Kota Shivaram Karanth was a Kannada writer, social activist, environmentalist, Yakshagana artist, film maker and thinker. He was described as the "Rabindranath Tagore of Modern India who has been one of the finest novelists-activists since independence"by Ramachandra Guha. He was the third person among eight recipients of Jnanpith Award for Kannada the highest literary honour conferred by the Govt. of India.
Shivaram Karanth was born on 10 October 1902, in Kota near Udupi in the Udupi district of Karnataka to a Kannada family.He was influenced by Gandhi's principles and took part in Indian Independence movement while he was in college. He did not complete his education and went to participate in the Non-cooperation movement and canvassed for khadi and swadeshi for five years up to 1927. By that time Karanth had already started writing fiction-detective novels, to begin with as well as plays.
Karanth was an intellectual and environmentalist who tremendously contributed to art and culture of Karnataka. He is considered one of the greatest novelist in Kannada. Apart from his 47 novels, he also wrote 31 plays, four short stories, six books of essays and sketches, thirteen books on art, 2 volumes of poems, 9 encyclopedias, and 100+ of articles on various issues and subjects, including a history of world art in Kannada and a work on Chalukyan sculpture and architecture, a standard treatise on the Yakshagana (with which dramatic form, his name is identified), a three volume book of knowledge for children, a four volume encyclopedia on science for grown ups, 240 children's books, six books on travel, two books on birds, three Travelogues, an autobiography.
He has received several literary awards,.Namely, Jnanpith Award, Padma Bhushan, Sahitya Academy award and Pampa Award.
He passed away on 9th December 1997 in Manipal, Karnataka.
ನಮ್ಮ ಇಷ್ಟದ ತಿನಿಸನ್ನು ನಮ್ಮ ಮುಂದಿಟ್ಟರೆ, ಅರೇ ತಿಂದರೆ ಮುಗಿದು ಹೋಗುತ್ತಲ್ಲ ಅನ್ನೋ ಬೇಸರ ತಿನ್ನುವ ಮೊದಲೇ ಇರುತ್ತದೆ. ಅಂತದೇ ಪ್ರೀತಿ ಕೆಲ ಪುಸ್ತಕಗಳ ಮೇಲೆ ನನಗಿದೆ, ಓದಿದರೆ ಆ ಸ್ವಾದ ತೀರಿ ಹೋಗುವ ಭಯದಲ್ಲಿ ನಾನಿರುತ್ತೇನೆ, ಹೀಗೆ ಅಜ್ಞಾನಿಯಾಗೆ ಇರುವ ಬಯಕೆ. ಇಂತಹ ಒಂದು ಪುಸ್ತಕ "ಮರಳಿ ಮಣ್ಣಿಗೆ".
ಇದು ಮೂರು ತಲೆಮಾರಿನ ಕಥೆ, ರಾಮ ಐತಾಳರ ಮದುವೆಯಲ್ಲಿ ಶುರುವಾಗಿ, ಮೊಮ್ಮಗ ರಾಮನ ಮದುವೆಯ ದಿಬ್ಬಣಕ್ಕೆ ಹಣಿಯಾಗುವ ತನಕ ಕಥೆ ಸುದೀರ್ಘವಾಗಿ ಹರಡುತ್ತದೆ. ಮೊದಲಿಂದ ಕೊನೆಯವರೆಗೂ ನಮ್ಮ ಮನಸಲ್ಲಿ ಅಲೆ ಅಲೆಯಾಗಿ ಬೋರ್ಗರೆಯುವುದು ಕಡಲು. ಆ ಕಡಲು ಇಲ್ಲಿನ ಬಹು ಮುಖ್ಯ ಪಾತ್ರ, ಅಲ್ಲಿನ ಜೀವಗಳಲ್ಲಿ ಕಡಲು ಎಷ್ಟು ಬೆಸೆದಿದೆ ಅನ್ನುವುದು ಕಾದಂಬರಿ ಓದೇ ಆಸ್ವಾದಿಸಬೇಕು.
ಒಂದು ಕಾದಂಬರಿಯನ್ನು ಓದುವ ಓದುಗನಿಗೆ ಅದರ ಕಾಲವಧಿ ಬಹಳ ಮುಖ್ಯವಾಗುತ್ತದೆ. ಅವನ ಮನಸ್ಸು ಅಲ್ಲಿ ನೆಲೆಸುವದಕ್ಕೆ ಅಡಿಪಾಯವದು. ಇಲ್ಲಿ ನಮಗೆ ನಿರ್ದಿಷ್ಟ ಕಾಲವಧಿ ತಿಳಿಯುವುದು 333-334ನೇ ಪುಟದಲ್ಲಿ. ಅಲ್ಲಿ ಒಂದು ನಿಮಿಷ ಕಣ್ಮುಚ್ಚಿ ಕಾದಂಬರಿಯ ಹಿಂದಿನ ಘಟನೆಗಳನ್ನು ಮೆಲುಕು ಹಾಕಿದರೆ ಒಂದು 50-60 ವರ್ಷದ ಪೂರ್ವಸೊಬಗನ್ನು ಕಾಣಬಹುದು. ಅಲ್ಲಿನ ಪರಿಸರ ಮತ್ತು ವ್ಯಕ್ತಿತ್ವ ರೂಪಾಂತರಗಳನ್ನು ಎಷ್ಟು ಸೂಕ್ಷ್ಮವಾಗಿ ಕಾರಂತರು ಹೆಣೆದಿರುವುದು ಗೋಚರವಾಗುತ್ತದೆ. ನಂತರದ ಓದು ಇನ್ನೂ ಆಪ್ತವಾಗುತ್ತದೆ.
ತಂದೆ ತಾಯಿಯರ ಮೌಲ್ಯ, ಸಂಬಂಧಗಳ ಮೌಲ್ಯ, ನಮ್ಮ ತಾಯಿನೆಲದ ಮೌಲ್ಯವನ್ನು ಸಾರಿ ಸಾರಿ ಈ ಕೃತಿ ಹೇಳಿದರೂ ಅದರಲ್ಲಿ ಕಟುವಿಲ್ಲ. ಪಾತ್ರಗಳ ಸಾವು ಮತ್ತು ಅದರ ಸಮಾರೋಪವೇ ಆ ಸಂದೇಶವನ್ನು ಸಾರುತ್ತದೆ ವಿನಃ, ತಲೆ ಮೇಲೆ ಹೊಡೆದು ಹೇಳುವ ಸಂದೇಶವಂತೆ ತೋರುವುದಿಲ್ಲ.
ಒಂದು ತಪ್ಪು ನಿರ್ಧಾರ, ಒಂದು ಬೇಜವಾಬ್ದಾರಿತನ ಹೇಗೆ ಒಂದು ಸಂತತಿಯನ್ನು ಹಿಂಸಿಸುತ್ತದೆ ಮತ್ತು ಹಾಳುಗೆಡುವುತ್ತದೆ ಎಂಬುದನ್ನು ಇಷ್ಟು ಸರಳವಾಗಿ, ಪ್ರಭಾವಿಸುವಂತೆ ಹೇಳುವುದು ಬಹುಷಃ ಕಷ್ಟವೇನೋ. ಇದಕ್ಕೆ ಪೂರಕವಂತೆ ಮಗ, ತಂದೆ ಮಾಡಿದ ತಪ್ಪನ್ನು ಮಾಡಲು ಇಲ್ಲಿ ಇಚ್ಚಿಸುವುದಿಲ್ಲ. ಅಲ್ಲಿಗೆ ಕಾದಂಬರಿ ಹೇಳ ಹೊರಟ ಒಂದು ದಿವ್ಯ ಸಂದೇಶ ಪೂರ್ಣಗೊಳ್ಳುತ್ತದೆ.
ಇನ್ನೂ ಪಾತ್ರವರ್ಗವಂತೂ ಚಂದಕ್ಕಿಂತ ಚಂದ, ಐತಾಳರ ಯೌವನ ಮತ್ತು ಮುಪ್ಪಿನ ಕಾಲವಧಿ, ಸರೋಸತಿಯ ಕಷ್ಟ ಸಹಿಶ್ನುತೆ, ಪಾರೋತಿಯ ತಾಳ್ಮೆ, ಲಚ್ಚಿಯ ಬೇಜವಾಬ್ದಾರಿತನ, ನಾಗವೇಣಿಯ ಸ್ವಾಭಿಮಾನ ಎಲ್ಲವೂ ಅತಿ ಏನಿಸದೆ ಸಮರ್ಥವಾಗಿ ಮೂಡಿ ಬಂದಿದೆ.
ಇದು ಬಹುಷಃ ಕಾರಂತರ ಆತ್ಮಕಥೆಯ ಭಾಗವೋ ಏನೋ ಎನ್ನಿಸುತ್ತದೆ. ಕಾರಂತರ ಜೀವನವನ್ನು ತಿಳಿದುಕೊಂಡಿರುವವರಿಗೆ ರಾಮನ ಪಾತ್ರ ಅವರನ್ನು ಹೋಲುವಂತೆ ಕಾಣುತ್ತದೆ. ರಾಮನ ಕಡಲಿನ ಪ್ರೇಮ, ಪೂರಕವಾಗಿ ಇನ್ನೂ ಗಟ್ಟಿ ಸುಳಿವಾಗಿ ಕಾಣುತ್ತದೆ.
ಇದು ಬಹುಶಃ ಆರನೆಯದೋ ಏಳನೆಯದೋ ಸಲದ ಓದು. ಶಿವರಾಮ ಕಾರಂತರ ಆರಂಭದ ಕಾದಂಬರಿಗಳ ಆ ಖಾಸಗಿತನ ಆಮೇಲಾಮೇಲೆ ಅವರು ಉಕ್ತಲೇಖನಕ್ಕೆ ಹೊರಳಿಕೊಂಡ ಮೇಲೆ ಉಪನ್ಯಾಸಗಳ ತರಹ ಆಯಿತು ಎಂಬುದು ನನ್ನ ಅಭಿಪ್ರಾಯ. ಒಂದು ಕಾದಂಬರಿ ತಾನು ಬರೆಯಿಸಿಕೊಳ್ಳುವಾಗ ಆ ಲೇಖಕನ ಮೂಡ್‌ಗೆ ಅನುಸಾರವಾಗಿ ಬದಲಾಗುತ್ತಾ ಹೋಗುತ್ತದೆ ಎಂಬುದು ನಾನು ಗ್ರಹಿಸಿದ ವಿಷಯ. ಉದಾಹರಣೆಗೆ ನೀವು ವಿವೇಕ ಶಾನಭಾಗರ 'ಇನ್ನೂ ಒಂದು' ಓದಿದರೆ ಅದರ ಮೊದಲ ಅಧ್ಯಾಯ ಹಾಗೂ ನಂತರದ ಕಾದಂಬರಿ ಭಿನ್ನವಾಗಿ ಕಾಣುತ್ತದೆ. ಹಾಗೆಯೇ ಕಾರಂತರ 'ಮರಳಿ ಮಣ್ಣಿಗೆ' ಯ ಮೊದಲ ನೂರು ಪುಟಗಳ ಆ ಮಣ್ಣಿನ ಘಮ ಆಮೇಲೆ ಮಾಯವಾಗುತ್ತದೆ. ಈ ಕಾದಂಬರಿಯ ಐತಾಳರ ಮರುಮದುವೆಯವರೆಗಿನ ಭಾಗ ನನಗೆ ಬಹು ಮೆಚ್ಚಿನದ್ದು. ನಿತ್ಯದ ದಿನ ದೂಡಲು ಐತಾಳ,ಅವರ ಪತ್ನಿ ,ತಂಗಿ ಮಾಡುವ ಕೆಲಸಗಳು , ಪುರುಷ ಮೇಲರಿಮೆಯ ಮುಖಗಳು ಇವೆಲ್ಲ ಎಷ್ಟು ಚಂದವಾಗಿ ಬಂದಿದೆ ಎಂದರೆ ಈ ರೀತಿಯ ಮಣ್ಣಿಗೆ ಹತ್ತಿರದ ಚಿತ್ರಣ ಅವರ ಬೆಟ್ಟದ ಜೀವದಲ್ಲಿ ಮಾತ್ರ ಇಡಿಯಾಗಿ ಸಿಗುತ್ತದೆ. ಇತ್ತೀಚೆಗೆ ದಿವಂಗತ ಎಮ್ ಹರಿದಾಸರಾವ್ ಅವರ ಹಳೆಯ ಮರುಮುದ್ರಿತ ಕಾದಂಬರಿ ' ಬಾಳಿನ ಗಿಡ' ಓದುವಾಗ ನನಗೆ ಮತ್ತೆ ಮರಳಿ ಮಣ್ಣಿಗೆ ಓದಿದಾಗ ಆದಷ್ಟೇ ಖುಷಿಯಾಯಿತು. ಇವೆಲ್ಲ ಮರು ಓದಿಗೆ ಹೊಳೆದ ವಿಷಯಗಳು. ಮರಳಿ ಮಣ್ಣಿಗೆ ಮೂರು ತಲೆಮಾರುಗಳಲ್ಲಿ ಮನುಷ್ಯ ಮತ್ತವನ ಕುಟುಂಬ ಎದುರಿಸಬೇಕಾಗಿ ಬಂದ ಸಮಸ್ಯೆಗಳ ಸ್ವರೂಪ,ಆಯಾಮಗಳ ಮತ್ತು ಬದಲಾವಣೆಗಳ ಎದುರುಗೊಂಡ ರೀತಿಗಳ ಸಮರ್ಥವಾಗಿ ವಿಶ್ಲೇಷಿಸಿದ ಕೃತಿ.
ಇಷ್ಟು ಸಲ ಓದಿದರೂ ಅದರ ಕುರಿತಾದ ಮೆಚ್ಚುಗೆ ಹಾಗೇ ಇರುವುದು ಅದರ ಮಹತ್ತಿಗೆ ಸಾಕ್ಷಿ.
All about Love for homeland... Book is made for me :) Though I could not picturize few things as book is written in Kundapura Kannada , still I could feel those. Love for sea is written beautifully!
Few of the things that inspired/touched me were.. 1. Character Saraswathi who is busy bee about work.. Who doesn't like to be lazy. 2. The regrets for pain we caused, when somebody leave us from this world.
ನಮ್ಮ ಮಣ್ಣಿನಲ್ಲಿರುವ ನೆಮ್ಮದಿ ಇನ್ನೆಲ್ಲೂ ಸಿಗಲಾರದು. ಮೂರು ತಲೆಮಾರಿನ ಕತೆ ಎಷ್ಟು ಬೇಗ ಮುಗಿಯಿತು ಎಂಬುದೇ ತಿಳಿಯಲಿಲ್ಲ. ರಾಮ ಐತಾಳರ ಕನಸಿನ ಕೈಗೂಸು ಎಲ್ಲರ ಕೈಮೀರಿ ಬೆಳೆದ ಪರಿ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬುದಕ್ಕೆ ಸರಿಯಾದ ಉದಾಹರಣೆ. ಒಬ್ಬರ ತಪ್ಪು, ಬೇಜವಾಬ್ದಾರಿತನ, ದುರ್ಚಟದಿಂದ ಇಡೀ ಕುಟುಂಬ ಗೋಳಾಡಿದ ಕತೆ. ತನ್ನ ಜವಾಬ್ದಾರಿ ಮರೆಯದೇ ಎಷ್ಟೇ ಕಷ್ಟಗಳು ಬಂದರು ಎದುರಿಸಿ ಕೊನೆಗೆ ತಮ್ಮ ಮಣ್ಣಿನಲ್ಲೇ ನೆಮ್ಮದಿ ಕಂಡುಕೊಂಡು ಬದುಕು ಸಾಗಿಸಿದ ನಾಗವೇಣಿ ಮತ್ತು ರಾಮನ ಕತೆ.
ಮೂಕಜ್ಜಿಯ ಕನಸುಗಳಿಗಿಂತ ಈ ಕಾದಂಬರಿ ನನಗೆ ತುಂಬಾ ಇಷ್ಟವಾಯ್ತು! ಹಾಗೆಯೇ, ಈ ಕಾದಂಬರಿಗೆ ಜ್ಞಾನಪೀಠ ಬಂದಿದ್ರೆ ಚೆನ್ನಾಗಿರ್ತಿತ್ತು ಅಂತ ನನಗೆ ಹಲವು ಬಾರಿ ಅನ್ನಿಸಿದೆ ಕೂಡು. ಕೆಲವು ಪುಸ್ತಕಗಳು ಇರುತ್ವೆ ಗೊತ್ತಾ? ಮನಸ್ಸಿನಾಳಕ್ಕೆ ಇಳಿದು ಕಾಡುವಂತಹ, ಜೀವನದ ಅಸ್ತಿತ್ವದ ಅರ್ಥವೇನು ಎನ್ನುವ ಪ್ರಶ್ನೆ ಮೂಡಿಸುವಂತಹ ಪುಸ್ತಕಗಳು ಅವುಳಲ್ಲಿ ಇದೂ ಒಂದು.
ಭಾರತೀಯ ಕುಟುಂಬಗಳಲ್ಲಿ ಸಾಮಾನ್ಯವಾಗಿ ಇದ್ದಂತಹ ಬದುಕು ಬವಣೆಯ ಕಥೆಯೇ ಆದರೂ ಕಾರಂತರ ಬರಹದಲ್ಲಿನ ಶಕ್ತಿ, ಈ ಕಾದಂಬರಿಗೆ ಮೆರುಗು ತಂದಿದೆ ಅಂತ ಹೇಳಬಹುದು. ಒಂದೆಡೆ ಆದರ್ಶ ಗರತಿಯರ ಹಾಗೂ ಶಾನುಭೋಗರ ನೆಮ್ಮದಿಯ ಮಡಿ ಜೀವನ. ಇನ್ನೊಂದೆಡೆ ಸುಖದಲ್ಲಿ ಬೆಳೆದು ಚಟಕ್ಕೆ ಬಿದ್ದು ಹಾಳಾದ ಮಗ, ಮನೆ; ಮತ್ತೊಂದೆಡೆ, ಮನೆ ಸಂಸಾರದ ಉಳಿವಿಗೆ ಒಬ್ಬ ಹೆಣ್ಣಿನ ನಿರಂತರ ಹೋರಾಟ, ಕಷ್ಟದಲ್ಲಿ ಬೆಳೆದ ಹುಡುಗನ ವದ್ದಾಟ. ಮಗದೊಂದೆಡೆ, ಗಾಂಧಿ ತತ್ವಗಳು ಮತ್ತು ಸ್ವಾತಂತ್ರ್ಯ ಚಳುವಳಿ. ಒಂದು ದುಶ್ಚಟ ಅಥವಾ ದುರಭ್ಯಾಸ ಹೇಗೆ ಒಂದು ಕುಟುಂಬವನ್ನ ಅವಸಾನದ ಅಂಚಿಗೆ ನೂಕ ಬಹುದು ಅಂತಾ ಹೇಳ್ತಾ, ಸಮಾಜದಲ್ಲಿನ ಕೆಲವು ಕಟು ಸತ್ಯಗಳನ್ನ ಲೇಖಕರು ತುಂಬಾ ಚೆನ್ನಾಗಿ ಮನಕಲಕುವ ಹಾಗೆ ಈ ಕಾದಂಬರಿಯಲ್ಲಿ ಧ್ವನಿಯಾಗಿಸಿದ್ದಾರೆ. ಕಡಲೆಂಬ ಬದುಕಿನ ನಿರಂತರ ಹೋರಾಟದಲ್ಲಿ ಹೊಸ ಅಲೆಗಳು ನವಚೈತನ್ಯ ತರುವವು ಎನ್ನುವ ತತ್ವ ಇಲ್ಲಿ ಅಡಕವಾಗಿದೆ.
ಇಲ್ಲಿ ನನಗೆ, ಕೆಲವು ಪಾತ್ರಗಳ ಮೇಲೆ ಗೌರವಾದರ್ಶಗಳು ಮೂಡಿದರೆ, ಇನ್ನೂ ಕೆಲವು ಪಾತ್ರಗಳಮೇಲೆ ಕೋಪಾತಿರಸ್ಕಾರಗಳೂ ಮೂಡಿತು. ಕೋಪದಲ್ಲಿ ಪುಸ್ತಕವನ್ನೇ ಎತ್ತಿ ಬಿಸಾಡಿದ ಸಂದರ್ಭಗಳೂ ಉಂಟು (ಕೆಲವೇ ಕೆಲವು ಪುಸ್ತಕಗಳು ತಮ್ಮನ ನನ್ನ ಕೈಯಿಂದ ಬಿಸಾಡಿಸಿವೆ; ಅದು ಸೊಗಸಾದ ಪುಸ್ತಕಗಳ ಕ್ರೂರ ಪಾತ್ರಗಳ ಮೇಲೆ ಮೂಡಿದ ನಖಶಿಖಾಂತ ಕೋಪದಿಂದಲೂ ಹೌದು ಮತ್ತು ನೀರಸವಾದ ಪುಸ್ತಕಗಳಿಂದಲೂ ಹೌದು). ಪಾತ್ರ ಚಿತ್ರಣ ಅಷ್ಟು ಸೊಗಸಾಗಿದೆ ಹಾಗೂ ಪ್ರಭಾವಶಾಲಿಯಾಗಿದೆ ಎನ್ನುವುದು ನನ್ನ ಅನಿಸಿಕೆ. ಹಾಗೆಯೇ ಈ ಕಥೆಯಲ್ಲಿ ಬರುವ ಕುಟುಂಬದ ಜಂಜಾಟ ನನ್ನ ಕಣ್ಮುಂದೆಯೇ ನೆಡೆದ ಅನುಭವಾಯ್ತು ಹಾಗೂ ಮನಸ್ಸಿಗೆ ಈ ಪುಸ್ತಕ ತುಂಬಾ ಹತ್ತಿರವಾಯ್ತು ಕೂಡ. ನಿಜಕ್ಕೂ, ಈ ಪುಸ್ತಕ ಓದಿ ಮುಗಿಸಿದಾಗ ಮನ ತುಂಬಿ ಬಂತು!
ಶಿವರಾಮ ಕಾರಂತರ "ಮರಳಿ ಮಣ್ಣಿಗೆ" - ಸ್ವಾತಂತ್ರ್ಯಪೂರ್ವ ಭಾರತದ ಕರಾವಳಿ ತೀರ ಪ್ರದೇಶದ ಒಂದು ಸಾಮಾನ್ಯ ಗ್ರಾಮೀಣ ಕುಟುಂಬದ ಮೂರು ತಲೆಮಾರಿನ ನೋವು-ನಲಿವು ಏಳುಬೀಳಿನ ಪಯಣವನ್ನು ಮನಮುಟ್ಟುವಂತೆ ಬಿಚ್ಚಿಡುವ ಒಂದು ಸಾಮಾಜಿಕ ಕಾದಂಬರಿ.
400ಕ್ಕೂ ಹೆಚ್ಚು ಪುಟಗಳಿರುವ ಈ ಕಾದಂಬರಿಯ ಕಥೆಯನ್ನು ಕೆಲವು ಪದಗಳಲ್ಲಿ ಬರೆಯುವುದು ನನ್ನಿಂದ ಅಸಾಧ್ಯ. ಕಾರಣ, ಕಾರಂತರು ಕಾದಂಬರಿಯನ್ನು ತುಂಬಾ ಆಳವಾಗಿ, ಎಳೆ ಎಳೆಯಾಗಿ ಬರೆದಿದ್ದಾರೆ ಹಾಗೂ ಕಾದಂಬರಿಯ ಎಲ್ಲಾ ಪಾತ್ರಗಳು, ಆ ಪಾತ್ರಗಳ ಭಾವನೆಗಳು, ಸನ್ನಿವೇಶಗಳು ಎಲ್ಲವೂ ಮಹತ್ವವಾದವು. ಕೆಲವು ಪದಗಳಲ್ಲಿ ಬರೆದು, ಕಥೆ ಮತ್ತು ಪಾತ್ರಗಳು ಅಪೂರ್ಣವಾಗಬಾರದು ಎನ್ನುವುದು ನನ್ನ ಉದ್ದೇಶ.
ಕಾದಂಬರಿಯಲ್ಲಿ ಕಡಲತೀರದ ಆಚಾರ-ವಿಚಾರಗಳ ಪರಿಚಯವಾಗುತ್ತದೆ, ಕಡಲ ಒಡನಾಟವಿಲ್ಲದವರಿಗೂ ಕೂಡ ಕಡಲ ಮೇಲೆ ಒಲವು ಉಂಟಾಗುವಂತಹ ಪ್ರಾಮುಖ್ಯತೆ ಕಡಲಿಗಿದೆ.
ಸ್ವಲ್ಪ ದೀರ್ಘವಾದ ಕಾದಂಬರಿ ಅನ್ನಿಸಿದರೂ, 1941ರಲ್ಲಿ ಬರೆದ ಕಾದಂಬರಿಯನ್ನು ನಮ್ಮ ಯುವ ಪೀಳಿಗೆ ಓದಲೇಬೇಕು. ಹೆತ್ತವರಿಗೆ ಮಕ್ಕಳ ಮೇಲೆ ಯಾವ ರೀತಿಯ ಆಶಯ, ಭರವಸೆಗಳಿರುತ್ತವೆ ಹಾಗೂ ಮಕ್ಕಳಿಗೆ ಇರುವಂತಹ ಜವಾಬ್ದಾರಿ ಎಂತಹುದು, ಜವಾಬ್ದಾರಿಗಳನ್ನು ಮರೆತು ಕೆಟ್ಟ ದಾರಿ ಹಿಡಿದರೆ ಅವರ ಕುಟುಂಬ ಹಾಗೂ ಮುಂದಿನ ಪೀಳಿಗೆಯ ಮೇಲೆ ಆಗುವ ಪರಿಣಾಮ ಎಂತಹದು ಎನ್ನುವುದು ಕಾದಂಬರಿಯಿಂದ ಮನದಟ್ಟಾಗುತ್ತದೆ.
ಕಾದಂಬರಿಯಲ್ಲಿ ನಲಿವಿಗಿಂತ ನೋವುಗಳೇ ಹೆಚ್ಚಾಗಿ ಇದ್ದರೂ ಕೂಡ ಕೊನೆಯಲ್ಲಿ ಕಾರಂತರು ಒಂದೊಳ್ಳೆ ಜೀವನ ಸಂದೇಶ ನೀಡುವುದರೊಂದಿಗೆ, ಮನಸ್ಸಿಗೆ ಸಂತೃಪ್ತಿ ನೀಡಿ ಕಾದಂಬರಿಗೆ ಅಂತ್ಯ ಹಾಡುತ್ತಾರೆ.
Every author has a unique style to share their imagination and thoughts with the reader, In all of them, Shivarama karanth works whimsically particular in the construction of story and narration. Most of us read the book to escape the day to day confusion of life, We escape reality by swimming in the imagination of the author to fill our lifeless soul with meaning. But this is not a similar case with Karanth works, His works serve life's all good and bad as it is to make us miserable and joyful without an ounce of a distance from reality.
Marali Manege as its name says depicts the unbreakable bond with our homeland and indisputable emotional connection with it. The author mainly added ingredients of the beauty of Mangalore, the wickedness of human nature, Bharatiya Sanskriti, family value, and the indomitable will of a rural woman in India to serve us the delicious dish with a mixture of the taste of life.
I have read this book in Kannada, Distinct Kannada used here is a little struggle in the first 100 pages till we get used to the terms so don't get discouraged. The book was written based on life before the independence of India, so it offers you the basic idea about a pre-independence society which is enthralling and frightening at the same time.
It's very hard to write a review about the content in the book because every character plays a protagonist role based on the requirement in all the 3 generations of the ITHAlA family. So just read it you might find some spark in your life in the face of a competitive affluent world
Please go and read Karantha's works because it deciphers the secrets to be human in the world of self-obssessed sub-humans.
It has been years since I read a book from cover to last page without a break. This took me back to the old days ( written in 1941) that I have never been to. Simplicity of life, nature playing a big role in lives, animals being part of the families....
Most importantly the style of Sri Karanth... it is so simple, it is stunning. Casual conversations and protrayal of real characters which are never black or white but most of them grey. One sees characters that are all over the landscape... in every day lives.. neighbors, colleagues, employees, employers, relatives, spouses, children parents.. who are all well meaning to some extent and who are all selfish to some extent...
I have found a new genre and a new author which meant there are quite a few works of Sri Karanth that I have ahead of me.. Salute to the master.
ಸ್ವಾತಂತ್ರ್ಯ ಪೂರ್ವದ ಕಡಲೂರ ಚಿತ್ರಣ, ಕಡಲತೀರ ನದಿ ಭೂಮ್ಯಾಕಾಶ ಗದ್ದೆ ಇಳುವರಿ ಮದುವೆ ಮುಂಜಿ ಅಲ್ಲಿನ ಬದುಕು ಪ್ರೀತಿ ಬೇಸಾಯ ವ್ಯಾಮೋಹ ಸಾವು ನೋವು ಗೆದ್ದ್ದೇ.. ನೆಂದು ಸೋಲುವ ಗಂಡು ಸೋತು ಸೋತು ಗೆಲ್ಲುವ ಹೆಣ್ಣು. ಅಲ್ಲಿಗೆ ಇಂದು ಹೋಗಲು ಸಾಧ್ಯವಿಲ್ಲ ಆ ಕಾಲ ಈಗಿನದ್ದಲ್ಲ ಆ ಜನಗಳು ಆ ಮನಸುಗಳು ಈಗಿಲ್ಲ ಆದರೂ ಎಲ್ಲವೂ ಪುಟಗಳ ನಡುವೆ ಈಗಲೂ ಅಷ್ಟೇ ಹಸಿರಾಗಿ ತುಂಬಿದೆ. ತೀರಾ ಹಳೆಯ ಮತ್ತು ಎಂದೂ ನೋಡದ ಬೇರೆಯೇ ತೆರೆನಾದ ಬದುಕಿನ ಚಿತ್ರಣವನ್ನು ಪುಸ್ತಕ ತೆರೆದ ಕೂಡಲೇ ಒಮ್ಮೆಲೇ ಸುತ್ತಲೂ ಕವಿಯುವಂತೆ ಮಾಡಿ ಮತ್ತು ಅದರಿಂದ ಹೊರ ಬರಲೊಪ್ಪದಂತೆ ಹಠ ಹಿಡಿದು ಕೂರುವಂತೆ ಮಾಡುವ ಕಾರಂತರ ಬರಹದ ಮೋಡಿಗೆ ಮತ್ತೊಮ್ಮೆ ಮನಸೋತೆ. ಪ್ರಕೃತಿಯೇ ಒಂದು ಸುಂದರ ಉಡುಗೆಯಾದರೆ ಕಾರಂತರ ಬಣ್ಣನೆ ಅದಕ್ಕೊಂದು ಅಪೂರ್ವ ಒಡವೆ.
You can read this work for its style of writing, easy to read, and free-flowing. The female characters are strong and they inspire you a lot through their struggles and ways of overcoming them. The story spans over 3 generations over coastal Karnataka and moves to Chennai, Bangalore, Mysore, and Mumbai.
மிக அருமையான கதை... கிட்டத்தட்ட மூன்று தலைமுறை கதை....
பிரமிப்பாக இருக்கிறது... கொஞ்சம்கூட சலிப்பில்லாமல் தாவல் இல்லாமல் எப்படி இப்படி எழுத முடிந்தது... கால எந்திரத்தில் 100 வருடம் பயணித்துவிட்டு இறங்கியதுபோல் இருந்தது...
Writer Jeyamohan has written a tremendous book in Tamil which is a collection of critical essays on important literary works from major Indian languages that are translated and available in Tamil. It is this book that introduced me and for many readers of Tamil literature belonging to my generation the rich literary heritage of Indian vernacular. I have read major works that he had written about in this book like works from Bengali notably Arogya Nikethanam, Neela Kanda Paravaiyai Thedi, Yenippadigal from Malayalam, Parva from Kannada, etc. Recently I read one of the greatest Indian naturalistic novels written by Shivarama Karanth in Kannada Marali Mannige. Translated in Tamil as Mannum Manidharum.
The novel chronicles the life of Rama Idhalar, a bhramin living in the village of Kota. Rama Idhalar is married to Parvathy and lives with his widowed sister Saraswathi. The novel begins with the initial chapters documenting the poverty, the immense physical work the family had to perform every day especially the lives of Parvathy and Saraswathy. To work in the fields, picking of wood for cooking, there seems to be a continuous never-ending work that characterizes their lives. Shivarama Karanth deftly through a few sketches gives us so much to ponder, there is such minimalist narration to everything, you wonder sometimes is there even an author to this novel, like a camera that captures this lives he documents the essential. The lives of these people are tough and involves tremendous hard work, but there is subtle humor to the way they handle this. In the beginning of the novel, there is an incident where Paravathy reminisces about her wedding, Rama Idalar's father planned the wedding on a rainy season to ensure that there are not many guests who will come and it will bring down the expenses. In another incident, the family is involved in picking wood by jumping in the river, where it meets the sea and once Rama Idhalar jumps thinking it to be a wooden log but he manages to catch a dead cow floating in the water.
Rama and Parvathy are not having any children, this makes Saraswathy suggesting them to adopt a child. Suddenly Rama Idhalar leaves the house before leaving asking the women in the house to ready the house. The women have no clue where is he has gone, they come to know after a few days that he has planned to get married again. Parvathy simply accepts her fate, she is relegated to the position of nonentity, Rama Idhalar is loving towards his second wife Sathyabama. In one of her scenes when Rama Idhalar calls Sathiyabama, and Parvathy goes to attend he asks rudely 'Are you Sathyabama ?'. This moment destroys Parvathy, you are left wonder how much she is suffering, the author had to left to the reader to imagine her plight. Later in the novel when Parvathy is about to die she asks Sarasaathy whether Rama Idhalar will keep her in his lap, at that moment Rama Idhalar begs for forgiveness, but Parvathy is content with what she got. A life in which she dedicated herself to this family. These women whom we all see in our families, our mothers, and grandmothers who with very few things lived such content lives are comparable to great saints. I could think of so many grandmothers who held together the family in spite of so many odds.
Sathyabama gives birth to a son Laxminarayanan Lachchu, and daughter. Lachchu is sent to study in English schools, he grows up to be a degenerate, one who has surrendered to the passions of the physical. He as a child is attached more to Parvathy than Sathyabama, even Parvathy feels attached to him, this leads to tension in their relationships. Eventually, he is sent to study in Kundapura and Udupi where he gets into habits of drunkenness and illicit sexual relationship. Narayana Idhalar marries him to a daughter of a well-known lawyer, called Naagaveni. Their relationship is fraught with tension from the beginning, due to the physical relationship with her she also gets affected with the disease. This devastates Rama Idhalar. During his death, Rama Idhalar transfers all his property to the name of Nagaveni. This angers Lachcu and he leaves Nagaveni to another phase of drunkenness, gambling, etc. He comes back and lives with Nagaveni and they have a son again a Rama in the family after his grandfather. Lachchu this time convinces his wife to transfer the property to his name and sell it to start a hotel. He leaves them to live a life of poverty. Nagaveni is alone and for a phase, she lives with her father and brother in Mangalore. There Rama also grows up happily. Here Nagaveni has a phase of happiness in her life, she learns Violin. They come back to Kota to live in their ancestral house as tenants in extreme poverty. She is supported by Saraswathy, the bonding they share is a high point of the novel. These women always find the strength to face any struggles in this they are stronger than men. Rama is disciplined to the core, in this, he is probably cautious that he is not going to become like his father. Rama goes to study in Madras and after a period of living in Madras and Bombay and comes back to live in Kota to reclaim his life and his land.
There is tremendous subtlety to the writing. Take for instance the scene where Rama goes to see his father who is an old man, he enters a room and sees two men playing cards, completely broken and they look diseased. He waits for some time and asks, can you tell me when will my father come, the person answers one who is sitting opposite to me is your father. Rama walks out with utter disgust. Seenam Iyer is another character in the novel who is a rival to Rama Idhalar, he had made a lot of quick money through hotels run by his son, and there is tension and hatred between them. On knowing that Rama Idhalar is in his death bed, he feels broken and comes to apologize to him and is moved to tears seeing Rama Idhalar. The great courage of the women like Saraswathy and Nagaveni, the warmth they share, especially there is a sequence where Nagaveni requests her father to take Saraswathy to Kasi as it was her last wish before death. By this time Nagaveni is already deserted by her husband and made to live a life of poverty, yet she shares that affection towards Saraswathy. She continues to stay with her till death even though her parents keep requesting her to come and stay with them. She decides to stay even alone after Saraswathy's death, hoping that her son will ensure a good life for her.
With minimal information and observation, Karanth is able to create deep imprints, there seems to be no bad or the good its just people in their peculiar situations tend to act in a particular manner. There is also a feeling that the novel gives at the end of the land as a mother growing men and consuming them, and like the tides, time keeps flowing and people live their lives of happiness, laughter, and tears.
An emotional journey that spans across 3 generations. Very few books have the capacity to hold you as a reader, when considering such a vast canvas. Marali mannige is one of those. There are some sequences in the story which really hit you hard. The quality of Shivram karanth's writing is unparalled in writing stories that really make you feel as if you are experiencing it or it happened with someone you know. Such relatable characters, the environment where he sets up his stories, the choices the characters make are all so real and hence make you feel connected to all of his books.
The only gripes I would have is, the final arc of the story and the character of Paroti. Paroti's suffering and her patience are all greatly portrayed in the first half of the story making you feel for the character. But there's no proper conclusion to all of that, it all feels abrupt when the character is taken away from you. Maybe that's the point of the writer as in, sometimes life is indeed that way. But I would've liked some tribute or a proper end to some of the arcs that come up early in the book.
The final arc feels a bit abruptly ended, when compared to the first two. Rama's choices leading him to all the life lessons he needs are written well. But the turning point for him to return to his land and then how it's told to the reader that now he's leading a new found life where he's successful comes out of nowhere. Again, it might be what the writer intended...
This entire review has been hidden because of spoilers.
This is my first book of Shivram Karanth Sir. I really liked the way he has build up whole book. This book takes us atleast 80 years back.
This book contains all the essentials: 1. Village politics between Maiyas and Itals. 2. Household politics been Paroti and Satyanhame. 3. Bringing up a new born kid. 4. Problems faced by farmer group and villagers in general. 5. How an innocent kid gets dragged into bad influences around him. 6. Mental status of a kid growing up.
I think Karanath Sir has covered it all. Each character in the story is as interesting as the entire book. Let it be Ram Ital, Paroti, Sarosati, Satyabhame, Maiya, Lachcha, Vasudevayya n family, Sadashiva, Nagaveni, Krishnaveni and Junior Ram Ital.
In the first half of the novel, Karanath Sir introduces us to Kota. Life in Kota. Hence, it is slow paced. Once Karnath Sir has introduced most of the main characters, the story picks pace. In the second half, he portrays the adventures of an young boy during schooling, his innocence, his dependence on other family members financially, his wish to meet his dad. Adventures of Lachcha.
Frankly speaking, i was expecting a sad ending or a thought provoking reply to this 415 pager novel. But it slightly disappointed me with the ending. However, i loved every bit of the novel, the pace at which the story moves. I am sure i will be seem here soon with my next review on Karanath Sir’s novel soon.
This entire review has been hidden because of spoilers.
ಕಾರಂತರ ಬರಹದಲ್ಲಿ ಒಂದು ಸಾಮಾನ್ಯವಾಗಿ ಕಾಣೋ ವಸ್ತು ಪ್ರಕೃತಿ. ನಾನು ಈವರೆಗೆ ಓದಿರೊ ಅವರ ಪುಸ್ತಕಗಳಲ್ಲಿ ಪಶ್ಚಿಮ ಘಟ್ಟ ಕಾಡು ಇವುಗಳ ವರ್ಣನೆ ಇತ್ತು. ಈ ಪುಸ್ತಕದಲ್ಲಿ ಅದನ್ನು ಕಡಲು ಆವರಿಸಿಕೊಂಡಿದೆ.
ರಾಮ ಐತಾಳರು ಪುತ್ರ ಸಂತಾನಕ್ಕಾಗಿ ಎರಡನೇ ಮದುವೆ ಆಗುವುದರಿಂದ ಕಥೆ ಸಾಗುತ್ತದೆ. ಮುಂದೆ ಅವರ ಮಗ, ಮೊಮ್ಮಗನ ಜೀವನದ ಕಥೆಯೊಂದಿಗೆ ಓದು ಮುಂದುವರೆಯುತ್ತದೆ. ಆದರೆ ಇಲ್ಲಿ ಪ್ರಮುಖವಾಗಿ ಕಾಣಿಸುವುದು ಮನೆಯ ಹೆಣ್ಣು ಮಕ್ಕಳ ಗಟ್ಟಿತನ. ರಾಮ ಐತಾಳರ ಪತ್ನಿಯರು ಪಾರ್ವತಿ ಸತ್ಯಭಾಮ, ಅವರ ತಂಗಿ ಸರಸ್ವತಿ, ಅವರ ಸೊಸೆ ನಾಗವೇಣಿ ಕಥೆಯ ನಾಯಕಿಯರು ಅಂದ್ರೆ ತಪ್ಪಾಗಲ್ಲ ಅನ್ಸತ್ತೆ. ಅದ್ರಲ್ಲೂ ಗಂಡನಿಂದ ನಿರಂತರ ನೋವು ಅನ್ಯಾಯಕ್ಕೆ ಒಳಗಾಗಿ ಸರಸ್ವತಿ ಒಬ್ಬಳೇ ಹೇಗೆ ಮಗನನ್ನು ಸಾಕುತ್ತಾಳೆ ಅನ್ನೋದನ್ನ ಕಾರಂತರು ಮನ ಮುಟ್ಟುವಂತೆ ಬರೆದಿದ್ದಾರೆ. ಅದನ್ನ ಓದೋವಾಗ ನಮ್ಮ ಮನಸ್ಸು ಮರುಗೋದಲ್ಲಿ ಸಂಶಯ ಇಲ್ಲ.
ಒಂದು ಮಾಧ್ಯಮ ವರ್ಗದ ಕುಟುಂಬದ ಜೀವನ ಹೇಗಿರುತ್ತೆ, ಬದುಕಿನ ಬಂಡಿ ಎಳೆಯೋದಕ್ಕೆ ಸಂಸಾರ ಏನೆಲ್ಲಾ ಮಾಡುತ್ತವೆ ಅನ್ನೋದನ್ನ ಕಾರಂತರು ಎಳೆ ಎಳೆ ಆಗಿ ಬರೆದಿದ್ದಾರೆ. ಇದೆಲ್ಲೆದರ ಜೊತೆಗೆ ಗದ್ದೆ ತೋಟ, ಸಾಗುವಳಿ, ಗೇಣಿ ಮನುಷ್ಯನ ಅಸೂಯೆ, ಹೊಟ್ಟೆಕಿಚ್ಚು, ಅವನ ದುಶ್ಚಟ, ಸ್ವಾತಂತ್ರ ಹೋರಾಟ, ಆಗಿನ ಕಾಲದ ಯುವಕರ ಮನಸ್ಥಿತಿ, ಉದ್ಯೋಗದ ಪರದಾಟ ಎಲ್ಲವನ್ನೂ ಸೇರಿಸಿ ಅತೀ ನಾಜೂಕಿನಿಂದ ಕಥೆ ಹೆಣೆದಿದ್ದಾರೆ.
ಉಡುಪಿಯ ಕಡಲ ತೀರದಲ್ಲಿ ನೆಲೆಸಿರುವ ಒಂದು ಸಣ್ಣ ಹಳ್ಳಿ,ಕೋಡಿ ಬೆಂಗ್ರೆಯಲ್ಲಿ ನೆಡೆಯುವ ಕಥೆ ಮರಳಿ ಮಣ್ಣಿಗೆ. ಇಲ್ಲಿಯವರೆಗೆ ಓದಿದ ಕಾರಂತರ 'ಬೆಸ್ಟ್ ಬುಕ್' ಅನ್ನಿಸುತ್ತದೆ.3 ತಲೆಮಾರಿನ ಬದುಕು ಮತ್ತು ಕಷ್ಟ ಕಾರ್ಪಣ್ಯಗಳನ್ನು ಒಳಗೊಂಡ ಈ ಕಥಾವಸ್ತು,ಒಂದು ಸಲದ ಓದಿಗೆ ದಕ್ಕುವುದು ಕಷ್ಟ. ಪಿತ್ರಾರ್ಜಿತ ಆಸ್ತಿ ಹೊಂದ ಕುಟುಂಬ,ಅದರ ಎರಡನೆ ತಲೆಮಾರಿನ ಸುಖ ಲೋಲುಪ ಸ್ವಭಾವ, ಮೂರನೇ ತಲೆಮಾರಿಗೆ ಎದುರು ನಿಲ್ಲುವ ಕಷ್ಟ ಮತ್ತು ಆಯ್ಕೆಗಳು ಓದುಗರ ಮನಸ್ಸು ಸೆಳೆಯುತ್ತದೆ. ಸ್ವಂತ ಕೃಷಿ ಭೂಮಿಯಿದ್ದು,ಕೆಲವು ಬೇಜವಾಬ್ದಾರಿ ವರ್ತನೆಗಳಿಂದ ಅದನ್ನು ಕಳೆದುಕೊಂಡು,ಅದನ್ನು ಮತ್ತೆ ಗಳಿಸುವ ವೇದನೆಯ ಸಾಕ್ಷ್ಯ-ಚಿತ್ರ ಮರಳಿ ಮಣ್ಣಿಗೆ. ಎಲ್ಲಾ ಕಳೆದುಕೊಂಡು,ದಿಕ್ಕುದೆಸೆಯಿಲ್ಲದೆ ಅಲೆದಾಡಿದರೂ,ಕೃಷಿ ಭೂಮಿಯೇ ಶ್ರಮಿಕನ ಕೊನೆಯ ನೆಲೆಯಾಗುತ್ತದೆ. ಕಡಲ ಜನರ ಸಂಸ್ಕೃತಿ,ವ್ಯಾಪಾರ-ವ್ಯವಹಾರಗಳು ಹಾಗೂ 3 ತಲೆಮಾರಿನೊಳಗೆ ಬದಲಾಗುವ ತಾತ್ವಿಕ ನಿಲುವಗಳು ಕಂಡುಬರುತ್ತದೆ. ಸ್ವತಂತ್ರ ಆಂದೋಲನದ ಕಿಚ್ಚು ಹೊತ್ತಿರುವ ಸಮಯದ ಕತೆಯಾದ್ದರಿಂದ,ಗಾಂಧಿವಾದ,Socialism ಹಾಗೂ Communismಗಳು, ತಮ್ಮ ಮನೆಯ ಕದ ತಟ್ಟಿದಾಗ,ಅದರ ಅರಿವೇ ಇಲ್ಲದ ಸಮಾಜ ಅದರ ಅಪಾಯಗಳನ್ನು ಗ್ರಹಿಸುವ ರೀತಿ ಕಾರಂತರ ವ್ಯಂಗದಲ್ಲಿ ಕಂಡುಬರುತ್ತದೆ. ಇದನ್ನು ಒಂದು cultural anthropology(ಸಾಂಸ್ಕೃತಿಕ ಮಾನವಶಾಸ್ತ್ರ) ಆಧಾರಿತವಾದ ಕಾದಂಬರಿಯೆಂದು ಹೇಳಬಹುದು.
ಒಂದು ಪುಸ್ತಕ ನಮ್ಮನ್ನು ಎಷ್ಟು ದೂರ ಕರೆದುಕೊಂಡು ಹೋಗಬಹುದು ಎಂದು ತಿಳಿಯ ಬಯಸುವವರು ಮರಳಿ ಮಣ್ಣಿಗೆ ಓದಬೇಕು. ಮೇಘದೂತದ ನಂತರ ಯಾವುದಾದರೂ ಕೃತಿ ನನ್ನನು ದೂರ ದೂರದ ಪ್ರದೇಶಗಳಿಗೆ ಕರೆದುಕೊಂಡು ಹೋಗಿದೆ ಎಂದಾದರೆ ಅದು ಮರಳಿ ಮಣ್ಣಿಗೆ. ರಾಮ ರಾಯರ ಆ ಕಡಲಿನ ನೆನಪುಗಳು ನಾನು ನನ್ನ ಅಜ್ಜಿಯೊಂದಿಗೆ ಕಳೆದ ದಿನಗಳನ್ನು ನೆನಪಿಸುತ್ತಿತ್ತು. ಆ ಕಡಲಿನ ಚಿತ್ರಣ ಮತ್ತು ಇನ್ನೊಂದು ಬದಿಯಲ್ಲಿ ಚಿತ್ರಿಸಿರುವ ನದಿಯು ನನ್ನನ್ನು ಮರವಂತೆಯ ಕಡಲಿಗೆ ಹೋಗುತ್ತಿದ್ದ ನನ್ನ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವಂತಿತ್ತು. ಕರಾವಳಿ ಮತ್ತು ಮಲೆನಾಡಿನ ಮಣ್ಣನ್ನು ಅರೀತಿರುವ ನನಗೆ ಅವರು ಕಟ್ಟಿದಂತಹ ಕಥೆಯು ಮನಸ್ಸನ್ನು ಆವರಿಸಿತ್ತು.
ತಾಯಿ ಮತ್ತು ಮಗುವಿನ ಬಾಂಧವ್ಯ , ನಾಗವೇಣಿಗೆ ತನ್ನ ಮಾವನ ಮನೆಯ ಮೇಲಿದ್ದ ಪ್ರೀತಿ , ದನ ಕರುಗಳ ಮೇಲಿದ್ದ ಪ್ರೀತಿ , ಅತ್ತೆಯ ಮೇಲಿದ್ದ ಆದರ ಇವೆಲ್ಲಾ ಈಗಿನ ಮಕ್ಕಳಿಗೆ ಹಿಡಿಸದೆ ಇರಬಹುದು. ಆದರೆ ನಾವು ಏನು ಕಳೆದುಕೊಂಡಿದ್ದೇವೆ ಎಂದು ಅರಿಯಲು ಹೋದವರಿಗೆ ಈ ಕಾದಂಬರಿ ಪ್ರಸ್ತುತ.
ಜಾತಿ, ಮತಗಳಿದ್ದರೂ ಅವೆಲ್ಲಅಮುಖ್ಯ ಇಲ್ಲಿ. ಲಚ್ಛನ ಪಾತ್ರವು ನಾವು ಏನು ಮಾಡಬಾರದು ಎನ್ನುವುದನ್ನು ಎತ್ತಿ ತೋರಿಸುತ್ತದೆ. ಪ್ರಾಮಾಣಿಕೆ, ಯಾರ ಹಂಗಿಲ್ಲದೆ ಬದುಕಬೇಕು ಎನ್ನುವ ಛಲ ಯಾರಿಗಾದ್ರೂ ಸ್ಫೂರ್ತಿಯೇ ಸೈ.
ಈ ಕಾದಂಬರಿ ಓದಿದಾಗ ಬಾರೀ ಉದ್ದ ಅನಿಸುತ್ತೆ. ಸಿಕ್ಕಾಪಟ್ಟೆ ಎಳೆದಂಗು ಅನಿಸುತ್ತೆ. ಮತ್ತೆಮತ್ತೆ ಬೋರೂ ಅನಿಸುತ್ತೆ. ಆದ್ರೂ ಇದು ಇಷ್ಟು ವರ್ಷ ಆದ್ರೂ ಕನ್ನಡದ ಕ್ಲಾಸಿಕ್ ಪಟ್ಟಿಯಲ್ಲಿ ಸೇರಿದೆ ಅನ್ನೋದಕ್ಕೆ ಬೇಕಾದಷ್ಟು ಕಾರಣಗಳಿವೆ. ಮೂರು ತಲೆಮಾರುಗಳ ಕತೆಯನ್ನ ಈ ಕಾದಂಬರಿ ಹೇಳೋದರಿಂದ ಹಾಗೆಲ್ಲ ಅನಿಸೋದು ಸಾಮಾನ್ಯ. ಸ್ವಲ್ಪ ತಾಳ್ಮೆ, ಸಂಯಮ, ಮುಂತಾದವನೆಲ್ಲ ಕೇಳೋದು ಹೌದು. ನಾನೇ ಇದನ್ನ ನಾಲ್ಕನೇ ಸಲ ಓದ್ತಾ ಇರೋದು. ಕಾಲ ಕಾಲದಲ್ಲಿ ಆಗುತ್ತ ಬರೋ ಬದುಕು, ಶೈಲಿ, ನಡವಳಿಕೆ, ಹವ್ಯಾಸ, ವಾತಾವರಣಗಳ ಬದಲಾವಣೆ ಈ ಕಾದಂಬರಿಯ ಮೂರು ತಲೆಮಾರಿನಲ್ಲಿ ಕಾಣಿಸಿಕೊಳ್ಳುತ್ತೆ. ಕೊನೆಯ ತಲೆಮಾರಿನ ಹೋರಾಟ, ಚಳುವಳಿಗಳು ಸಹ ಮುಖ್ಯವಾಗಿ ಕಾಣುತ್ತೆ. ಆ ಕಾಲದ ಪರಿಸ್ಥಿತಿ, ಸ್ಥಿತಿಗತಿ, ಏರಿಳಿತ, ಕುಟುಂಬ ವ್ಯವಸ್ಥೆ, ಪದ್ಧತಿ, ಬದುಕುಗಳನ್ನೆಲ್ಲ ಕೊಟ್ಟಿರೋದು ಈ ಕಾದಂಬರಿಯನ್ನ ಕೆಲವೊಮ್ಮೆ ಕಣ್ಣಿಗೆ ಕಟ್ಟುವಂತೆ ಮಾಡುತ್ತೆ. ರಾಮ ಸತ್ಯಾಗ್ರಹಕ್ಕೆ ಸೇರವುದು, ಮತ್ತೆ ಮನೆಗೆ ಬರೋದು, ಐತಾಳರ ಎರಡೆರಡು ಮದುವೆ ಮುಂತಾದವುಗಳೆಲ್ಲ ನಡೆಯೋದರಿಂದ ಕಾದಂಬರಿ ಸಿಕ್ಕಾಪಟ್ಟೆ ಉದ್ದ ಆಯ್ತು ಅನಿಸಬಹುದು. ಆದ್ರೆ ನಿಮಗೆ ಆಕಾಲದ ಬದುಕು ಹೇಗಿತ್ತು ಅನ್ನೋ ಕೆಟ್ಟ ಕುತೂಹಲ ಇದ್ದರೆ ಈ ಕಾದಂಬರಿ ನಿಮಗೊಂದು ತೃಪ್ತಿ ನೀಡೋದು ಖಂಡಿತ. ಕರಾವಳಿಯ ಕೋಡಿಯ ಸುತ್ತಮುತ್ತ ಕಾದಂಬರಿ ನಡೆಯೋದರಿಂದ ಕೆಲವೊಂದು ಮಾತು, ಪದಗಳೆಲ್ಲ ಅರ್ಥ ಆಗದೆ ಇರಬಹುದು. ಆದರೂ ಓದಬಹುದು.
ಮಲೆನಾಡಿನ ಸೊಬಗು ಮತ್ತು ಕಡಲಿನ ರಮಣೀಯ ಸೌಂದರ್ಯದ ಜೊತೆಗೆ ಮೂರು ತಲೆಮಾರಿನವರೆಗೂ ಸಾಗುವ ಕಥೆ. ರಾಮ ಐತಾಳರ ಮದುವೆಯ ದಿನದಿಂದ ಮೊಮ್ಮಗನ ಮದುವೆಗೆ ಸಿದ್ಧತೆ ನೆಡೆಸುವವರೆಗು ಸುದೀರ್ಘವಾಗಿ ಕಥೆ ಸಾಗುತ್ತದೆ. ಈ ಸುದೀರ್ಘ ಪ್ರಯಾಣದಲ್ಲಿ ಹಲವಾರು ಪಾತ್ರಗಳು, ಸನ್ನಿವೇಶಗಳು, ಸಂದರ್ಭಕ್ಕೆ ತಕ್ಕಂತೆ ಬದಲಾಗುವ ವ್ಯಕ್ತಿತ್ವಗಳು, ಬೇರೆ ಬೇರೆ ಸ್ಥಳಗಳು ಅಲ್ಲಿನ ವಿಶೇಷತೆ ಹೀಗೆ ಹಲವಾರು ವಿಭಿನ್ನ ರೀತಿಯ ಅಂಶಗಳು ಕಡಲಿನ ದಡದಲ್ಲಿ ಸಿಗುವ ಕಪ್ಪೆ ಚಿಪ್ಪುಗಳಂತೆ ಸಿಗುತ್ತಾ ಹೋಗುತ್ತವೆ.
ಕೆಲವೊಂದು ಪಾತ್ರಗಳಂತೂ ಮನಸ್ಸನ್ನು ಹಿಂಡಿ ಸುಧಾರಿಸಿಕೊಳ್ಳಲು ಕೆಲ ದಿನಗಳೇ ಬೇಕೆಂಬಂತೆ ಘಾಸಿ ಪಡಿಸುತ್ತವೆ ( ಸರಸೋತಿ, ಪಾರೋತಿ, ನಾಗವೇಣಿ, ರಾಮ).
ಒಬ್ಬ ವ್ಯಕ್ತಿಯ ದುಶ್ಚಟದಿಂದ, ತಪ್ಪು ನಡತೆಯಿಂದ, ಬೇಜವಾಬ್ದಾರಿಯಿಂದ ಹೇಗೆ ಒಂದು ಸಂತತಿಯೇ ದುಃಖದ ಕಡಲಲ್ಲಿ ಮುಳುಗುವಂತೆ ಮಾಡುತ್ತದೆಯೋ ಹಾಗೇಯೇ ಒಬ್ಬ ವ್ಯಕ್ತಿಯ ಸ್ವಾಭಿಮಾನ, ಸನ್ಮಾರ್ಗದ ನಡೆಯಿಂದ ಮತ್ತೆ ಆ ಕುಟುಂಬದ ಪರಮ ವೈಭವವನ್ನು ಮರಳಿ ಪಡೆಯಬಹುದು ಎಂಬುದು ಸೂಕ್ಷ್ಮವಾಗಿ ಕಾರಂತರು ಕಟ್ಟಿಕೊಟ್ಟಿದ್ದಾರೆ..
ಜೀವನದ ಸುಖ ಸಂತೋಷ, ನೋವು, ಅವಮಾನ, ದುಃಖ, ಸಾಧನೆ, ದ್ವೇಷ, ಅಸೂಯೆ ಯಲ್ಲವನ್ನು ಅನುಭವಿಸಿ ಕೊನೆಯಲ್ಲಿ ಸೇರುವುದೆಲ್ಲಿಗೆ ಮಣ್ಣಿಗೆ! ಮರಳಿ ಮಣ್ಣಿಗೆ
ಒಮ್ಮೆಯಾದರೂ ಓದಲೇ ಬೇಕಾದ ಕಥೆ ಇದು. ನಮ್ಮ ಮಣ್ಣಿನ ಸುವಾಸನೆ ಎಲ್ಲೇ ಹೋದರೂ ದೊರಕದು. ಕಾರಂತರ ಕಾದಂಬರಿಗಳು ಹೀಗೆಯೇ ಅನ್ನಿ. ದೇಶ ಸುತ್ತಿ, ಎಲ್ಲಾ ಅನುಭವಿಸಿ, ಕೊನೆಗೆ ನಮ್ಮ ಮನೆಯೇ ಸರಿ ಎನ್ನುವಂತಹ ಕತೆಗಾರರು. ಅದು ಅವರ ಹಲವು ಕಾದಂಬರಿಗಳಲ್ಲಿ ಕಾಣಸಿಗುವ ಅಂಶ. ಇಲ್ಲಿಯೂ ಅಷ್ಟೆಯೇ. ಮೂರು ತಲೆಗಳ ಮಣ್ಣು ನಮ್ಮನ್ನು ಎಷ್ಟು ಆಕರ್ಷಿಸಿದವು ಎಂದರೆ, ಅದನ್ನು ವಿವರಿಸುವುದಾದರು ಹೇಗೆ. ಅಲ್ಲಿನ ಕಥೆಯನ್ನು ಓದುತ್ತಾ ಓದ ಹಾಗೆ ನಮ್ಮ ಮಾತೆ ನಿಲ್ಲುವುದು. ಓದುವ ಗಂಟಲಲ್ಲೇನೋ ಸಂಕಟ. ಸಾಕು ನಿಲ್ಲಿಸು ಎನಿಸುವುದು. ಅಂಥಹ ಸಂದರ್ಭಗಳನ್ನು ದಾಟಿ, ಮುಂದೆ ಸುಖದ ಒಂದು ಸನ್ನಿವೇಶ ಬಂದೊಡನೆ ಗೊತ್ತಿಲ್ಲದೆಯೇ ಆನಂದಭಾಷ್ಪ ಸುರಿಯುವುದು.