ಸತ್ಯ ಹೇಳಬೇಕೆಂದರೆ ಇದು ವರದಿ ಅನಿಸಿತು. ಹೊಸತೇನೂ ಇಲ್ಲದ ಪತ್ರಿಕೆಗಳಲ್ಲಿ ಅಲ್ಲಿ ಇಲ್ಲಿ ಓದಿ ತಿಳಿದ ಸುದ್ದಿಗಳಲ್ಲಿ ಕಂಡಷ್ಟೇ..
ತಾಯಿಯ ಹಠಾತ್ ಕೊಲೆಯ ನಂತರ ಪ್ರಧಾನಿಯಾಗುವ ರಾಜೀವ್ ಗಾಂಧಿ ಅಧಿಕಾರಾವಧಿ. ಅವರ ಸಾವಿನ ನಂತರ ರಾಜಕೀಯ ಮೇಲಾಟ, ಸೋನಿಯಾ ರಂಗಪ್ರವೇಶ, ಸೋನಿಯಾ ರಾಜಕೀಯದಲ್ಲಿ ತಳವೂರುವುದರೊಂದಿಗೆ ಪುಸ್ತಕ ಮುಗಿಯುತ್ತದೆ. ಹೊಸತೇನೂ ಅನಿಸದ ಬರವಣಿಗೆ. ಆ ಕಾಲದ ರಾಜಕೀಯ ಚಿತ್ರಣದ ಒಂದು ಮುಖದ ಪರಿಚಯವಾಗುತ್ತದೆ.