ಎಲ್ರೂ ಹೀಗ್ಹೀಗೆ ಬದುಕಬೇಕು ಅನ್ನೋರೆ; ಆದ್ರೆ ಹಾಗೆ ಬದುಕಿದೋರೆಷ್ಟು ಜನ? ಪ್ರಕಾಶ್ ರೈ ಅವರು ತಮ್ಮ ಜೀವನದ ಅನುಭವಗಳನ್ನ ಸಣ್ಪುಟ್ಟ ಕತೆಗಳ ತರಹ ಲೇಖನಗಳಲ್ಲಿ ವಿವರಿಸ್ತಾ ಹೋಗ್ತಾರೆ. ಅಲ್ಲೊಂದು ಸಂದೇಶ ಕೊಡ್ತಾರೆ. ವಿಭಿನ್ನವಾದ ಶೈಲಿಯಲ್ಲಿ ಇಲ್ಲಿರೋ ಸುಃಖ, ದುಃಖ, ಪ್ರೀತಿ, ಪ್ರೇಮಗಳಂಹ ಹಲವು ಲೇಖನಗಳನ್ನ ಹೇಳ್ತಾ ಹೋಗೋದರಿಂದ ಒಂದು ಫೀಲ್ ಗುಡ್ ಫೀಲ್ ಸಿಗುತ್ತೆ. ಸುಮಾರು ವಿಷಯಗಳನ್ನ ಬಾರೀ ಗಜಿಬಿಜಿ (complicate) ಮಾಡಿಕೊಳ್ಳೋ ಜನರಿಗೆ ಈ ಪುಸ್ತಕ ಬಾರೀ ಸ್ಪೇಷನ್ ಅನ್ನೋ ಹಾಗಿದೆ. ನೀನಿದನ್ನ ನಂಬ್ಲೇಬೇಕು, ಹೀಗೆ ಮಾಡಬೇಕು, ಕರೆಂಟು ಕಂಬ ಕಂಡ್ರೆ ಒಂದು ಪುಲ್ಟಾಸ್ ಕಲ್ಲು ಎಸಿಲೇ ಬೇಕು ಅಂತೆಲ್ಲ ಹೇರೋಕೆ ಹೊಗದೆ ಹೌದಲ ಗುರು, ಈತರ ವಿಷಯಗಳನ್ನೂ ಹೀಗೂ ಯೋಚ್ನೆ ಮಾಡ್ಬೋದಲ ಅನಿಸುವಂತೆ ಮಾಡ್ತಾರೆ ಇಲ್ಲಿ. ಬದುಕನ್ನ ಬೇರೆ ಬೇರೆ ಕೋನಗಳಲ್ಲಿ ನಿಂತು ನೋಡಿವಂತೆ ಮಾಡೋ ಪುಸ್ತಕ “ಅವರವರ ಭಾವಕ್ಕೆ” ಚೆನ್ನಾಗಿದೆ ಗುರು, ಆರಾಮಾಗಿ ಓದಿಸಿಕೊಂಡು ಹೋಗುತ್ತೆ. ಒಂತರ ಬೆಸ್ಟ್ ಪ್ರೆಂಡ್ ಜೊತೆ ಮಾತಾಡಿದಂಗಿರುತ್ತೆ. ಸುಮಾರು ಕತೆಗಳು ಮನಸಲ್ಲಿ ಉಳಿಯುತ್ತೆ. ಜೈ
What makes a man he is ? The journey ? Destiny ? Experiences ? Choices ? May be all these connected in a way or the other ? Prakash Rai's realistic take on philosophical thoughts and narrating them in his own style of descrete events as short stories emanating from experiences of his journey at times captivates the reader and at times makes it seem more like an editorial. No matter what, I have always enjoyed knowing the person behind the personality and their own commentaries make it more "here I'm" kind of reads. At some places there seems to be repeatitions and drop of pace from the same but overall it was a good read.
ಪ್ರಕಾಶ್ ರೈ ಅವರ "ಅವರವರ ಭಾವಕ್ಕೆ" ಈಗ ತಾನೇ ಓದಿ ಮುಗಿಸಿದೆ.ಇದರಲ್ಲಿ ಪ್ರಕಾಶ್ ರೈ ತಮ್ಮ ಜೀವನದ ಸು:ಖ ದು:ಖ , ಹಾಗೂ ಜೀವನದ ಹಲವೂ ಮಜಲುಗಳನ್ನು ಲೇಖನಗಳ ರೂಪದಲ್ಲಿ ವಿವರಿಸಿದ್ದಾರೆ. ಬಹಳ ಚೆನ್ನಾಗಿದೆ.... ಕೊನೆಯಲ್ಲಿ ಪ್ರತಿ ಲೇಖನಗಳಲ್ಲಿಯೂ ಒಂದು ಸಂದೇಶ, ಜೀವನದ ಮೌಲ್ಯಗಳನ್ನು ಬಹಳ ವಿಭಿನ್ನವಾದ ನಿರೂಪಣಾ ಶೈಲಿಯೊಂದಿಗೆ ಹೇಳಿದ್ದಾರೆ....
ಒಂದು ಘಟನೆ ಅಥವಾ ಒಂದು ಏನೋ ವಿಷಯ ನಡೆದಾಗ ಒಬ್ಬೊಬ್ಬರು ನೋಡುವ ದೃಷ್ಟಿಕೋನ ಒಂದೊಂದು ರೀತಿಯಲ್ಲಿ ಇರುತ್ತದೆ.ಎಲ್ಲರ ದೃಷ್ಟಿಯೂ ವಿಭಿನ್ನವಾಗಿರುತ್ತದೆ.ಅದು" ಅವರವರ ಭಾವಕ್ಕೆ"ಬಿಟ್ಟಿದ್ದು ಎನ್ನುವುದು ಈ ಪುಸ್ತಕದ ಸಾರಾಂಶ . ಈ ಪುಸ್ತಕ ಓದಿದ ಮೇಲೆ ಹಲವು ಚಿಂತನೆಗಳನ್ನು ನಮ್ಮಲ್ಲಿಯೇ ಹುಟ್ಟು ಹಾಕುತ್ತದೆ. ಹಾಗೂ ಇಲ್ಲಿ ಹೇಳಿದ ಕಥೆಗಳು ಹಲವು ದಿನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಹಾಗೂ ಮತ್ತೇ ಮತ್ತೇ ಕಾಡುತ್ತದೆ. ಒಟ್ಟಿನಲ್ಲಿ ಈ ಪುಸ್ತಕ ನಮ್ಮ ಮೇಲೆ ಒಂದು ಒಳ್ಳೆಯ ಪರಿಣಾಮ ಬೀರುವುದಂತೂ ಸತ್ಯ.