What do you think?

ಸರ್ವ ಜನಾಂಗದ ಶಾಂತಿಯ ಭಾಷೆ
184 pages, Unknown Binding
Published January 1, 2020
About the author
S. Diwakar
29 books3 followersಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 2 of 2 reviews
April 19, 2021
ಪ್ರಬಂಧಗಳ ವಿಷಯಕ್ಕೆ ಬಂದರೆ ರುಚಿಕರ,ಬೋಧಪ್ರದ ಬರವಣಿಗೆಯ ಮೂಲಕ ಖುಷಿ ಕೊಡುವ ಬರಹಗಾರ. ತುಂಬಾ ಇಷ್ಟವಾದ ಪುಸ್ತಕ. ಕೆಲವು ಪ್ರಬಂಧಗಳು ಮೆಲುಕು ಹಾಕುವಂತಹವುಗಳು.
August 16, 2026
#ಪರಿಚಯ_೩೫_೨೦೨೬
ಕೃತಿ: ಸರ್ವ ಜನಾಂಗದ ಶಾಂತಿಯ ಭಾಷೆ
ಲೇಖಕರು: ಎಸ್. ದಿವಾಕರ್
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಈ ಪುಸ್ತಕವನ್ನು ನಾ. ಡಿಸೋಜಾ ಅವರ ಸಮಗ್ರ ಕಾದಂಬರಿಗಳ ಸಂಪುಟವನ್ನು ಓದುವಾಗ ನಡುನಡುವೆ ಓದಿದ್ದು. ಒಂದೇ ಏಟಿಗೆ ಒಬ್ಬ ಲೇಖಕರ ಮೂರ್ನಾಲ್ಕು ಕಾದಂಬರಿಗಳನ್ನು ಒಂದಾದ ಮೇಲೊಂದರಂತೆ ಓದಲು ನನಗೆ ಸಾಧ್ಯವಾಗುವುದಿಲ್ಲ. ಅಲ್ಲಿ ಒಂದು ಕಾದಂಬರಿಯನ್ನು ಮುಗಿಸಿ ಇಲ್ಲಿನ ಎರಡು ಮೂರು ಪ್ರಬಂಧಗಳನ್ನು ಓದುತ್ತಾ, ನಡುವೆ ಸ್ವಲ್ಪ ಸಮಯ ಸಿಕ್ಕಾಗ ಅಲ್ಲಿ ಇಲ್ಲಿ ಒಂದೊಂದು ಪ್ರಬಂಧಗಳನ್ನು ಓದುತ್ತಾ ಈ ಪುಸ್ತಕವನ್ನು ಓದಿ ಮುಗಿಸಿದೆ. ಹೀಗೆ ಒಂದೇ ಗುಕ್ಕಿನಲ್ಲಿ ಓದದಿದ್ದರಿಂದ ಆದ ಲಾಭ ಅಪಾರ. ಪ್ರತಿಯೊಂದು ಪ್ರಬಂಧವನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ,ಅದರ ಗುಂಗಿನಲ್ಲಿ ಉಳಿಯಲು ಸಹಾಯಕವಾಯಿತು.
ಇಪ್ಪತ್ತು ಪ್ರಬಂಧಗಳ ಈ ಸಂಕಲನದಲ್ಲಿ ಪ್ರತಿಯೊಂದು ವಿಭಿನ್ನ ಮತ್ತು ಅನನ್ಯ. ಕತೆ, ಸಂಗೀತ,ಕಾವ್ಯ, ಚಿತ್ರಕಲೆ, ಫೋಟೋಗ್ರಫಿ ವ್ಯಕ್ತಿ ಚಿತ್ರ ಮುಂತಾದ ವಿಷಯಗಳನ್ನೊಳಗೊಂಡ ಪ್ರಬಂಧಗಳು ಲೇಖಕರ ಅಗಾಧವಾದ ಆಳವಾದ ಓದು ಮತ್ತು ವಿಸ್ತಾರವಾದ ಅಭಿರುಚಿಯನ್ನು ಪರಿಚಯಿಸುತ್ತದೆ. ಜಗತ್ಪ್ರಸಿದ್ಧ ಲೇಖಕನ ಕತೆಯೊಂದನ್ನು ಉದಾಹರಿಸಿ ಅದರಲ್ಲಿರುವ ಶ್ರೇಷ್ಠ ಅಂಶಗಳನ್ನು ಉಲ್ಲೇಖಿಸಿ, ಅದಕ್ಕೆ ಪೂರಕವಾಗಿ ಅಡಿಗರ ಅಥವಾ ಕೆ.ಎಸ್.ನ ಅವರ ಕವಿತೆಗಳನ್ನು ಬಳಸುವುದನ್ನು ನೋಡಿ ನನ್ನಿಂದ ಬೆರಗುಗೊಳ್ಳುವುದಷ್ಟೆ ಸಾಧ್ಯವಾಯಿತು. ಶ್ರೇಷ್ಠ ಫೋಟೋಗ್ರಫಿಯಲ್ಲಿ ವಸ್ತುವಿನ ಬಳಕೆ, ನೆರಳುಬೆಳಕುಗಳ ವಿನ್ಯಾಸಗಳ ಜೊತೆಗೆ ಛಾಯಾಗ್ರಾಹಕ ಮತ್ತು ಫೋಟೋ ತೆಗೆಸಿಕೊಳ್ಳುವವರ ಮನೋಧರ್ಮ ಸಹ ಮುಖ್ಯವಾಗುತ್ತದೆ ಮುಂತಾದ ಹೊಸ ವಿಚಾರಗಳನ್ನು ಓದಿದಾಗ ಅವರೆಷ್ಟು ಸೂಕ್ಷ್ಮಗ್ರಾಹಿ ಎಂದು ತಿಳಿಯುವುದು. ನನ್ನ ಸಣ್ಣಕತೆ ಮತ್ತು ಭಾಷಾಂತರ ಸಾಧ್ಯತೆ ಮತ್ತು ಸವಾಲುಗಳು ಎಂಬ ಪ್ರಬಂಧಗಳು ಸಾಹಿತ್ಯದ ವಿದ್ಯಾರ್ಥಿಗಳಿಗೆ ಒಂದು ದಾರಿದೀಪ. ಇನ್ನು ಕಾವ್ಯನಾಮಗಳನ್ನು ಇಟ್ಟುಕೊಂಡು ಬರೆದ ವಿಶ್ವದ ವಿವಿಧ ಲೇಖಕರ ಬಗೆಗಿನ ಪ್ರಬಂಧವು ಕಚಗುಳಿಯಿಡುತ್ತದೆ. ಭೀಮಸೇನ್ ಜೋಷಿ ಮತ್ತು ಬಾಲಮುರಳಿಕೃಷ್ಣ ಅವರು ಸ್ವರ ರಾಗಗಳನ್ನು ವಿಸ್ತರಿಸುವ ರೀತಿ, ಅವರ ಆಂಗಿಕ ಅಭಿನಯಗಳ ವಿವರಗಳು ಒಂದು ಸಂಗೀತ ಕಛೇರಿಯನ್ನು ಕಣ್ಮುಂದೆ ನಿಲ್ಲಿಸುತ್ತದೆ.
ಪ್ರತಿಯೊಂದು ಪ್ರಬಂಧದಲ್ಲಿ ಬೇಕಾದಷ್ಟು ಮಾಹಿತಿಗಳನ್ನು ಒದಗಿಸಿದ್ದು, ಎಲ್ಲಿಯೂ ಅತಿ ಎನಿಸದು, ಕಾರಣ ಲೇಖಕರ ನಿರೂಪಣೆಯ ಶೈಲಿ. ಒಣ ಮಾಹಿತಿಯಾಗಬಹುದಾದ್ದನ್ನು ಕಲಾತ್ಮಕವಾಗಿ ಓದುಗರಿಗೆ ದಾಟಿಸುವುದು ಸಹ ಒಂದು ಕಲೆ. ಅದು ದಿವಾಕರ್ ಅವರಿಗೆ ನೀರು ಕುಡಿದಷ್ಟು ಸಲೀಸು. ಬಹಳಷ್ಟು ಇಷ್ಟವಾದ ಸಂಕಲನ. ಸಂಗ್ರಹಯೋಗ್ಯ ಪುಸ್ತಕ.
ನಮಸ್ಕಾರ,
ಅಮಿತ್ ಕಾಮತ್