲ್ಲಿ ನಿಸರ್ಗ ಸೌಂದರ್ಯವನ್ನು ಬಹಳ ರಸವತ್ತಾಗಿ ವರ್ಣಿಸುತ್ತಾರೆ.

ಉದಾಹರಣೆಗೆ, ಒಂದು ಸಸ್ಯದ ಬೇರಿನಿಂದ ಹಿಡಿದು ಅದರ ರೆಂಬೆ ಕೊಂಬೆಗಳು, ಎಲೆಗಳು,ಹೂವುಗಳು, ಅವುಗಳ ಸಂತಾನೋತ್ಪತ್ತಿ, ಬೆಳೆಯುವ ಪ್ರದೇಶಗಳು, ಮಾದರಿಗಳನ್ನು ಸಂಗ್ರಹಿಸುವ ರೀತಿ, ಔಷಧೀಯ ಗುಣಗಳು, ಅದರ ಉಪಯೋಗಗಳು, ನಮ್ಮ ಪೂರ್ವಿಕರಿಗೆ ಇದ್ದ ಮಾಹಿತಿಗಳು ಮತ್ತು ಅಸಡ್ಡೆಗಳು ಹೀಗೆ ಅಮೂಲಾಗ್ರವಾಗಿ ವಿವರಿಸುತ್ತಾ ಹೋಗುತ್ತಾರೆ. ಬಹುತೇಕ ಎಲ್ಲ ಗಿಡಮರಗಳ ರೇಖಾಚಿತ್ರಗಳು ಮತ್ತು ಕೆಲವೊಂದು ಛಾಯಾಚಿತ್ರಗಳನ್ನು ಈ ಕೃತಿಯು ಒಳಗೊಂಡಿದೆ.

ನಿತ್ಯ ಬಳಕೆಯಲ್ಲಿರುವ ಉತ್ಪನ್ನಗಳ ಬಗ್ಗೆ ನಮಗೆ ಗೊತ್ತಿಲ್ಲದ ಹಾಗೂ ಹಲವಾರು ಬಾರಿ ಕಂಡಿದ್ದರೂ ಅಷ್ಟಾಗಿ ಗಮನಿಸದ ಹತ್ತು ಹಲವು ಮಾಹಿತಿಗಳನ್ನೊಳಗೊಂಡ ಕನ್ನಡದ ಶ್ರೇಷ್ಠ ಕೃತಿ. ಎಲ್ಲರೂ ಓದಲೇ ಬೇಕಾದ ಪುಸ್ತಕ.

ನಮಸ್ಕಾರ,
ಅಮಿತ್ ಕಾಮತ್
Profile Image for Dharesh Nagond.
14 reviews9 followers
May 12, 2016
ಸಾಹಿತ್ಯ ಮತ್ತು ವಿಜ್ಞಾನಗಳ ಅಪರೂಪದ ಸಂಗಮ ಈ ಪುಸ್ತಕ. ಸಸ್ಯಶಾಸ್ತ್ರದ ಅದ್ಯಾಪಕರಾಗಿದ್ದ ಲೇಖಕರು ತಮ್ಮ ವಿದ್ಯಾರ್ಥಿಗಳೊಂದಿಗೆ ಸಸ್ಯ ಸಂಗ್ರಹಣ ಮತ್ತು ಅದ್ಯಯನಕ್ಕಾಗಿ ಕಾಡಿನ ಪ್ರವಾಸ ಕೈಗೊಂಡು ನೂರಾರು ಸಸ್ಯಗಳನ್ನು ವೈಜ್ಞಾನಿಕವಾಗಿ ವಿವರಿಸುತ್ತಾರೆ. ವಿಶೇಷವೆಂದರೆ ಪ್ರತಿ ಸಸ್ಯದ ಪರಿಚಯದ ಮೊದಲು ಸಂಧರ್ಭೋಚಿತವಾಗಿ ನಡೆದ ವಿದ್ಯಾರ್ಥಿಗಳ ವಿನೋದಗಳನ್ನೋ ಇಲ್ಲಾ ಮತ್ತಾವುದೋ ಹಾಸ್ಯವನ್ನು ಸೇರಿಸಿ ಓದುಗರಿಗೆ ಖುಷಿ ಕೊಡುತ್ತಾರೆ. ಇನ್ನು ಕೆಲವು ಸಸ್ಯಗಳ ಬಗ್ಗೆ ನಮ್ಮ ಕವಿವರ್ಣನೆಗಳನ್ನು ಹೇಳಿ, ನಮ್ಮ ಸಂಸ್ಕೃತಿಯಲ್ಲಿ ಅವುಗಳ ಪಾತ್ರಗಳ ಬಗ್ಗೆ ಬರೆದು ಬೆರಗುಗೊಳಿಸುತ್ತಾರೆ. ಅಷ್ಟೇ ಅಲ್ಲದೆ ಕಾಲೇಜ್ ಪ್ರಿನ್ಸಿಪಾಲರ ಜಿಪುಣತನ, ಮೊಂಡು ಹಠ ಮತ್ತು ಗಾರ್ದಭ ಪ್ರಸಂಗಗಳು ಹೊಟ್ಟೆ ತುಂಬಾ ನಗಿಸುತ್ತವೆ. ಇದೊಂದು ಎಲ್ಲ ಪ್ರಕಾರದ ಸಾಹಿತ್ಯಪ್ರಿಯರಿಗೆ ಇಷ್ಟವಾಗುವ ಪುಸ್ತಕ. ಇನ್ನು ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗಂತೂ ಹಬ್ಬದೂಟವೇ ಸರಿ.
Profile Image for Anu.
2 reviews1 follower
October 23, 2012
One of the first Kannada books to describe the botanical diversity in a layman's language, laced with humor. Written by B G L Swamy, the son of the erstwhile Kannada literateur D V Gundappa [known as DVG to his readers], the book is a travelogue of various botanical trips taken by the botany Professor and his college students, desrcibing the plant species laced with humorous anecdotes of their forest (mis)adventures. The storyline uses the opportunity to introduce the rich biodiversity of south India. The narrative is rich with plant descriptions that become easy to remember for its context, special features of those very species that make them precious to people, and so on. The characterization of the people, be it the professors, stundents, forest officials - all depict a varied and colorful set of human nature. The book has won Kendra Sahitya Academy Award honored by the Government of India. It is a must read for all those plant lovers and humor.
Incidentally, this book was translated to English with the title The Green Gold.
5 reviews
February 5, 2025
What sets this book apart is Swami's remarkable storytelling approach. He breathes life into each plant description by weaving in literary references from Sanskrit, Tamil, and Kannada poetry, creating a rich tapestry that connects botanical knowledge with cultural heritage. He skillfully intertwines scientific observations with mythological anecdotes, historical uses, and modern relevance, making this both educational and engaging.

The witty and humorous depictions of his students' misadventures during the field trips kept me entertained. The characters like Daisy, Varadaraj, Ilavarasan are funny and memorable, they reminds you of your friends from the college days.

While some botanical explanations in Kannada was hard to digest, Googling time to time helped me visualize and understand the botanical rambling. This book is a rare gem that defies traditional genre boundaries, successfully combining elements of biography, travelogue, and botanical research.

For those interested in nature, botany, or South Indian cultural landscapes, this book offers a refreshing experience that is both informative and. enjoyable.
18 reviews7 followers
July 5, 2020
B.G.L Swamy was well known botanist in India. He has shared his experience as a professor conducting academic tours to M.Sc Botany students to collect the sample in the south Indian forests. This book is a guide to identify and to learn about many trees and plants. The hand written sketches of the samples are with minute details which shows his expertise on the topic. The valuable information on the Flora and his humourous narrative on the experience with the students makes this book one of the best books.
Author 7 books15 followers
March 14, 2018
A very nice book that explains about plants in a humorous manner. A must read for anyone interested in plants and for botany students.
Profile Image for ಸುಶಾಂತ ಕುರಂದವಾಡ.
390 reviews23 followers
May 2, 2021
Botany ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಪ್ರಸಂಗಗಳನ್ನು ಎಷ್ಟೋ ವೈವಿಧ್ಯಮಯ ಸಸ್ಯ ಸಂಪತ್ತು ಬಗ್ಗೆ ಮಾಹಿತಿ ನೀಡಿರುವ ಕಾದಂಬರಿ. ಸ್ವಾಮಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕಾದಂಬರಿ
Profile Image for Ramachandra M.
36 reviews5 followers
July 10, 2021
ಕನ್ನಡ ಸಾಹಿತ್ಯದಲ್ಲಿ ಒಂದು ಅಪರೂಪದ ಅಪೂರ್ವ ಪುಸ್ತಕ ಬಿಜಿಎಲ್ ಸ್ವಾಮಿರವರ 'ಹಸುರು ಹೊನ್ನು'. ವಿಜ್ಞಾನವನ್ನು ಎಷ್ಟು ಸರಳವಾಗಿ ವಿವರಿಸಬಹುದು ಎಂದು ಸ್ವಾಮಿಯವರು ತೋರಿಸಿಕೊಟ್ಟಿದ್ದಾರೆ.
2 reviews1 follower
May 2, 2022
Opens the eyes to the great diversity among the plant species. With bits of comedy of field trip adventures gone wrong, it's an enjoyable read.
Profile Image for Ram A.
12 reviews2 followers
February 11, 2013
Awesome book written on plants, trees and forests. I would say best Botany book. At times the narration reminds of Tejaswi. All Kannadigas must read this book.
Profile Image for Renuka Shankar.
4 reviews5 followers
July 12, 2013
hasiru honnu the good book. even it is about plants, trees. The writer swamy made boring subject to interesting to read, learn. the combination of kannada and tamil language will create fun.
Profile Image for Punith.
7 reviews2 followers
June 26, 2018
ಆಗುಂಬೆ ಧೂಮದ ಮರಗಳ ಕೆಳಗೆ ನಿಂತು ವಿಷ್ಮಯ ಪಟ್ಟಿದ್ದೆ, ಕುಂದಾಪುರದ ತಾಳೆ ಮರಗಳ ನೋಡಿ ಆಶ್ಚರ್ಯ ಪಟ್ಟಿದ್ದೆ. ಆದರೆ ಯಾರನ್ನು ಇದು ಯಾವ ಮರ ಅಂತ ಕೇಳಿದ್ರೆ ಯಾವನಿಗ್ಗೊತ್ತು, ಯಾವುದೋ ಕಾಡು ಮರ ಅನ್ನೋದೇ ಉತ್ತರ.

ಕಳೆದ ವಾರ ಆಗುಂಬೆಗೆ ಹೋಗಿದ್ದಾಗ ನಾನೇ ಧೂಮ, ತಾಳೆ ಮರಗಳು, ಕೇದಿಗೆ ಪೊದೆಗಳನ್ನ ಗುರುತು ಇಡಿದೆ.

ನಮ್ಮ ಕುತೂಹಲಗಳನ್ನ ಕೆದಕಿ, ಪೋಷಿಷಿ ಬೆಳೆಸೋ ಇಂತಹ ಪುಸ್ತಕಗಳು ಅಮೂಲ್ಯ!
Displaying 1 - 22 of 22 reviews

Can't find what you're looking for?

Get help and learn more about the design.